ಅನಂತ ಸ್ಮೃತಿ ವನಕ್ಕೆ ಶಂಕುಸ್ಥಾಪನೆ: ಕಣ್ಣಿನ ಆಕಾರದ ಸ್ಮಾರಕದಲ್ಲಿ 5 ವೈಶಿಷ್ಟ್ಯಗಳು

By Web DeskFirst Published Sep 30, 2019, 7:51 PM IST
Highlights

ದಿವಂಗತ ಅನಂತಕುಮಾರ್‌  ಸ್ಮೃತಿ ವನಕ್ಕೆ ಶಂಕುಸ್ಥಾಪನೆ| ಕಣ್ಣಿನ ಆಕಾರದಲ್ಲಿ ನಿರ್ಮಾಣಗೊಳ್ಳಲಿರುವ ಅನಂತಕುಮಾರ್‌ ಸ್ಮಾರಕ| ಈ ಸ್ಮಾರಕದಲ್ಲಿ 5 ವೈಶಿಷ್ಟ್ಯಗಳು.

[ಸೆ.30]: ಉತ್ತಮ ಬೆಂಗಳೂರಿಗೆ ಸದ್ದಿಲ್ಲದೆ ಅನೇಕ ಕೊಡುಗೆಗಳನ್ನು ನೀಡಿರುವ ದಿವಂಗತ ಅನಂತಕುಮಾರ್‌ ಅವರ ಆದರ್ಶ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸಿಗುವಂತೆ ಮಾಡುವ ಅನಂತ ಸ್ಮೃತಿ ವನಕ್ಕೆ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಇಂದು [ಮಂಗಳವಾರ] ಶಂಕುಸ್ಥಾಪನೆ ನೆರವೇರಿಸಿದರು.

ಅನಂತಕುಮಾರ್‌ ಅವರ ಕತೃತ್ವ – ವ್ಯಕ್ತಿತ್ವ – ನೇತೃತ್ವದ ಅಂಶಗಳನ್ನು ಬಿಂಬಿಸುವಂತಹ 5 ಕಣ್ಮಣಿಗಳನ್ನು ಹೊಂದಿರುವ ವಿಶೇಷ ಸ್ಮಾರಕ ಇದಾಗಿರಲಿದೆ. ಈ ಸ್ಮಾರಕದ ವಿನ್ಯಾಸ ಗೊಳಿಸಿರುವ ರಶ್ಮಿ ಕಿಲ್ಲೇದಾರ್‌ ಅನಂತಕುಮಾರ್‌ ಅವರ ಜೀವನದ ಬಗ್ಗೆ ವಿಸ್ತ್ರುತವಾದ ಸಂಶೋಧನೆ ನಡೆಸಿದ ಪರಿಣಾಮ ಇಂತಹದೊಂದು ವಿಶೇಷ ವಿನ್ಯಾಸದ ಸ್ಮಾರಕವನ್ನು ರಚಿಸಲು ಸಾಧ್ಯವಾಗಿದೆ.

ಗೆಳೆಯನ ನೆನೆದು ಭಾವುಕರಾದ BSY, ಅನಂತ್ ಪ್ರತಿಷ್ಠಾನಕ್ಕೆ ಚಾಲನೆ

ಬೆಂಗಳೂರಿನ ಬಗ್ಗೆ ತನ್ನದೇ ಆದ ವಿಶೇಷ ಕನಸನ್ನು ಹೊಂದಿದ್ದ ದಿವಂಗತ ಅನಂತಕುಮಾರ್‌ ಅವರನ್ನು ಬೆಂಗಳೂರಿನ ಕಣ್ಮಣಿ ಎಂದೇ ಪ್ರತಿಬಿಂಬಿಸಲಾಗುತ್ತಿರುವ ಈ ಸ್ಮಾರಕದಲ್ಲಿ ಅನಂತಕುಮಾರ್‌ ಅವರ ಜೀವನ ಚರಿತ್ರೆಯನ್ನು, ಅವರು ನಂಬಿದ ಅದರ್ಶಗಳನ್ನು ಹಾಗೂ ಮುಂದಿನ ಪೀಳಿಗೆಗೆ ನೀಡಬಯಸಿದ ಆದರ್ಶಗಳನ್ನು ಅಳವಡಿಸಿಕೊಳ್ಳಲಾಗಿದೆ ಎನ್ನುತ್ತಾರೆ ವಿನ್ಯಾಸಕಾರರಾದ ರಶ್ಮೀ ಕಿಲ್ಲೇದಾರ್.‌

