Udupiಯಲ್ಲಿ ಇಮ್ಮಡಿ ದೇವರಾಯನ ಚಗ್ರಿಬೆಟ್ಟು ಶಾಸನ ಪತ್ತೆ

By Suvarna News  |  First Published May 29, 2022, 3:16 PM IST

 ಉಡುಪಿಯಲ್ಲಿ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ವಿಜಯನಗರ ಕಾಲದ ಸಂಗಮ ಮನೆತನದ ಇಮ್ಮಡಿ ದೇವರಾಯ ಕಾಲದ ಶಾಸನ ಎನ್ನಲಾಗಿದೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಮೇ.29): ಹಲವಾರು ಐತಿಹಾಸಿಕ (Historical) ಮಹತ್ವದ ಸ್ಥಳಗಳಿಗೆ ಸಾಕ್ಷಿಯಾಗಿರುವ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ಅಪರೂಪದ ಶಾಸನವೊಂದು (Inscription) ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಎಂಬವರು ನೀಡಿರುವ ಮಾಹಿತಿಯ ಆಧಾರದಲ್ಲಿ ನಡೆಸಲಾದ ಕ್ಷೇತ್ರಕಾರ್ಯದಿಂದ ಶಾಸನದ ವಿವರಗಳನ್ನು ಕಲೆ ಹಾಕಲಾಗಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಯಾದ ಬಿ. ಜಗದೀಶ ಶೆಟ್ಟಿಯವರ ನೇತೃತ್ವದಲ್ಲಿ ಶಾಸನದ ಪರಿಶೋಧನೆ ನಡೆಸಲಾಯಿತು.

Latest Videos

undefined

ಕೊಕ್ಕರ್ಣೆಯ ಚರ್ಗಿಬೆಟ್ಟು ಕುದಿ ಪೆಜಮಂಗೂರು ಗ್ರಾಮದ ಗಡಿಪ್ರದೇಶದಲ್ಲಿ ವಿಜಯನಗರ ಕಾಲದ ಸಂಗಮ ಮನೆತನದ ಇಮ್ಮಡಿ ದೇವರಾಯ ಕಾಲದ ಶಾಸನ ಇದು ಅನ್ನೋದು ಗೊತ್ತಾಗಿದೆ.

CET 2022ಗೆ ಅರ್ಜಿ ಸಲ್ಲಿಸಲು ಕೊನೆ ಅವಕಾಶ, 2 ದಿನ ವಿಂಡೋ ರೀ ಓಪನ್

ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಈ ಶಾಸನದ ಕೆಳಭಾಗವು ತುಂಡಾಗಿದೆ. ಎರಡು ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಈ ಶಾಸನ ಹೊಂದಿದೆ. 16 ಸಾಲುಗಳನ್ನು ಕಲ್ಲಿನ ಮೇಲೆ ಬರೆಯಲಾಗಿದೆ. ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು ಶಾಸನದ ಬಹುತೇಕ ಭಾಗಗಳು ಅಳಿಸಿ ಹೋಗಿರುತ್ತದೆ.

"ಶ್ರೀ ಗಣಾಧಿಪ ತಯೇ ನಮಹ ' ಎಂಬ ಶ್ಲೋಕ ದಿಂದ ಪ್ರಾರಂಭವಾಗುವ ಈ ಶಾಸನವು ಶಕ ವರುಷ 1364 (ಕ್ರಿ.ಶ. 1442) ರ ದುಂದುಭಿ ಸಂವತ್ಸರಕ್ಕೆ ಸೇರಿದೆ. ಈ ಸಂದರ್ಭದಲ್ಲಿ ಬಾರಕೂರು ರಾಜ್ಯವನ್ನು ಇಮ್ಮಡಿ ದೇವರಾಯನ ನಿರೂಪದಿಂದ ಮಹಾಪ್ರಧಾನ ಚಂಡರಸ ಒಡೆಯರು ಆಳ್ವಿಕೆ ನಡೆಸುತ್ತಿದ್ದರು. ಉಳಿದಂತೆ ಶಾಸನದಲ್ಲಿ ಬೊಂಮಣ, ಗೋವಿಂದ ಸೆಟ್ಟಿ ,ಶಂಕರನಾರಾಯಣ , ಕುದು ಎಂಬ ಹೆಸರುಗಳ ಉಲ್ಲೇಖ ಕಂಡುಬರುತ್ತದೆ. 

ಕುಂದಾಪುರ ಭಾಗದ ಪ್ರಖ್ಯಾತ ಶಂಕರನಾರಾಯಣ ದೇವರಿಗೆ ಕೊಟ್ಟಂತಹ ದಾನಶಾಸನ ಇದು ಆಗಿರಬಹುದೆಂದು ಡಾ. ಬಿ. ಜಗದೀಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

NEET 2022; ಡಿಎಂಕೆ ವಿರೋಧದ ನಡುವೆಯೂ Tamil Nadu ಟಾಪ್ 3!

ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೃತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ. ಕ್ಷೇತ್ರ ಕಾರ್ಯಶೋಧನೆಗೆ ಲಕ್ಷ್ಮಿ,  ನಾಗೇಶ್ ನಾಯಕ್,  ರಾಘವೇಂದ್ರ ಕೊಡ್ಲಯ ಸಹಕರಿಸಿದ್ದಾರೆ. ಸದ್ಯ ಶಾಸನದ ಸಂರಕ್ಷಣೆಗೆ ದೃಷ್ಟಿಯಿಂದ ಚಗ್ರಿಬೆಟ್ಟು ಪ್ರದೇಶದಿಂದ ಸಂಶೋಧನಾ ಕೇಂದ್ರಕ್ಕೆ ಇದನ್ನು ರವಾನಿಸಲಾಗಿದೆ.

click me!