ಮತ್ತೊಂದಿಷ್ಟು ಮಂದಿ ಬಿಜೆಪಿಯತ್ತ : ಸುಳಿವು ನೀಡಿದ ಶಾಸಕ

Suvarna News   | Asianet News
Published : Dec 30, 2019, 11:25 AM IST
ಮತ್ತೊಂದಿಷ್ಟು ಮಂದಿ ಬಿಜೆಪಿಯತ್ತ : ಸುಳಿವು ನೀಡಿದ ಶಾಸಕ

ಸಾರಾಂಶ

ಶೀಘ್ರದಲ್ಲೇ ಇನ್ನೊಂದಷ್ಟು ಮಂದಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಹೀಗೆಂದು ಶಾಸಕರೋರ್ವರು ಸುಳಿವು ನೀಡಿದ್ದಾರೆ. ಉಪ ಚುನಾವಣೆ ನಡೆದ ಕೆಲ ದಿನಗಳಲ್ಲೇ ಬಿಜೆಪಿ ಶಾಸಕ ಈ ಹೇಳಿಕೆ ನೀಡಿದ್ದಾರೆ. 

ಬೆಳಗಾವಿ [ಡಿ.30]: ರಾಜ್ಯದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ವಲಸೆ ಹೋಗಿದ್ದ 12 ಮಂದಿಯೂ ಗೆಲುವು ಸಾಧಿಸಿದ್ದು ಇದರ ಬೆನ್ನಲ್ಲೇ ಇನ್ನೊಂದಿಷ್ಟು ಮಂದಿ ಬಿಜೆಪಿಗೆ ಬರುತ್ತಾರೆಂದು ಸುಳಿವು ನೀಡಲಾಗಿದೆ. 

ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಈಗಾಗಲೇ 17 ಮಂದಿ ಬಿಜೆಪಿಗೆ ಬಂದಿದ್ದಾರೆ. ಇನ್ನೂ 17 ಮಂದಿ ಬಿಜೆಪಿ ಬರುತ್ತಾರೆ ಎಂದು ಹೇಳಿದ್ದಾರೆ. 

ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರವಾದ ಬೆಳಗಾವಿ ಗ್ರಾಮೀಣದ ನಾವಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಇನ್ನೂ ಹೆಚ್ಚು ಮಂದಿ ಬಿಜೆಪಿಗೆ ಬರುವ ಸೂಚನೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿಗರೆಲ್ಲಾ ಒಂದಾಗಬೇಕು. ಇಲ್ಲದಿದ್ದರೆ ನಿಮ್ಮ ವಿಷಯದಲ್ಲಿ ಬರುವುದಿಲ್ಲ. ನಾನು ನಿಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದಾದಲ್ಲಿ ಮೊದಲು ಒಂದಾಗಿರಿ ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡರಾಗಿದ್ದ ರಮೇಶ್ ಜಾರಕಿಹೊಳಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದು ಬಳಿಕ ಸಂಪುಟದ ಕೈ ಬಿಟ್ಟಾಗ ಅಸಮಾಧಾನಗೊಂಡು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಈ ನಿಟ್ಟಿನಲ್ಲಿ ಗೋಕಾಕ್ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಇದೀಗ ಇನ್ನಷ್ಟು ಮಂದಿ ಬಿಜೆಪಿ ಸೇರುತ್ತಾರೆನ್ನುವ ಸುಳಿವು ನೀಡಿದ್ದಾರೆ. 

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!