BBMP Election: 1 ದಿನ ಮೊದಲೇ ಅಂತಿಮ ಮತದಾರರ ಪಟ್ಟಿ ಬಿಡುಗಡೆ

By Govindaraj S  |  First Published Sep 29, 2022, 8:29 AM IST

ರಾಜ್ಯ ಚುನಾವಣಾ ಆಯೋಗ ಬುಧವಾರ ಬಿಬಿಎಂಪಿ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿದ್ದು, 41,14,383 ಪುರುಷ ಮತದಾರರು, 38,03,747 ಮಹಿಳಾ ಮತದಾರರು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,19,563 ಮತದಾರರಿದ್ದಾರೆ. 


ಬೆಂಗಳೂರು (ಸೆ.29): ರಾಜ್ಯ ಚುನಾವಣಾ ಆಯೋಗ ಬುಧವಾರ ಬಿಬಿಎಂಪಿ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿದ್ದು, 41,14,383 ಪುರುಷ ಮತದಾರರು, 38,03,747 ಮಹಿಳಾ ಮತದಾರರು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,19,563 ಮತದಾರರಿದ್ದಾರೆ. ಕರಡು ಪಟ್ಟಿಗಿಂತ ಅಂತಿಮ ಪಟ್ಟಿಯಲ್ಲಿ 11,169 ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ.

ಅಂತಿಮ ಮತದಾರ ಪಟ್ಟಿಬಿಡುಗಡೆ ವೇಳೆಗೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿದ್ದಾರೆ. ಕರಡು ಪಟ್ಟಿಯಲ್ಲಿ ಮಹಿಳಾ ಮತದಾರರ ಸಂಖ್ಯೆ 37,97,497 ಇತ್ತು. ಅಂತಿಮ ಪಟ್ಟಿಯಲ್ಲಿ 38,03,747ಕ್ಕೆ ಹೆಚ್ಚಳವಾಗಿದೆ. ಅಂದರೆ 6,250 ಮಹಿಳಾ ಮತದಾರರು ಹೆಚ್ಚುವರಿಯಾಗಿ ನೋಂದಣಿಯಾಗಿದ್ದಾರೆ.

Tap to resize

Latest Videos

Bengaluru: ಬಿಬಿಎಂಪಿ ವಾರ್ಡ್‌ ಮೀಸಲಾತಿಗೆ ಹೈಕೋರ್ಟ್‌ ಆಕ್ಷೇಪ

ಅದೇ ಪುರುಷ ಮತದಾರರ ಸಂಖ್ಯೆ 4,887 ಹಾಗೂ ಇತರ ಮತದಾರರ ಸಂಖ್ಯೆ 32 ಹೆಚ್ಚಳವಾಗಿದೆ. ಈ ಮೂಲಕ ಒಟ್ಟಾರೆ ಮತದಾರರ ಸಂಖ್ಯೆಯು 79,19,563ಕ್ಕೆ ಏರಿಕೆಯಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಅಟ್ಟೂರು ಲೇಔಟ್‌ ವಾರ್ಡ್‌ನಲ್ಲಿ 46,310 ಮತದಾರರಿದ್ದರು. ಅದೇ ಅಂತಿಮ ಪಟ್ಟಿಯಲ್ಲಿ 35,912 ಮತದಾರರಿದ್ದಾರೆ. ಅದರಲ್ಲಿ 5,404 ಪುರುಷ ಮತದಾರರು ಹಾಗೂ 4,994 ಮಹಿಳಾ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ 5 ಸಾವಿರ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಅದೇ ರೀತಿ ಕೆ.ಆರ್‌.ಪುರ ವಾರ್ಡ್‌ನಲ್ಲಿ 7,500 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಉಳಿದಂತೆ ಪೀಣ್ಯ, ಜೆಪಿ ಉದ್ಯಾನ, ನಾಗಪುರ, ಪುಲೇಶಿನಗರ ಸೇರಿ ಹಲವು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ.

ಹೈಕೋರ್ಟ್‌ ನಿರ್ದೇಶನ: ಬಿಬಿಎಂಪಿ ವಾರ್ಡ್‌ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆ.22ರಂದು ಪ್ರಕಟಿಸಬೇಕಿದ್ದ ಬಿಬಿಎಂಪಿ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು ಸೆ.29ರಂದು ಪ್ರಕಟಿಸುವುದಾಗಿ ರಾಜ್ಯ ಚುನಾವಣಾ ಆಯೋಗ ಈ ಹಿಂದೆ ತಿಳಿಸಿತ್ತು. ಆದರೆ ಬುಧವಾರ ಹೈಕೋರ್ಟ್‌ನ ವಿಚಾರಣೆ ವೇಳೆ ಮತದಾರರ ಪಟ್ಟಿ ಪ್ರಕಟಿಸುವುದಕ್ಕೂ, ಮೀಸಲಾತಿ ಕುರಿತ ಅರ್ಜಿಗಳಿಗೂ ಸಂಬಂಧವಿಲ್ಲ. ಹೀಗಾಗಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಯಾವುದೇ ತಡೆಯಿಲ್ಲ ಎಂದು ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಒಂದು ದಿನ ಮೊದಲೇ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ.

ನಮಗೆ ಬಿಬಿಎಂಪಿ ಬೇಡ, ಪ್ರತ್ಯೇಕ ಪಾಲಿಕೆ ಕೊಡಿ: ಸರ್ಕಾರಕ್ಕೆ ಐಟಿ ಕಂಪನಿಗಳ ಪತ್ರ

ಲಿಂಗ ಕರಡು ಪಟ್ಟಿ ಅಂತಿಮ ಪಟ್ಟಿ ಹೆಚ್ಚಾದ ಮತದಾರರ ಸಂಖ್ಯೆ
ಪುರುಷ 41,09,496 41,14,383 4,887
ಮಹಿಳಾ 37,97,497 38,03,747 6,250
ಇತರೆ 1,401 1,433 32
ಒಟ್ಟು 79,08,394 79,19,563 11,169

click me!