 ಈ ವಿನ್ಯಾಸದ ನಿರ್ಮಾಣ ಕಾರ್ಯದಲ್ಲಿ ಮೇಯರ್‌ ಗಂಗಾಂಬಿಕಾ ಮಲ್ಲಿಕಾರ್ಜುನ ಹಾಗೂ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಪ್ರಮುಖ ಪಾತ್ರವಹಿಸಿದ್ದಾರೆ. ಈ ವಿನ್ಯಾಸ ಅನಂತಕುಮಾರ್‌ ಜೀವನದ ಪ್ರಮುಖ 5 ಅಂಶಗಳ ಕಣ್ಮಣಿಯಾಗಿ ಪ್ರತಿಬಿಂಬಿಸಲಾಗುವುದು. ಕಣ್ಣಿನ ಆಕಾರದ ಸ್ಮಾರಕ: ಈ ಸ್ಮಾರಕವನ್ನು ಕಣ್ಣಿನ ಆಕಾರದಲ್ಲಿ ನಿರ್ಮಿಸಲಾಗುವುದು. ಅರ್ಧ ವೃತ್ತಾಕಾರದ ಈ ಸ್ಮಾರಕದಲ್ಲಿ 5 ಪ್ರಮುಖ ಅಂಶಗಳನ್ನು ಅಳವಡಿಸಲಾಗುವುದು ಎಂದರು.

ಅನ್ನ ಸಾಂಬಾರ್‌ ವಿತ್‌ ಅನಂತ್ ಕುಮಾರ್‌

12 ಅಡಿ ಎತ್ತರದ ಹಿತ್ತಾಳೆಯ ಪ್ರತಿಮೆ


ಕಣ್ಣಿನ ಆಕಾರದಲ್ಲಿ ನಿರ್ಮಾಣವಾಗುವ ಈ ಸ್ಮಾರಕ ದಲ್ಲಿ ದಿವಂಗತ ಅನಂಕುಮಾರ್‌ ಅವರ 12 ಅಡಿ ಎತ್ತರದ ಹಿತ್ತಾಳೆಯ ಪ್ರತಿಮೆಯನ್ನು ಅಳವಡಿಸಲಾಗುವುದು. ಈ ಪ್ರತಿಮೆಯ ಮೇಲ್ಭಾಗದಲ್ಲಿ ಒಂದು ಛಾವಣಿ ಇರಲಿದ್ದು ಈ ಚಾವಣಿಯನ್ನು ಮರದಂತೆ ವಿನ್ಯಾಸಗೊಳಿಸಲಾಗಿದೆ  ಈ ಮೇಲ್ಚಾವಣಿ ರಾತ್ರಿಯ ಸಮಯದಲ್ಲಿ ಬೆಳಕನ್ನೂ ಬೀರಲಿದೆ. ಜನರನ್ನು ಮಂದಸ್ಮಿತರಾಗಿ ಸ್ವಾಗತಿಸುವ ಭಂಗಿಯಲ್ಲಿ ಅನಂತಕುಮಾರ್‌ ಅವರ ಪ್ರತಿಮೆ ಇರಲಿದೆ.

