
ಬೆಂಗಳೂರು (ಜು.23): ರಾಜ್ಯ ಸರ್ಕಾರವು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಸಿದ್ಧಪಡಿಸುವುದಕ್ಕೆ ವಿಧಾನಸಭಾ ಕ್ಷೇತ್ರವಾರು ಅಧಿಕಾರಿಗಳನ್ನು ನೇಮಿಸಿ ಶುಕ್ರವಾರ ರಾಜ್ಯಪತ್ರ ಹೊರಡಿಸಿದೆ. ಚುನಾವಣಾ ಆಯೋಗವು ವಾರ್ಡ್‌ವಾರು ಮತದಾರರ ಪಟ್ಟಿಸಿದ್ಧಪಡಿಸಲು ಮುಂದಾಗಿದ್ದು, ವಿಧಾನಸಭಾ ಕ್ಷೇತ್ರವಾರು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ವಾರ್ಡ್ ವ್ಯಾಪ್ತಿಗೆ ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಚುನಾವಣಾ ಆಯೋಗ ನೇಮಿಸಿರುವ ಜಿಲ್ಲಾ ಚುನಾವಣಾಧಿಕಾರಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಅದೇ ರೀತಿ ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳು ವಾರ್ಡ್‌ವಾರು ಮತದಾರರ ಪಟ್ಟಿಸಿದ್ಧಪಡಿಸಲಿದ್ದಾರೆ. ಹೀಗೆ ನೇಮಕವಾಗಿರುವ ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳು ಬಿಬಿಎಂಪಿ ಜಂಟಿ ಆಯುಕ್ತರು, ಉಪ ಆಯುಕ್ತರಾಗಿದ್ದಾರೆ. ಸದ್ಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಲಾಗಿದೆ. ಬಹುತೇಕ ವಾರ್ಡ್‌ಗಳ ಸ್ವರೂಪ ಬದಲಾಗಿದ್ದು, ಅದಕ್ಕೆ ತಕ್ಕಂತೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ನೇಮಕಗೊಂಡ ಅಧಿಕಾರಿಗಳ ವಿವರ:
ಫ್ಲೆಕ್ಸ್, ಬ್ಯಾನರ್ ಹಾಕಿದ್ರೆ ಕ್ರಿಮಿನಲ್ ಕೇಸ್: BBMP Commissioner ಖಡಕ್ ಸೂಚನೆ
ಕೆಎಂಸಿ ಕಾಯ್ದೆ ತಿದ್ದುಪಡಿಗೆ ಸಲಹೆ: ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 57 ರ ಪ್ರಕಾರ ಮೇಯರ್ ಮತ್ತು ಉಪ ಮೇಯರ್ ಅವರ ಅಧಿಕಾರಾವಧಿಯನ್ನು ಚುನಾವಣಾ ದಿನಾಂಕದಿಂದ 30 ತಿಂಗಳುಗಳವರೆಗೆ ನಿಗದಿಪಡಿಸಲಾಗಿದೆ. ಆದರೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಸೆಕ್ಷನ್ 10ರ ಪ್ರಕಾರ ಮೇಯರ್ ಮತ್ತು ಉಪಮೇಯರ್ ಅಧಿಕಾರಾವಧಿಯನ್ನು ಕೇವಲ 12 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಕೆಎಂಸಿ ಕಾಯ್ದೆಯ ಸೆಕ್ಷನ್ 10ಅನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಆಯೋಗ ಸಲಹೆ ನೀಡಿದೆ.
ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ
ಅಲ್ಲದೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್ 1976ರ ಸೆಕ್ಷನ್ 10ರಲ್ಲಿ ಪ್ರವರ್ಗ ಎ ಮತ್ತು ಬಿ ಅಡಿ ಬರುವ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಒಟ್ಟು ಮೇಯರ್ ಮತ್ತು ಉಪಮೇಯರ್ ಸ್ಥಾನಗಳಲ್ಲಿ 1/3 ಭಾಗದಷ್ಟುಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಬಿಬಿಎಂಪಿ ಕಾಯ್ದೆಯಲ್ಲಿ ಮೇಯರ್, ಉಪಮೇಯರ್ ಹುದ್ದೆಗಳಿಗೆ ಒಬಿಸಿ ಯವರಿಗೆ ಮೀಸಲಾತಿ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂಬುದನ್ನು ಆಯೋಗ ಸರ್ಕಾರದ ಗಮನಕ್ಕೆ ತಂದಿದೆ.
ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಬಿಬಿಎಂಪಿ ಕಾಯಿದೆಯಲ್ಲಿ ಹಿಂದುಳಿದ ವರ್ಗಗಳ ವ್ಯಾಖ್ಯಾನವನ್ನು ನಗರಾಭಿವೃದ್ಧಿ ಇಲಾಖೆಯು ಸೂಚಿಸಿರುವಂತೆ ಮಾಡಲಾಗಿಲ್ಲ. ಅಂದರೆ ಪ್ರವರ್ಗ ಎ ಮತ್ತು ಬಿ ಯನ್ನು ಒಬಿಸಿ ಅಡಿ ಉಲ್ಲೇಖಿಸುವುದಿಲ್ಲ. ಆದರೆ, ಕಾಯಿದೆಯ ಸೆಕ್ಷನ್ 8 ರ ಉಪ-ವಿಭಾಗ 3ರಲ್ಲಿ ನಿಯಮ 1, 2 ಮತ್ತು 3 ರಲ್ಲಿ ಪ್ರವರ್ಗ ಎ ಮತ್ತು ಬಿ ಬಗ್ಗೆ ಉಲ್ಲೇಖಿಸಲಾಗಿದೆ.