ಸಿಲಿಕಾನ್‌ ಸಿಟಿ ಬೆಂಗ್ಳೂರಲ್ಲಿ ಮತದಾನ ಜಾಗೃತಿಗೆ ಸೆಲೆಬ್ರೆಟಿಗಳ ಎಂಟ್ರಿ..!

By Girish Goudar  |  First Published Apr 1, 2023, 11:31 AM IST

ಕಳೆದ ಬಾರಿ ನಗರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮತದಾನ ನಡೆದಿತ್ತು. ಹೀಗಾಗಿ ಬೆಂಗಳೂರು ನಗರದಲ್ಲಿ ಮತದಾನ ಜಾಗೃತಿ ಮೂಡಿಸಲು ಬಿಬಿಎಂಪಿ ನಮ್ಮ ಬೆಂಗಳೂರು ಐಕಾನ್ಸ್‌ಗಳನ್ನ ನೇಮಕ ಮಾಡಿದೆ. 


ಬೆಂಗಳೂರು(ಏ.01): ಎಲೆಕ್ಷನ್ ಡೇಟ್ ಫಿಕ್ಸ್ ಆಗ್ತಿದಂತೆ ಸ್ಟಾರ್ ಕ್ಯಾಂಪೇನ್‌ಗೆ ಬಿಬಿಎಂಪಿ ಮುಂದಾಗಿದೆ. ಈ ಬಾರಿ ನಗರದಲ್ಲಿ ಅತಿ ಹೆಚ್ಚು ಓಟಿಂಗ್ ಆಗಬೇಕೆಂದು ಬಿಬಿಎಂಪಿಯಿಂದ ವಿಶೇಷ ಕ್ಯಾಂಪೇನ್ ಮಾಡಲು ಮುಂದಾಗಿದೆ. ಕಳೆದ ಬಾರಿ ನಗರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮತದಾನ ನಡೆದಿತ್ತು. ಹೀಗಾಗಿ ಬೆಂಗಳೂರು ನಗರದಲ್ಲಿ ಮತದಾನ ಜಾಗೃತಿ ಮೂಡಿಸಲು ನಮ್ಮ ಬೆಂಗಳೂರು ಐಕಾನ್ಸ್‌ಗಳನ್ನ ನೇಮಕ ಮಾಡಿದೆ. 

ಸೆಲೆಬ್ರಿಟಿಗನ್ನ ಬಳಸಿಕೊಂಡು ಮತದಾನ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಪ್ಲಾನ್‌ ಮಾಡಿಕೊಂಡಿದೆ. ‌ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮತದಾನ ನಡೆದಿತ್ತು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿತ್ತು. 

Tap to resize

Latest Videos

ಕೊಡಗು: ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ

ನಮ್ಮ ಬೆಂಗಳೂರು ಐಕಾನ್ಸ್ ಯಾರು?

ಅನುಪ್ ಶ್ರೀಧರ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್(ಅರ್ಜುನ ಪ್ರಶಸ್ತಿ ವಿಜೇತರು), 
ಶರತ್ ಎಂ. ಗಾಯಕ್ವಾಡ್, ಅಂತಾರಾಷ್ಟ್ರೀಯ ಪ್ಯಾರಾ ಈಜುಗಾರರು
ಮೋಹನ್ ಕುಮಾರ್.ಎನ್, ಬುಡಕಟ್ಟು ಜನಾಂಗದ ಗಾಯಕರು
ಆನಂದ್.ಹೆಚ್(ಮಾಸ್ಟರ್ ಆನಂದ್) ಕನ್ನಡ ಚಿತ್ರ ಮತ್ತು ಕಿರುತೆರೆ ಕಲಾವಿದ ಮತ್ತು ನಿರೂಪಕರು

ಇನ್ನೂ ಸಿಟಿಯಲ್ಲಿ 8 ವಲಯಗಳಲ್ಲಿ ಸೈಕ್ಲಿಂಗ್, ವಾಕಥಾನ್ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಈ ಬಾರಿ ನಗರದಲ್ಲಿ 65-70% ಮತದಾನ ಗುರಿ ಇಟ್ಟುಕೊಂಡಿದೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!