ಸೇವಾಗ್ನಿ: ಅನಂತ ಸೃತಿ ವನದಲ್ಲಿ ಹಿತ್ತಾಳೆಯಲ್ಲಿ ನಿರ್ಮಿಸಲಾಗುವ ಸೇವಾಗ್ನಿಯಲ್ಲಿ ಸದಾ ಉರಿಯುತ್ತಿರುವ ಬೆಂಕಿಯನ್ನು ಪ್ರತಿಷ್ಠಾಪಿಸಲಾಗುವುದು. ಈ ಸೇವಾಗ್ನಿಯ ಮುಂಭಾಗದಲ್ಲಿ ಜನರು ಸಮಾಜ ಸೇವೆಯ ಕಾರ್ಯಕ್ಕೆ ತಮ್ಮ ಅಳವಡಿಸಿಕೊಳ್ಳುವ ಬಗ್ಗೆ ಪ್ರತಿಜ್ಞೇ. ಯಾವುದೇ ಪರಿಸರ ಹಾಗೂ ಸಮಾಜಕ್ಕೆ ಹೊರೆಯಾಗುವ ವಿಷಯಗಳಿಂದ ದೂರವಾಗುವ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ.

 ಪೆಬ್ಬಲ್‌ ಸ್ಟೋನ್‌ ಗಳ ನೆಲಹಾಸು: ದಿವಂಗತ ಅನಂತಕುಮಾರ್‌ ಅವರು ಮೊದಲಿನಂದಲೂ ಭೂಮಿಯನ್ನು ಸಂಪೂರ್ಣ ಕಾಂಕ್ರೀಟ್‌ ನಿಂದ ಮುಚ್ಚುವುದಕ್ಕೆ ವಿರೋಧವ್ಯಕ್ತಪಡಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಅವರ ಸ್ಮಾರಕ ನಿರ್ಮಾಣವಾಗುತ್ತಿರುವ ಮಧ್ಯಭಾಗದಲ್ಲಿ ಪೆಬಲ್‌ ಸ್ಟೋನ್‌ಗಳ ನೆಲಹಾಸನ್ನು ನಿರ್ಮಿಲಾಗಿದೆ. ಕಲ್ಲುಗಳ ಮಧ್ಯೆ ಹುಲ್ಲು ಹಾಸು ಬೆಳೆಸುವುದು ಇದರ ಉದ್ದೇಶವಾಗಿದೆ.

 ತಳ ಮಹಡಿಯಲ್ಲಿ ಅನಂತಕುಮಾರ್‌ ಜೀವನ ಚರಿತ್ರೆ:

ಸ್ಮಾರಕದ ನೆಲಮಹಡಿಯಲ್ಲಿ ದಿವಂಗತ ಅನಂತಕುಮಾರ್‌ ಅವರ ಜೀವನದ ಪ್ರಮುಖ ಘಟ್ಟಗಳನ್ನು ಪ್ರತಿಬಿಂಬಿಸುವ ಅಂಶಗಳನ್ನು ಅಳವಡಿಸಲಾಗುವುದು. ಇಲ್ಲಿನ ಪ್ರತಿಯೊಂದು ಗೋಡೆಗಳಿಗೂ ಒಂದೊಂದು ಥೀಮ್‌ ನಲ್ಲಿ ಆಲಂಕರಿಸಲಾಗುವುದು. ಈ ಸಭಾಂಗಣದಲ್ಲಿ ಅನಂತಕುಮಾರ್‌ ಅವರ ಬಗ್ಗೆ ಕಿರುಚಿತ್ರಗಳನ್ನು ತೋರಿಸುವ ವ್ಯವಸ್ಥೆಯೂ ಆಗಲಿದೆ.

ಎಡಭಾಗದ ಗೋಡೆ: ಅನಂತಕುಮಾರ್‌ ಅವರು ಪ್ರತಿಪಾದಿಸಿದ ದೂರದರ್ಶಿತ್ವ ಹಾಗೂ ಮೌಲ್ಯಗಳನ್ನು ತೋರಿಸುವಂತಹ ವಿಚಾರಗಳನ್ನು ಅಳವಡಿಸಲಾಗುವುದು.

