ಬೆಂಗಳೂರಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಫೆ.28 ಡೆಡ್‌ಲೈನ್ ಕೊಟ್ಟ ಬಿಬಿಎಂಪಿ

By Sathish Kumar KH  |  First Published Feb 18, 2024, 1:03 PM IST

ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ಅಗ್ರಗಣ್ಯವಾಗಿರುವಂತೆ ನಾಮಫಲಕ ಅಳವಡಿಕೆಗೆ ಫೆ.28ರವರೆಗೆ ಗಡುವು ನೀಡಲಾಗಿದೆ.


ಬೆಂಗಳೂರು (ಫೆ.18): ರಾಜ್ಯ ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ವಾಣಿಜ್ಯ ಮಳಿಗೆಗಳು, ಉದ್ಯಮಗಳು ಹಾಗೂ ಅಂಗಡಿ-ಮುಂಗಟ್ಟುಗಳ ಮುಂದೆ ಅಳವಡಿಕೆ ಮಾಡಲಾಗಿರುವ ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಕೆ ಮಾಡಿ ಫಲಕ ಅಳವಡಿಕೆ ಮಾಡುವುದಕ್ಕೆ ಫೆ.28ರವರೆಗೆ ಗಡುವು ನೀಡಲಾಗಿದೆ.

ರಾಜ್ಯಾದ್ಯಂತ ವಾಣಿಜ್ಯೋದ್ಯಮ ಸೇರಿ ಎಲ್ಲ ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಗಣ್ಯ ಸ್ಥಾನ ನೀಡುವಂತೆ ರಾಜ್ಯ ಸರ್ಕಾರದಿಂದ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಈಗಾಗಲೇ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಾಣಿಜ್ಯೋದ್ಯ, ಉದ್ದಿಮೆಗಳು ಹಾಗೂ ಅಂಗಡಿ-ಮುಂಗಟ್ಟುಗಳ ಮುಂಭಾಗದಲ್ಲಿ ಅಳವಡಿಕೆ ಮಾಡಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರ ಸ್ಥಾನ ನೀಡಬೇಕು ಎಂಬ ಆದೇಶ ಹಲವು ವರ್ಷಗಳಿಂದಲೂ ಜಾರಿಯಲ್ಲಿದೆ. ಆದರೆ, ಬಿಬಿಎಂಪಿ ನಿಯಮವನ್ನು ಜಾರಿಗೆ ತರುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದರು. ಆದರೆ, ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆದ ಕನ್ನಡ ನಾಮಫಲಕ ಅಳವಡಿಕೆ ಮಾಡದ ವಾಣಿಜ್ಯೋದ್ಯಮ ವಿರುದ್ಧದ ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡರ ಬಂಧನವೂ ಆಗಿತ್ತು. ಈಗ ನ್ಯಾಯಾಲಯದಲ್ಲಿ ಜಾಮೀನು ಪಡೆದು ನಾರಾಯಣಗೌಡರು ಹೊರಗೆ ಬಂದಿದ್ದಾರೆ. 

Tap to resize

Latest Videos

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಯುವಕ ಯುವತಿ ಇದ್ದ ಬೈಕ್‌ಗೆ ಅಡ್ಡ ಹಾಕಿ ಹಲ್ಲೆ

ನಾವು ಜೈಲಿಗೆ ಹೋಗಿ ಬಂದಿದ್ದರೂ ಕನ್ನಡಪರ ಹೋರಾಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ. ಜೊತೆಗೆ, ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಗಣ್ಯ ಸ್ಥಾನ ನೀಡದಿದ್ದರೆ ಪುನಃ ಹೋರಾಟದ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಹಾಗೂ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ವತಿಯಿಂದ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ವಾಣಿಜ್ಯೋದ್ಯಮ, ಅಂಗಡಿ ಮುಂಗಟ್ಟುಗಳ ಮೇಲೆ ಅಳವಡಿಸುವ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆಯನ್ನು ಬಳಸಬೇಕು ಎಂದು ಸೂಚನೆ ನೀಡಿದ್ದಾರೆ. ಇನ್ನು ಕನ್ನಡ ಅಗ್ರಗಣ್ಯ ನಾಮಫಲಕ ಅಳವಡಿಕೆಗೆ ಫೆ.28 ಕೊನೆಯ ದಿನವಾಗಿ ಗಡುವು ನೀಡಿದ್ದಾರೆ.

