'ಜಮೀರ್ ಅಹಮದ್ ಗೆ ಚಾಕು ಹಾಕುತ್ತಾರೆನ್ನುವ ಭಯ ಎದುರಾಗಿದೆ'

Kannadaprabha News   | Asianet News
Published : Jan 22, 2020, 03:24 PM IST
'ಜಮೀರ್ ಅಹಮದ್ ಗೆ ಚಾಕು ಹಾಕುತ್ತಾರೆನ್ನುವ ಭಯ ಎದುರಾಗಿದೆ'

ಸಾರಾಂಶ

ತನ್ವೀರ್ ಸೇಠ್‌ಗೆ ಚಾಕು ಹಾಕಿರುವ ಎಸ್‌ಡಿಪಿಐ ಕಾರ್ಯಕರ್ತರು ತಮಗೂ  ಚಾಕು ಹಾಕುತ್ತಾರೆ ಎನ್ನುವ ಭಯ ಜಮೀರ್ ಅಹಮದ್ ಅವರಿಗೆ ಎದುರಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಶಿರಸಿ [ಜ.22]:  ತನ್ವೀರ್ ಸೇಠ್‌ಗೆ ಚಾಕು ಹಾಕಿರುವ ಎಸ್‌ಡಿಪಿಐ ಕಾರ್ಯಕರ್ತರು ತಮಗೆಲ್ಲಿ ಚಾಕು ಹಾಕುತ್ತಾರೊ ಎಂಬ ಭಯದಿಂದ ಜಮೀರ್ ಅಹ್ಮದ್ ಆರ್‌ಎಸ್‌ಎಸ್ ನಿಷೇಧಿಸುವ ಹೇಳಿಕೆ ನೀಡಿದ್ದಾರೆ. ಆದರೆ ಆರ್‌ಎಸ್‌ಎಸ್, ಬಜರಂಗದಳ ದೇಶದಲ್ಲಿ ಶಾಂತಿ ಕಾಪಾಡಲು, ರಾಷ್ಟ್ರ ಭಕ್ತರನ್ನು ನಿರ್ಮಿಸಲು ಸಹಕಾರಿಯಾಗಿದೆ ಎಂಬುದು ಮುಸ್ಲಿಮರೂ ಸೇರಿ ಜಮೀರ್ ಅಹ್ಮದ್ ಅವರಿಗೂ ತಿಳಿದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಕಾಲದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲಾಗಿಲ್ಲ. ಇಡೀ ಬಿಜೆಪಿ ರಾಜ್ಯದಲ್ಲಿ ಗಲಭೆಯೆಬ್ಬಿಸುವ ಗೂಂಡಾಗಳನ್ನು, ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ ವರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತ ಶಾಂತಿ ಸ್ಥಾಪನೆ ಮಾಡುತ್ತಿದೆ. ಇದನ್ನು ಸಹಿಸಲಾಗದ ಕುಮಾರ ಸ್ವಾಮಿ ಮಂಗಳೂರು ಗಲಭೆ ವಿಚಾರ, ಬಾಂಬ್ ಪ್ರಕರಣಕ್ಕೆ ಸಲ್ಲದ ಬಣ್ಣ ಬಳಿಯುತ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕುಮಾರಸ್ವಾಮಿಯವರ ಹೇಳಿಕೆ ಗಳನ್ನು ಬಿಜೆಪಿ ಎಂದಿಗೂ ಲೆಕ್ಕಕ್ಕೆ ಇಟ್ಟುಕೊಳ್ಳುವದಿಲ್ಲ ಎಂದು ಈಶ್ವರಪ್ಪ ಹೇಳಿದರು. 

ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ನಾವೆಲ್ಲಾ ಒಂದಾಗೋಣ : ಈಶ್ವರಪ್ಪ...

ರಾಜ್ಯದಲ್ಲಿ ಗೋಹತ್ಯೆ ತಡೆಯುವ  ನಿಟ್ಟಿನಲ್ಲಿ ಶ್ರಮವಹಿಸಿದ ಹಿಂದೂಗಳ ಮೇಲೆ ಅನಗತ್ಯ ಪ್ರಕರಣ ದಾಖಲಿಸಾಯಿತು. ಹಿಂದೂಗಳ ಹತ್ಯೆ ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಕೋಮುವಾದಿಗಳೆಂಬ ಹಣೆಪಟ್ಟಿ ಕಟ್ಟಲಾಯಿತು. ಇಂತಹ ಪ್ರಕರಣಗಳ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಯಿಂದ ಕೇಳಿ ಪಡೆದಿದ್ದೇವೆ. ಪ್ರಕರಣಗಳ ಸಂಗ್ರಹಣೆ ನಂತರ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಿದೆ ಎಂದರು ಈಶ್ವರಪ್ಪ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!