BBMP ವಾರ್ಡ್‌ವಾರು ತೆರಿಗೆ ಪಾವತಿ ಪರಿಶೀಲನೆ, ವ್ಯತ್ಯಾಸವಿದ್ದರೆ ದಂಡ

By Kannadaprabha News  |  First Published Aug 27, 2022, 8:58 AM IST

ವಾರ್ಡ್‌ವಾರು ತೆರಿಗೆ ಪಾವತಿ ಪರಿಶೀಲನೆ. ಹೆಚ್ಚು ತೆರಿಗೆ ಸಂಗ್ರಹವಾಗುವ ವಾರ್ಡಿನ ಕಟ್ಟಡ ಪರಿಶೀಲನೆ. ವ್ಯತ್ಯಾಸವಿದ್ದರೆ ದಂಡ ಎಂದ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ.


ಬೆಂಗಳೂರು (ಆ.27): ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸುವ ಉದ್ದೇಶಿದಿಂದ ಬಿಬಿಎಂಪಿಯ ಎಂಟು ವಲಯಗಳಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗುವ ಒಂದೊಂದು ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ.ಆರ್‌.ಎಲ್‌.ದೀಪಕ್‌ ತಿಳಿಸಿದರು. ಶುಕ್ರವಾರ ಈ ಕುರಿತು ವಿವರ ನೀಡಿದ ಅವರು, ಕೋರಮಂಗಲ, ಬೊಮ್ಮನಹಳ್ಳಿ, ಮಹದೇವಪುರ, ಗಾಂಧಿನಗರ ಸೇರಿ ಇನ್ನಿತರ 8 ವಾರ್ಡ್‌ಗಳಲ್ಲಿ ತೆರಿಗೆ ಸಂಗ್ರಹ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ವಾರ್ಡ್‌ನ ಪ್ರತಿ ರಸ್ತೆಯಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಬಿಬಿಎಂಪಿಗೆ ನಿಜವಾದ ಮಾಹಿತಿ ನೀಡಿ ತೆರಿಗೆ ಪಾವತಿಸುತ್ತಿದ್ದಾರೆಯೇ ಎಂಬುದರ ಮಾಹಿತಿ ಪಡೆಯಲಾಗುತ್ತದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದರೆ ದಂಡ ಸಹಿತ ವ್ಯತ್ಯಾಸದ ತೆರಿಗೆ ಮೊತ್ತ ವಸೂಲಿ ಮಾಡಲಾಗುತ್ತದೆ ಎಂದರು. ಇಬ್ಬರು ಹೆಚ್ಚುವರಿ ಆಯುಕ್ತರಿಗೆ ತಲಾ ಒಂದೊಂದು ತಂಡದ ಜವಾಬ್ದಾರಿ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ ಸಹಾಯಕ ಆಯುಕ್ತರು, ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ತೆರಿಗೆ ನಿರೀಕ್ಷಕರು ಇರಲಿದ್ದಾರೆ. ಈ ತಂಡವು ಪರಿಶೀಲನೆ ನಡೆಸಿ ಒಂದು ತಿಂಗಳ ಅವಧಿಯಲ್ಲಿ ವರದಿ ನೀಡುವುದಕ್ಕೆ ಸೂಚನೆ ನೀಡಲಾಗಿದೆ ಎಂದು ದೀಪಕ್‌ ಮಾಹಿತಿ ನೀಡಿದರು.

ಇನ್ನು ಈಗಾಗಲೇ ಬೆಸ್ಕಾಂನಿಂದ ಪಡೆದ ವಿದ್ಯುತ್‌ ಸಂಪರ್ಕ, ಜಿಎಸ್‌ಟಿ ಸಂಖ್ಯೆಯನ್ನಾಧರಿಸಿ ಆಸ್ತಿ ವಿಸ್ತೀರ್ಣ ಸೇರಿ ಇನ್ನಿತರ ತಪ್ಪು ಮಾಹಿತಿ ನೀಡಿದ ಆಸ್ತಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಹಿತಿ ನೀಡಿದ ಆಸ್ತಿಗಳು ಪತ್ತೆಯಾದ ಕೂಡಲೆ ಅವರನ್ನು ಸಂಪರ್ಕಿಸಿ ವ್ಯತ್ಯಾಸವಿರುವ ತೆರಿಗೆ ಮೊತ್ತ ಸಂಗ್ರಹಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿ .4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಇದೆ. ಈಗಾಗಲೆ .2,500 ಕೋಟಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಅದನ್ನು ಇನ್ನಷ್ಟುಹೆಚ್ಚಿಸುವ ಸಲುವಾಗಿ ಹೆಚ್ಚಿನ ತೆರಿಗೆ ಸಂಗ್ರಹವಾಗುವ ವಾರ್ಡ್‌ಗಳಲ್ಲಿ ಶೇ.100 ತೆರಿಗೆ ಸಂಗ್ರಹಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