ಕನ್ನಡ ನಾಮಫಲಕದಲ್ಲಿ ಅಳವಡಿಕೆಯಲ್ಲಿ ದ್ವಂದ್ವ ನೀತಿ:
ಹೌದು, ಬಿಬಿಎಂಪಿಯಿಂದ ಕನ್ನಡ ನಾಮಫಲಕ ಅಳವಡಿಕೆ ವಿಚಾರದಲ್ಲಿ ದ್ವಂದ್ವ ನಿಲುವು ಅನುಸರಿಸಲಾಗುತ್ತದೆ. ಪೆಬ್ರವರಿ 28ಕ್ಕೆ ಡೆಡ್ ಲೈನ್ ನೀಡಲಾಗಿದೆ. ಈಗಾಗಲೇ ಕೆಲ ಕಡೆ ರೈಡ್ ಮಾಡಿ ತಾತ್ಕಾಲಿಕವಾಗಿ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಆದರೆ, ಬಿಬಿಎಂಪಿ ಆಯುಕ್ತರು ಮಾತ್ರ ನಾವೂ ಬೀಗ ಹಾಕುವ ಕೆಲಸ ಇನ್ನೂ ಮಾಡಿಲ್ಲ. ಯಾರು ಇನ್ನುಮುಂದೆ ನಿಯಮದಂತೆ ಕನ್ನಡ ನಾಮಫಲಕ ಬಳಿಕೆ ಮಾಡಿಲ್ವೋ ಅತಂಹ ಜಾಗದಲ್ಲೇ ಕಪ್ಪು ಬಣ್ಣ ಬಳಿಯೋ‌ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಹೂಡಿಕೆಯ ನ್ಯೂಸ್ ಚಾನೆಲ್‌ ಬ್ಯಾಂಕ್‌ ಅಕೌಂಟ್‌ ಸ್ಥಗಿತ..!

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 40 ಸಾವಿರಕ್ಕೂ ಅಧಿಕ ಅಂಗಡಿಗಳು ನಾಮಫಲಕವನ್ನ ಬದಲಾವಣೆ ಮಾಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರೋ ಪ್ರತಿಯೊಂದು ವಾಣಿಜ್ಯ ಮಳಿಗೆಗಳು ಸಹ ಇದನ್ನ ಪಾಲನೆ ಮಾಡಬೇಕು. ಇನ್ನೂ 6 ರಿಂದ 7 ಸಾವಿರ ಮಳಿಗೆಗಳು ಕನ್ನಡ ನಾಮಫಲಕ ಶೇ.60 ರಷ್ಟು ಹಾಕಿಲ್ಲ. ಅಂತಹ ಮಳಿಗೆಗಳಿಗೆ ನೋಟಿಸ್ ನೀಡುವ ಕಾರ್ಯ ನಡೆದಿದೆ. ಫೆಬ್ರವರಿ 28ರ ಬಳಿಕ ಕಾನೂನಿ ಕ್ರಮ ತೆಗೆದುಕೊಳ್ಳುತ್ತೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರೋ ಲೆಸೆನ್ಸ್ ಪಡೆದಿರೋ ಮಳಿಗೆಯಾಗಲಿ, ಪರವಾನಗೆ ಪಡೆಯದ ಮಳಿಗೆಯಾಗಲಿ ಕನ್ನಡ ಕಡ್ಡಾಯ ಬಳಕೆ ಮಾಡಲೇಬೇಕು. ಫೆಬ್ರವರಿ ಅಂತ್ಯದೊಳಗೆ ನಾಮಫಲಕ ಕನ್ನಡದಲ್ಲಿ ಇರುವಂತೆ ಮಾಲೀಕರು ಸಹ ನೋಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು.

click me!