ಮತ್ತೆ ಮುಂದೂಡಿಕೆಯಾಯ್ತು ಚುನಾವಣೆ : ಯಾವಾಗ ನಡೆಯುತ್ತೆ?

Suvarna News   | Asianet News
Published : Dec 30, 2019, 12:05 PM IST
ಮತ್ತೆ ಮುಂದೂಡಿಕೆಯಾಯ್ತು ಚುನಾವಣೆ  : ಯಾವಾಗ ನಡೆಯುತ್ತೆ?

ಸಾರಾಂಶ

ಇದೇ ತಿಂಗಳು ನಡೆಯಬೇಕಿದ್ದ ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ. ಇದೀಗ ಎರಡನೇ ಬಾರಿ ಚುನಾವಣೆ ಮುಂದೆ ಹೋದಂತಾಗಿದೆ. 

ಬೆಂಗಳೂರು [ಡಿ.30]:  ಡಿಸೆಂಬರ್ 30 ರಂದು ನಿಗದಿಯಾಗಿದ್ದ ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ. ಇದೀಗ ಎರಡನೇ ಬಾರಿ ಚುನಾವಣೆ ಮುಂದೂಡಿಕೆಯಾದಂತಾಗಿದೆ. 

ಪೇಜಾವರ ಶ್ರೀಗಳ ಅಗಲಿಕೆ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಯಾರು ಭಾಗವಹಿಸಿಲ್ಲ. ಈ ನಿಟ್ಟಿನಲ್ಲಿ ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೇಳಿದ್ದಾರೆ. 

ಪೇಜಾವರ ಶ್ರೀಗಳು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 3 ದಿನ‌ ಶೋಕಾಚರಣೆ ಇದೆ. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಸ್ವಯಂ ಪ್ರೇರಿತರಾಗಿ ಚುನಾವಣೆಗೆ ಬಂದಿಲ್ಲ ಎಂದು ಮುನೀಂದ್ರ ಕುಮಾರ್ ಹೇಳಿದ್ದಾರೆ. 

ಕಳೆದ ಬಾರಿ ರಾಜ್ಯದಲ್ಲಿ ಉಪ ಚುನಾವಣೆ ಇದ್ದ ಹಿನ್ನೆಲೆಯಲ್ಲಿ  ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ ಯಾರು ಭಾಗವಹಿಸಲಿಲ್ಲ. ಈ ಬಾರಿಯೂ ಮತ್ತೆ ಚುನಾವಣೆ ಮುಂದೂಡಿಕೆಯಾಗಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಚುನಾವಣೆಗೆ ಭಾನುವಾರ ನಾಮಪತ್ರ ಸಲ್ಲಿಕೆಯಾಗಬೇಕಿತ್ತು. ಆದರೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದಿದ್ದಾರೆ. 

ಈ ಹಿಂದೆ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಕೂಡ ಸ್ಥಾಯಿ ಸಮಿತಿಗೆ ಚುನಾವಣೆ ನಿಗದಿ ಮಾಡಲಾಗಿತ್ತು. ಆದರೆ ಅಂದೂ ಕೂಡ ಯಾವುದೇ ಸದಸ್ಯರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಡಿಸೆಂಬರ್ 30ಕ್ಕೆ ನಿಗದಿಯಾಗಿತ್ತು. ಆದರೆ ಈಗಲೂ ಚುನಾವಣೆ ಮುಂದೂಡಲಾಗಿದೆ.

PREV
click me!

Recommended Stories

ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!
ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