Tap to resize

Latest Videos

ವಾರ್ಡ್‌ ವಿಂಗಡಣೆ ವಿಚಾರಣೆ ಮತ್ತೆ ಹೈಕೋರ್ಚ್‌ ಅಂಗಳಕ್ಕೆ
ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್‌ ವಿಂಗಡನೆ ಹಾಗು ಮೀಸಲಾತಿ ಕುರಿತಾದ ಅರ್ಜಿಗಳ ವಿಚಾರಣೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಹಾಗು ಅಧಿಕಾರ ರಾಜ್ಯ ಹೈಕೋರ್ಚ್‌ಗಿದೆ ಎಂದು ಸುಪ್ರೀಂಕೋರ್ಚ್‌ ಹೇಳಿದೆ.

ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್‌..!

ಈ ಕುರಿತು ಕೆಲ ಮಾಜಿ ಕಾರ್ಪೊರೇಟರ್‌ಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಅಬ್ದುಲ… ನಜೀರ್‌ ಹಾಗು ನ್ಯಾ.ಮಹೇಶ್ವರಿ ನೇತೃತ್ವದ ದ್ವಿಸದಸ್ಯ ಪೀಠ, ವಾರ್ಡ್‌ಗಳ ಪುರ್ನ ವಿಂಗಡನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಚ್‌ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ಹೊಂದಿದೆ ಎಂದರು. ವಿಚಾರಣೆ ಬಳಿಕ ಚುನಾವಣೆ ಬಗ್ಗೆಯೂ ಹೈಕೋರ್ಚ್‌ ನಿರ್ಧರಿಸಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ.

ಬೆಂಗಳೂರು: ಸುಪ್ರೀಂನಲ್ಲೇ ವಾರ್ಡ್‌ ವಿಂಗಡಣೆ ಬಗ್ಗೆ ಸ್ಪಷ್ಟನೆ ಪಡೆಯಿರಿ, ಹೈಕೋರ್ಟ್‌

ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿರುವ ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜು ಅವರ ಮೂಲ ಪ್ರಕರಣವನ್ನು ಹಾಗೇ ಉಳಿಸಿಕೊಂಡಿದ್ದು, ಎಂಟು ವಾರಗಳ ಬಳಿಕ ಪಟ್ಟಿಮಾಡಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಅಂದು ಕೋರ್ಚ್‌ ಗಮನಕ್ಕೆ ತರಬಹುದು ಎಂದು ಪೀಠ ಹೇಳಿತು. ವಾರ್ಡ್‌ ಪುನರ್‌ ವಿಂಗಡನೆ, ಮೀಸಲಾತಿ ಪ್ರಶ್ನಿಸಿ ಹಲವು ಮಾಜಿ ಕಾರ್ಪೊರೇಟರಗಳು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆ ವೇಳೆ ಪ್ರಕರಣ ಸುಪ್ರೀಂಕೋರ್ಚ್‌ನಲ್ಲಿದ್ದ ಕಾರಣ ವಿಚಾರಣೆ ನಡೆಸಲು ಸುಪ್ರೀಂಕೋರ್ಚ್‌ ಅನುಮತಿ ಬೇಕು ಎಂದು ಹೈಕೋರ್ಚ್‌ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅರ್ಜಿದಾರರು ಸುಪ್ರೀಂಕೋರ್ಚ್‌ ಮೊರೆಹೋಗಿದ್ದರು.

click me!