BBMP New 243 Ward List ಸರಿ ಇಲ್ವಾ? ಈಗಲೇ ದೂರು ನೀಡಿ

Published : Jun 24, 2022, 10:42 AM IST
BBMP New 243 Ward List ಸರಿ ಇಲ್ವಾ?  ಈಗಲೇ ದೂರು ನೀಡಿ

ಸಾರಾಂಶ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತದ‌ ಬಿಬಿಎಂಪಿ ವಾರ್ಡ್ ಗಳಿಗೆ ಹೊಸ ನಾಮಕರಣ ಆಗಿದೆ. ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ಹೊಸ ವಾರ್ಡ್ ಗಳ ವರದಿಯ ಕರಡು ಪ್ರತಿಯಲ್ಲಿ ಇದು ವಿಶೇಷವಾಗಿ ಕಾಣುತ್ತಿದೆ.

ಬೆಂಗಳೂರು (ಜೂನ್ 24) ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (Bruhat Bengaluru Mahanagara Palike) ಇನ್ಮುಂದೆ 198 ಅಲ್ಲ 243 ವಾರ್ಡ್ ಗಳು. 243 ಹೊಸ ವಾರ್ಡ್ ರಚಿಸಿದ ಕರಡು ಪ್ರತಿಯ ಗೆಜೆಟ್ ಪ್ರಕಟಣೆ ಹೊರಬಿದ್ದಿದೆ. ಈ 243 ವಾರ್ಡ್ ಗಳ ನಕ್ಷೆ, ಚೆಕ್ ಬಂದಿ ಸಹಿತ ವಿವರವಾದ ವರದಿಯನ್ನ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ. ಈ ವಾರ್ಡ್ ಗಳ ರಚನೆ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಯನ್ನೂ ಸರ್ಕಾರ ಆಹ್ವಾನಿಸಿದೆ. 15 ದಿನದ ಒಳಗೆ ಆಕ್ಷೇಪಣೆ ಸಲ್ಲಿಸಲು ಸಹ ಸರ್ಕಾರ ಸೂಚಿಸಿದೆ.

ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ವೆಬ್ ಸೈಟ್ ನಲ್ಲಿ‌ವರದಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆಕ್ಷೇಪಣೆಗಳನ್ನು ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ದಿ‌ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು. ಇಲ್ಲಿಗೆ ಲಿಖಿತವಾಗಿ ಸಲ್ಲಿಸಬೇಕು. ಸಾರ್ವಜನಿಕರ ಆಕ್ಷೇಪಣೆಗಳನ್ನ ಪರಿಶೀಲಿಸಿದ ನಂತರ ಅಂತಿಮ ವರದಿಯನ್ನ ಸರ್ಕಾರ ಪ್ರಕಟಿಸಲಿದೆ. ಈ ಮೂಲಕ ಸುಪ್ರೀಂ ಕೋರ್ಟ್ ಸೂಚನೆಯಂತೆ ಬಿಬಿಎಂಪಿ‌ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಅಂತಿಮ ಅಧಿಸೂಚನೆ ಮುಗಿಯುತ್ತಿದ್ದಂತೆ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಗೊಳ್ಳಲಿದೆ.

ಆಘಾತ ತಂದ ಪಿ.ಯು ಫಲಿತಾಂಶ, ಚಿತ್ರದುರ್ಗದಲ್ಲಿ ಆತ್ಮಾವಲೋಕನ ಸಭೆ

ಬಿಜೆಪಿಗೆ ಅನುಕೂಲ:- ಬಿಜೆಪಿಗೆ ಅನುಕೂಲ ಆಗುವಂತೆ ವಾರ್ಡ್ ಗಳ‌ ರಚನೆಯಾಗಿದೆ‌ ಎಂಬ ಕೂಗು‌ ಕಾಂಗ್ರೆಸ್ ವಲಯದಲ್ಲಿ ಎದ್ದಿದೆ. ಬಿಜೆಪಿ ಶಾಸಕರಿರುವ‌ ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ವಾರ್ಡ್ ಗಳನ್ನ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಶಾಸಕರಿರುವ ಕಡೆ ಅಷ್ಟಾಗಿ ವಾರ್ಡ್ ಸಂಖ್ಯೆ ಹೆಚ್ಚಾಗಿಲ್ಲ. ಕಾಂಗ್ರೆಸ್ ಶಾಸಕರಿರುವ‌ ಶಿವಾಜಿನಗರ ಕ್ಷೇತ್ರದಲ್ಲಿ ವಾರ್ಡ್ ಸಂಖ್ಯೆ ಕಡಿಮೆ ಮಾಡಿದ್ದಾರೆ.

ಐತಿಹಾಸಿಕ ನಾಮಕರಣ:ರಾಜರಾಜೇಶ್ವರಿ ವಿಧಾನಸಭಾ ಕ್ಷೇತದ‌ ಬಿಬಿಎಂಪಿ ವಾರ್ಡ್ ಗಳಿಗೆ ಹೊಸ ನಾಮಕರಣ ಆಗಿದೆ. ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ಹೊಸ ವಾರ್ಡ್ ಗಳ ವರದಿಯ ಕರಡು ಪ್ರತಿಯಲ್ಲಿ ಇದು ವಿಶೇಷವಾಗಿ ಕಾಣುತ್ತಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು 9  ವಾರ್ಡ್ ಗಳಿದ್ದವು. ಈಗ ಹೊಸ ವರದಿ ಪ್ರಕಾರ ಒಟ್ಟು 14 ವಾರ್ಡ್ ಗಳಿವೆ. ಇದರಲ್ಲಿ 9 ವಾರ್ಡ್ ಗಳಿಗೆ ಇತಿಹಾಸ, ಪುರಾಣ ಪ್ರಸಿದ್ದ ಹೆಸರಗಳನ್ನು ಇಟ್ಟಿರುವುದು ವಿಶೇಷ.

