ಯಾದಗಿರಿ: ರೈಲಿನಲ್ಲಿ ಸೀಟ್‌ಗಾಗಿ ಕಿರಿಕ್ ತೆಗೆದ ವ್ಯಕ್ತಿಗೆ ಬಿದ್ವು ಚಪ್ಪಲಿ ಏಟು!

Suvarna News   | Asianet News
Published : Dec 30, 2019, 12:01 PM IST
ಯಾದಗಿರಿ: ರೈಲಿನಲ್ಲಿ ಸೀಟ್‌ಗಾಗಿ ಕಿರಿಕ್ ತೆಗೆದ ವ್ಯಕ್ತಿಗೆ ಬಿದ್ವು ಚಪ್ಪಲಿ ಏಟು!

ಸಾರಾಂಶ

ರೈಲಿನಲ್ಲಿ ಸೀಟ್‌ಗಾಗಿ ಕಿರಿಕ್ ತೆಗೆಯುತ್ತಿದ್ದ ವ್ಯಕ್ತಿಗೆ ಸಹಪ್ರಯಾಣಿಕರೇ ಧರ್ಮದೇಟು| ಯಾದಗಿರಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ರೈಲಿನಲ್ಲಿ ನಡೆದ ಘಟನೆ| ಜನರಲ್ ಬೋಗಿಯಲ್ಲಿ ಫುಲ್ ಸೀಟ್‌ನಲ್ಲಿ ಮಲಗಿದ್ದ ಅನಾಮಧೇಯ ವ್ಯಕ್ತಿ| ಇದನ್ನ ಪ್ರಶ್ನಿಸಿದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿ| ಹಿಂದಿ ಭಾಷೆಯಲ್ಲಿ ‌ಸಹ ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಬೈದ ವ್ಯಕ್ತಿ|

ಯಾದಗಿರಿ(ಡಿ.30):ರೈಲಿನಲ್ಲಿ ಸೀಟ್‌ಗಾಗಿ ಕಿರಿಕ್ ತೆಗೆಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಹಪ್ರಯಾಣಿಕರೇ ಚಪ್ಪಲಿಯಿಂದ ಮನಬಂದಂತೆ ಥಳಿಸಿದ ಘಟನೆ ಯಾದಗಿರಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ರೈಲಿನಲ್ಲಿ ನಡೆದಿದೆ. 

ಜನರಲ್ ಬೋಗಿಯಲ್ಲಿ ಫುಲ್ ಸೀಟ್‌ನಲ್ಲಿ ಅನಾಮಧೇಯ ವ್ಯಕ್ತಿ ಮಲಗಿದ್ದ, ಇದನ್ನ ಪ್ರಶ್ನಿಸಿದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅನಾಮಧೇಯ ವ್ಯಕ್ತಿ ಹಿಂದಿ ಭಾಷೆಯಲ್ಲಿ ‌ಸಹ ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರಿಂದ ಬೇಸತ್ತ ಸಹಪ್ರಯಾಣಿಕರು ವ್ಯಕ್ತಿಗೆ ಧರ್ಮದೇಟು ನೀಡಿದ್ದಾರೆ. ಸಹ ಪ್ರಯಾಣಿಕರು ಮನಬಂದಂತೆ ಥಳಿಸುತ್ತಿದ್ದಂತೆ ಬೆದರಿದ  ಅನಾಮಧೇಯ ವ್ಯಕ್ತಿ ಚಚ್ಚಿಕೊಂಡು ವಿಚಿತ್ರವಾಗಿ ರಂಪಾಟ ಮಾಡಿದ್ದಾನೆ. ಪ್ರಯಾಣಿಕರು ಗೂಸಾ ನೀಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ, ಈ ವ್ಯಕ್ತಿಯ ಹೆಸರು ಮಾತ್ರ ತಿಳಿದು ಬಂದಿಲ್ಲ.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!