 2ನೇ ಗೋಡೆ: ಅವರು ಇದುವರೆಗೂ ದೇಶ ಹಾಗೂ ರಾಜ್ಯ ಅದರಲ್ಲೂ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳನ್ನು ಪ್ರದರ್ಶಿಸಲಾಗುವುದು.

 3ನೇ ಗೋಡೆ: ಅದಮ್ಯ ಚೇತನಕ್ಕಾಗಿ ಮೀಸಲಾಗಿಡಲಾಗಿದೆ. ಅನ್ನ - ಅಕ್ಷರ - ಆರೋಗ್ಯದ ಗುರಿಯ ಹಿನ್ನಲೆಯಲ್ಲಿ ಪ್ರಾರಂಭವಾದ ಅದಮ್ಯ ಚೇತನ ಸಂಸ್ಥೆಯ ಬಗ್ಗೆ ತಿಳಿಸುವ ವಿಚಾರಗಳನ್ನು ಇಲ್ಲಿ ಅಳವಡಿಸಲಾಗುವುದು.

ತೇಜಸ್ವಿನ ಅನಂತಕುಮಾರ್‌ ಸಂತಸ
 ದಿವಂಗತ ಅನಂತಕುಮಾರ್‌ ಅಜಾತ ಶತ್ರು. ಅಗಾಧ ನೆನಪಿಸ ಶಕ್ತಿಯನ್ನು ಹೊಂದಿದ್ದ ಅವರು ವರ್ಷಗಳ ಹಿಂದೆ ಸಿಕ್ಕಂತಹ ಜನರನ್ನೂ ಅವರ ಹೆಸರಿಟ್ಟು ಮಾತನಾಡಿಸುವ ಗುಣ ಹೊಂದಿದ್ದರು. ತಮ್ಮ ಭಾಷಣದಲ್ಲಿ ತಿಳು ಹಾಸ್ಯದ ಮೂಲಕ ಎಲ್ಲರನ್ನೂ ಸೆಳೆಯುವ ಕಲೆಯನ್ನು ಹೊಂದಿದ್ದರು. 

ಇಂತಹ ವಿಶಿಷ್ಟ ಗುಣಗಳೇ ಅವರಿಗೆ ಅಪಾರ ಅಭಿಮಾನಿಗಳನ್ನು ಪಡೆಯಲು ಸಾಧ್ಯವಾಗಿಸಿದ್ದು. ದೇಶ ಹಾಗೂ ರಾಜ್ಯದ ಜನಸಾಮಾನ್ಯರ ಜೀವಗಳನ್ನು ತಲುಪಿದ ಅವರ ನೆನಪಿಗೆ ಶಾಶ್ವತವಾದ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದು ಬಹಳ ಸಂತಸದ ವಿಷಯ. 

ಅದರಲ್ಲೂ ಈಗಿನ ಮೇಯರ್‌ ಆದ ಗಂಗಾಂಬಿಕಾ ಮಲ್ಲಿಕಾರ್ಜುನ ಅವರು ಬಹಳ ಆಸಕ್ತಿಯನ್ನು ತೋರಿಸಿದ್ದು, ರಶ್ಮಿ ಕಿಲ್ಲೇದಾರ್‌ ಒಳ್ಳೆಯ ವಿನ್ಯಾಸ ಮಾಡಿದ್ದಾರೆ. ಅನಂತಕುಮಾರ್‌ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದೊರೆಯುವಂತೆ ಮಾಡುತ್ತಿರುವುದು ಬಹಳ ಸಂತಸದ ವಿಷಯ ಎಂದು ಡಾ ತೇಜಸ್ವಿನ ಅನಂತಕುಮಾರ್‌ ಸಂತಸ ವ್ಯಕ್ತಪಡಿಸಿದರು.

click me!