ವಾರ್ಡ್ ಗಳ ಸಂಖ್ಯೆ 36 ರಿಂದ 49 ರವರೆಗೂ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಅವುಗಳ ವಿಶೇಷ‌ ಹೆಸರುಗಳು‌ ಹೀಗಿವೆ.
ವಾರ್ಡ್ ನಂ 36 - ಕನ್ನೇಶ್ವರರಾಮ, ವಾರ್ಡ್ ನಂ 37 - ವೀರಮದಕರಿ, ವಾರ್ಡ್ ನಂ 38 - ಜೆಪಿ ಪಾರ್ಕ್, ವಾರ್ಡ್ ನಂ 39 - ಚಾಣಕ್ಯ, ವಾರ್ಡ್ ನಂ 40 - ಛತ್ರಪತಿ ಶಿವಾಜಿ, ವಾರ್ಡ್ ನಂ 41 - ಪೀಣ್ಯ, ವಾರ್ಡ್ ನಂ 42 - ಲಕ್ಷ್ಮೀದೇವಿನಗರ, ವಾರ್ಡ್ ನಂ 43 - ರಣಧೀರ ಕಂಠೀರವ, ವಾರ್ಡ್ ನಂ 44 - ವೀರಸಿಂಧೂರ ಲಕ್ಷ್ಮಣ, ವಾರ್ಡ್ ನಂ 45 - ವಿಜಯನಗರ ಕೃಷ್ಣದೇವರಾಯ, ವಾರ್ಡ್ ನಂ 46 - ಸರ್ ಎಂ‌ ವಿಶ್ವೇಶ್ವರಯ್ಯ, ವಾರ್ಡ್ ನಂ 47 - ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್, ವಾರ್ಡ್ ನಂ 48 - ಜ್ಞಾನಭಾರತಿ, ವಾರ್ಡ್ ನಂ 49 - ರಾಜರಾಜೇಶ್ವರಿ ನಗರ.

ಸರ್ಕಾರಿ ಶಾಲೆಗೆ ಅಡ್ಮಿಶನ್ ಆಗಿರುವ ಟಾಪ್ ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ತರಗತಿ ಕೊಠಡಿ!

ಮಿಕ್ಕಂತೆ ಹೊಸ ವಾರ್ಡ್ ಗಳು ಇಂತಿದೆ: ಸೋಮೇಶ್ವರ (3), ಕೋಗಿಲು (6), ಅಮೃತಳ್ಳಿ (9), ಕೆಂಪಾಪುರ (10), ಕಮ್ಮಗೊಂಡನಹಳ್ಳಿ (16), ಡಿಫೆನ್ಸ್ ಕಾಲೋನಿ (19), ನೆಲಗದೇರನಹಳ್ಳಿ (23), ಹಂಡ್ರಹಳ್ಳಿ (28), ವಿದ್ಯಾಮಾನ್ಯ ನಗರ (29) , ದೊಡ್ಡಗೊಲ್ಲರಹಟ್ಟಿ (31) ), ಬಂಡೆ ಮಠ (34), ತಲಘಟ್ಟಪುರ (35), ಚೋಳನಗರ (69), ಮೋದಿ ಗಾರ್ಡನ್ (77) ಬಾಬುಸಾಬ್ ಪಾಳ್ಯ (82), ಕಲ್ಕೆರೆ (83), ತಂಬು ಚೆಟ್ಟಿ ಪಾಳ್ಯ (87), ಬೆಳತ್ತೂರು (105), ಎಇಸಿಎಸ್ ಲೇಔಟ್ (109), ಲಾಲ್ ಬಹದ್ದೂರ್ ನಗರ (118), ಹೊಸ ಬೈಯಪ್ಪನಹಳ್ಳಿ ( 119), ಹಳೆ ತಿಪ್ಪಸಂದ್ರ (121), ವೀರಭದ್ರನಗರ (163), ಆವಲಹಳ್ಳಿ (164), ದೇವರಾಜ್ ಅರಸ್ ನಗರ (169), ಆಜಾದ್ ನಗರ (170), ಅಶೋಕ ಪಿಲ್ಲರ್ (175), ಸೋಮೇಶ್ವರ ನಗರ (176), ಎನ್ ಎಸ್ ಪಾಳೆಯ (193), ತಿಲಕ್ ನಗರ (1 9 5) , ಉಮಾ ಮಹೇಶ್ವರಿ (201), ವಿಕ್ರಮ್ ನಗರ (205), ಕಾಮಕ್ಯ ನಗರ (207), ದೀನ್ ದಯಾಳು (208), ಶ್ರೀನಿವಾಸ್ ನಗರ (212), ಕನಕ ನಗರ (220), ಆರ್‌ಬಿಐ ಲೇಔಟ್ (222), ಚುಂಚಘಟ್ಟ (223), ನಾಗನಾಥಪುರ (228), ಇಬ್ಲೂರು (229), ದೇವರಚಿಕ್ಕನಹಳ್ಳಿ (236), ವಿನಾಯಕ ನಗರ (240), ಸಾರಕ್ಕಿ ಕೆರೆ (241), ಮತ್ತು ಕೂಡ್ಲು (243).

PREV
Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