ಬೆಂಗಳೂರು : 40 ಕೋಟಿ ರು. ಮೌಲ್ಯದ ನಿವೇಶನ ತೆರವು

By Kannadaprabha NewsFirst Published Jan 23, 2020, 7:22 AM IST
Highlights

ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರು [ಜ.23]:  ನಗರದ ನಾಗರಬಾವಿಯಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಅಂದಾಜು 40 ಕೋಟಿ ರು. ಮೌಲ್ಯದ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದೆ. 

ಬಿಡಿಎ ಒಡೆತನದ ನಾಗರಬಾವಿ ಗ್ರಾಮದ ಸರ್ವೆ ನಂ.120ರಲ್ಲಿನ 24 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು.

ಬೆಂಗಳೂರಿನಲ್ಲಿ ಸರ್ಕಾರದಿಂದ ಬಡವರಿಗೆ ಮನೆ : ಶೀಘ್ರ ಚಾಲನೆ...

ಬಿಡಿಎ ಜಾಗೃತ ದಳದ ಪೊಲೀಸ್‌ ಅಧೀಕ್ಷಕ ಡಾ.ಶಿವಕುಮಾರ್‌ ಮತ್ತು ಸಿಬ್ಬಂದಿ ಹಾಗೂ ಇಂಜಿನಿಯರ್‌ ಶಿವಕುಮಾರ್‌ ಮತ್ತು ತಂಡ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ. ಈ ನಿವೇಶನದ ಒಟ್ಟು ಮೌಲ್ಯ 40 ಕೋಟಿ ರು. ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!