ಸಿಲಿಕಾನ್ ಸಿಟಿನ ಮಂದಿಯ ನೆಚ್ಚಿನ ಸಾರಿಗೆ ಸಿಸ್ಟ್ಂ ಎಂದೇ ಕರೆಸಿಕೊಳ್ಳೋ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲಿಗೆ ಅಡಿ ಇಡ್ತಿದೆ. ಮೆಟ್ರೋ ಮೂರನೇ ಹಂತಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಹಿನ್ನಲೆ ಕೆಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ನ.24); ಸಿಲಿಕಾನ್ ಸಿಟಿನ ಮಂದಿಯ ನೆಚ್ಚಿನ ಸಾರಿಗೆ ಸಿಸ್ಟ್ಂ ಎಂದೇ ಕರೆಸಿಕೊಳ್ಳೋ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲಿಗೆ ಅಡಿ ಇಡ್ತಿದೆ. ಮೆಟ್ರೋ ಮೂರನೇ ಹಂತಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಹಿನ್ನಲೆ ಕೆಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಮೆಟ್ರೋ ನಿಗಮ ಮೂರನೇ ಹಂತದ ಕಾಮಗಾರಿ ನಡೆಸಲು ಅನುಮತಿಗಾಗಿ ಕೋರಿ ಸೆಪ್ಟೆಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಸದ್ಯ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್ಗೆ ರಿಪೋರ್ಟ್ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಕೆಲವೇ ದಿನಗಳಲ್ಲಿ ಅನುಮತಿ ನೀಡಲಿದ್ದು ಬಳಿಕ ಮೆಟ್ರೋ ಮೂರನೇ ಹಂತದ ಮೆಟ್ರೋ ಕಾಮಗಾರಿಯನ್ನ ಕೈಗೆತ್ತಿಗೊಳ್ಳಲಿದೆ.ಮೆಟ್ರೋ ಮೂರನೇ ಹಂತದ ಆರಂಭಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು ಸರ್ವೆ ಕಾರ್ಯ ಆರಂಭವಾಗಿದೆ. ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಲ್ಲಿ ಖಾಲಿಜಾಗ, ಸರ್ಕಾರಿ ಜಾಗ ಗಮನಿಸಿ ಭೂಸ್ವಾಧಿನಕ್ಕೂ ತಯಾರಿ ಮಾಡಲಾಗುತ್ತಿದೆ. ಜೊತೆಗೆ ಮೆಟ್ರೋ ಸಾಗುವ ಮಾರ್ಗದಲ್ಲಿ ಜಲಮಂಡಳಿ, ಬೆಸ್ಕಾಂ ಲೈನ್ ಇದ್ಯಾ ಎಂಬುದನ್ನ ಚೆಕ್ ಮಾಡುವುದರ ಜೊತೆಗೆ ಟ್ರಾಫಿಕ್ ಸರ್ವೆ ಮಾಡಿ ನಿತ್ಯ ಪ್ರಯಾಣಿಕರು ಸಂಚರಿಸಬಹುದಾದ ರೈಡರ್ ಶಿಫ್ ಅಂದಾಜು ಮಾಡಲಾಗ್ತಾಯಿದೆ.
ಮೆಟ್ರೋ ಮೂರನೇ ಹಂತದ ಪ್ರಾಜೆಕ್ಟ್ ಡೀಟೆಲ್ಸ್:
44.65 ಕಿಲೋಮೀಟರ್ ಉದ್ದದ ಮೆಟ್ರೊ ಮೂರನೇ ಹಂತ. ಮೆಟ್ರೊ ಮೂರನೇ ಹಂತದಲ್ಲಿಎರಡು ಕಾರಿಡಾರ್ ಗಳು ಇರಲಿದೆ. ಮೊದಲನೇ ಕಾರಿಡಾರ್ ಜೆಪಿ ನಗರ 4th ಫೇಸ್ ನಿಂದ - ಹೆಬ್ಬಾಳದವರೆಗೆ ಒಟ್ಟು 32 ಕಿಲೊಮೀಟರ್ ಉದ್ದವಿದೆ. ಮೆಟ್ರೋ ಮೂರನೇ ಹಂತದ ಒಟ್ಟು ಕಾಮಗಾರಿ ವೆಚ್ಚ 13 ಸಾವಿರ ಕೋಟಿಯಿಂದ 16 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ರಾಜ್‌ಕುಮಾರ್ ಸಮಾಧಿ, ಯಶವಂತಪುರ , ನ್ಯೂ ಬಿಇಎಲ್ ಸರ್ಕಲ್ ಮಾರ್ಗವಾಗಿ ಹೆಬ್ಬಾಳ ಸೇರಲಿದ್ದು ಒಟ್ಟು 22 ನಿಲ್ದಾಣಗಳನ್ನ ಹೊಂದಿದೆ.
2025ರ ಜೂನ್‌ಗೆ 175 ಕಿ.ಮೀ. ನಮ್ಮ ಮೆಟ್ರೋ ಮಾರ್ಗ: ಬಿಎಂಆರ್‌ಸಿಎಲ್ ನಿರ್ದೇಶಕ ಅಂಜುಂ ಪರ್ವೇಜ್
ಮೊದಲನೇ ಕಾರಿಡಾರ್ ನಲ್ಲಿ ಮೈಸೂರು ರಸ್ತೆಯಲ್ಲಿ ಇಂಟರ್ಚೇಂಜ್ ನಿಲ್ದಾಣ ಬರಲಿದೆ. ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿ ನಿಲ್ದಾಣದಿಂದ - ಕಡಬಗೆರೆಯವರೆಗಿದ್ದು ಒಟ್ಟು 12 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದೆ. ಕೆಹೆಚ್ ಬಿ ಕಾಲೋನಿ, ಸುಂಕದಕಟ್ಟೆ, ಬ್ಯಾಡರಹಳ್ಳಿ ಮಾರ್ಗವಾಗಿ ಕಡಬಗೆರೆಗೆ ಸಾಗಲಿದ್ದು ಒಟ್ಟು 9 ನಿಲ್ದಾಣಗಳನ್ನ ಹೊಂದಿದೆ. 2028 ಕ್ಕೆ ಮೂರನೇ ಹಂತ ಕಂಪ್ಲೀಟ್ ಮಾಡುವ ಗುರಿ ಹೊಂದಿದ್ದು, ನಿತ್ಯ 6.35 ಲಕ್ಷ ಪ್ರಯಾಣಿಕರ ನಿರೀಕ್ಷೆಯಿದೆ.
Namma Metro: ಮೆಟ್ರೋ ಮೂರನೇ ಎ ಹಂತಕ್ಕೆ ಸರ್ಕಾರ ಅನುಮತಿ
ಅಂದ ಹಾಗೆ ಮೆಟ್ರೋ ಮೂರನೇ ಹಂತದಲ್ಲಿ ಸುರಂಗ ಮಾರ್ಗವಿರೋದಿಲ್ಲ. ಟ್ರಾಫಿಕ್ ನಗರ ಬೆಂಗಳೂರಿನ ಜನರ ಅವಶ್ಯಕತೆಗೆ ತಕ್ಕಂತೆ ಮೆಟ್ರೊ ಸಂಚಾರಕ್ಕೆ ಸಿದ್ದವಾಗ್ತಾಯಿದ್ದು, ನಿರೀಕ್ಷೆಗೂ ಮೊದಲೇ ಮೆಟ್ರೋ ಮೂರನೇ ಹಂತ ಆರಂಭ ಆಗ್ತಿರೋದು ಖುಷಿಯ ವಿಚಾರ.