ನೂತನ ಬಿಬಿಎಂಪಿ ಆಯುಕ್ತರ ಖಡಕ್ ವಾರ್ನಿಂಗ್‌ಗೆ ಪತರುಗುಟ್ಟಿದ ಖಾಸಗಿ ಆಸ್ಪತ್ರೆಗಳು

By Suvarna News  |  First Published Jul 19, 2020, 10:24 PM IST

ಇಷ್ಟು ದಿನ ಕೊರೋನಾ ರೋಗಿಗಳಿಗೆ   ಬೆಡ್ ಕೊಡದೆ ಆಟ ಆಡಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೂತನ ಆಯುಕ್ತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.


ಬೆಂಗಳೂರು, (ಜುಲೈ.19) : ಕೊರೊನಾ ಸೋಂಕಿತರಿಗೆ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ ಪ್ರಸಾದ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

"

Tap to resize

Latest Videos

ಇಂದು (ಬಾನುವಾರ) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಂಕಿತರು ಯಾರೇ ಆಗಿರಬಹುದು, ಮೊದಲು ಚಿಕಿತ್ಸೆ ನೀಡಿ , ಒಂದು ವೇಳೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಲ್ಲದೇ ಆಸ್ಪತ್ರೆಗಳಿಗೆ ಬೀಗ ಜಡಿಯಲಾಗುವುದು ಎಂದು ಹೇಳಿದರು. 

ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌: ಸುಧಾ​ಕ​ರ್‌ ಎಚ್ಚರಿಕೆ! 

ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಆದ್ಯತೆ ನೀಡಿ ಬೆಡ್ ಕೊಡಬೇಕು. ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಹಾಸಿಗೆ ಮೀಸಲಿಸುವಂತೆ ಸೂಚನೆ ನೀಡಲಾಗುವುದು. ಕೊರೊನಾ ಸೋಂಕಿತರಿಗೆ ಹಾಸಿಗೆ ನೀಡದೇ ಆಟ ಆಡಿದ್ರೆ ಎಚ್ಚರ ಎಂದು ವಾರ್ನಿಂಗ್ ಕೊಟ್ಟರು.

ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಕನಿಷ್ಠ ಶೇ.60ರಷ್ಟು ಬೆಡ್‌ಗಳನ್ನು ಕೊರೋನಾ ಸೋಂಕಿತರಿಗೆ ವೀಸಲಿಡಬೇಕು. ಒಂದು ವೇಳೆ ನಿರಾಕರಿಸಿದ್ರೆ ಬೀಗ ಹಾಕಲು ಹಿಂದೆ ಮುಂದೆ ನೋಡಲ್ಲ ಎಂದರು.

ಸಾಕ್ರಾ ಆಸ್ಪತ್ರೆಗೆ ಎಚ್ಚರಿಕೆ
ಖಾಸಗಿ ಆಸ್ಪತ್ರೆಗಳಿಗೆ  ಇಷ್ಟು ದಿನ ಕೊರೋನಾ ರೋಗಿಗಳಿಗೆ  ಬೆಡ್  ಕೊಡದೆ ಆಟ ಆಡಿಸುತ್ತಿದ್ದವು. ಈ ಪೈಕಿ ಸಾಕ್ರಾ ಆಸ್ಪತ್ರೆಗೆ ಆಯುಕ್ತ ಮಂಜುನಾಥ್ ಪ್ರಸಾದ್  ಭೇಟಿ ನೀಡಿ ಎಚ್ಚರಿಕೆ ಕೊಟ್ಟಿದ್ದಾರೆ.

ಆಯುಕ್ತರ ಭೇಟಿ ವೇಳೆ ಕೇವಲ 30 ಬೆಡ್ ಗಳನ್ನಾ ನೀಡುವುದಾಗಿ ಮ್ಯಾನೇಜ್ಮೆಂಟ್ ತಿಳಿಸಿದೆ. ಇದಕ್ಕೆ ಕೆಂಡಮಂಡಲರಾದ ಆಯುಕ್ತರು ಸರ್ಕಾರದ ಆದೇಶದಂತೆ 50% ನೀಡುವಂತೆ ತಿಳಿಸಿದ್ರು. ಇಲ್ಲದಿದ್ರೆ  ಕ್ರಿಮಿನಲ್ ಕೇಸ್ ಹಾಕುವುದಾಗಿಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ಸಾಕ್ರಾ ಆಸ್ಪತ್ರೆ ಸದ್ಯ ಸರ್ಕಾರಿ ಕೋಟಾದಲ್ಲಿ 100 ಬೆಡ್ ಗಳನ್ನಾ ಕಾಯ್ದಿರಿಸಿದೆ ಎಂದು ಆಯುಕ್ತರಿಗೆ ಪತ್ರ ಬರೆದಿದೆ.

click me!