ಫುಟ್‌ಪಾತನ್ನು ಒಂದು ಬಾರಿ ತೆರವುಗೊಳಿಸಿ ಸುಮ್ಮನಿರಬೇಡಿ: ತುಷಾರ್‌ ಸೂಚನೆ

By Suvarna News  |  First Published Aug 15, 2022, 6:01 AM IST

ಪಾದಚಾರಿ ಮಾರ್ಗ ಒತ್ತುವರಿಯನ್ನು ಒಮ್ಮೆ ತೆರವುಗೊಳಿಸಿ ಸುಮ್ಮನಾಗುವುದಲ್ಲ, ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಖಡಕ್ ಸೂಚನೆ ನೀಡಿದ್ದಾರೆ.


ಬೆಂಗಳೂರು (ಆ.13): ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಒಮ್ಮೆ ತೆರವುಗೊಳಿಸಿ ಸುಮ್ಮನಾಗುವುದಲ್ಲ, ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಾಕೀತು ಮಾಡಿದ್ದಾರೆ. ಶುಕ್ರವಾರ ಆಯುಕ್ತರ ನಡೆ ವಲಯ ಕಚೇರಿ ಕಡೆ ಕಾರ್ಯಕ್ರಮದಡಿ ರಾಜರಾಜೇಶ್ವರಿನಗರ ವಲಯ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಉಲ್ಲಾಳ ರಸ್ತೆಯನ್ನು ಅಗಲೀಕರಣ ಮಾಡಲಾಗಿದ್ದು, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳುತ್ತಿದೆ. ಒತ್ತುವರಿ ಆಗದಂತೆ ಕ್ರಮ ವಹಿಸುವಂತೆ ಸ್ಥಳೀಯರು ಮನವಿ ಮಾಡಿದರು. ಆಗ ಪಾದಚಾರಿ ಮಾರ್ಗ ಒತ್ತುವರಿ ಆಗದಂತೆ ಕ್ರಮ ವಹಿಸಿ, ತೆರವುಗೊಳಿಸಿದ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.ಇನ್ನು ಉಲ್ಲಾಳ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಸ ಬ್ಲಾಕ್‌ ಸ್ಪಾಟ್‌ ಸೃಷ್ಟಿಯಾಗುತ್ತಿವೆ. ಕಟ್ಟಡ ತ್ಯಾಜ್ಯವನ್ನು ರಾತ್ರಿವೇಳೆ ಸುರಿಯಲಾಗುತ್ತದೆ. ಅದನ್ನು ತಪ್ಪಿಸುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಿದ ತುಷಾರ್‌ ಗಿರಿನಾಥ್‌, ಮಾರ್ಷಲ್‌ಗಳು ರಾತ್ರಿ ವೇಳೆ ಗಸ್ತು ಸುತ್ತಬೇಕು. ಕಸ ಹಾಕುವವರು ಸಿಕ್ಕಿದರೆ ಅವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ಅನಧಿಕೃತವಾಗಿ ಫ್ಲೆಕ್ಸ್‌ ಅಳವಡಿಕೆ ತಡೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮ್ಯಾನ್ಯುಯಲ್‌ ಸ್ಕ್ಯಾ‌ವೆಂಜರ್ಸ್‌ಗಳಿಗೆ ಕೂಡಲೇ ಗುರುತಿನ ಚೀಟಿ ವಿತರಿಸಬೇಕು ಎಂದು ನಿರ್ದೇಶಿಸಿದರು.

Tap to resize

Latest Videos

ವಲಯ ಜಂಟಿ ಆಯುಕ್ತ ನಾಗರಾಜ್‌, ಮುಖ್ಯ ಎಂಜಿನಿಯರ್‌ ವಿಜಯ್‌ ಕುಮಾರ್‌ ಸೇರಿದಂತೆ ಮೊದಲಾದವರಿದ್ದರು. ಆರ್‌ಆರ್‌ನಗರ ವಲಯ ಕಚೇರಿಯಲ್ಲಿ ಶುಕ್ರವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಾಗರಾಜ್‌, ವಿಜಯ್‌ ಕುಮಾರ್‌ ಇದ್ದರು.

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಮೀಸಲು ಪಟ್ಟಿಗೆ ಆ. 16ರವರೆಗೆ ಹೈಕೋರ್ಟ್‌ ತಡೆ

ನಗರದಲ್ಲಿ ಬಿಬಿಎಂಪಿಯಿಂದ, ಈ ವರ್ಷ 32000 ಸಸಿ ನಾಟಿ
ನಗರದಲ್ಲಿ ಹಸಿರೀಕರಣ ಹೆಚ್ಚಿಸುವ ಉದ್ದೇಶದಿಂದ ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ .3.18 ಕೋಟಿ ವೆಚ್ಚದಲ್ಲಿ 32,500 ಸಸಿ ನೆಟ್ಟು ಪೋಷಿಸಲು ನಿರ್ಧರಿಸಿದೆ. ನಗರೀಕರಣ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಂದ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅರಣ್ಯ ವಿಭಾಗದ 32 ಸಾವಿರ ಸಸಿ ನೆಡಲು ಉದ್ದೇಶಿಸಿದ್ದು, ಇದಕ್ಕಾಗಿ ಸಸಿ ನೆಡಲು ಗುತ್ತಿಗೆದಾರರನ್ನು ನೇಮಿಸಲು ಮುಂದಾಗಿದೆ. ಗುತ್ತಿಗೆದಾರರು 2022-23ರಿಂದ 2024-25ರವರೆಗೆ ಸಸಿಗಳನ್ನು ಪೋಷಿಸಬೇಕು. ನೆಟ್ಟಸಸಿ ಹಾಳಾಗದಂತೆ ಟ್ರೀಗಾರ್ಡ್‌ ಸೇರಿ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಸಿಗಳನ್ನು ನೆಡಲು ಬಿಬಿಎಂಪಿಯೇ ಜಾಗ ತೋರಿಸಲಿದೆ.

ಬಿಬಿಎಂಪಿಯ ವಾರ್ಡ್‌ ಮೀಸಲಾತಿಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆ

ಎಲ್ಲಿ ಎಷ್ಟು ಸಸಿ?

ವಲಯ / ಸಸಿಗಳ ಸಂಖ್ಯೆ / ವೆಚ್ಚ(ಲಕ್ಷ .)

ಯಲಹಂಕ  / 7,500 / 73.50

ಮಹದೇವಪುರ / 5,000 / 49

ಆರ್‌ಆರ್‌ ನಗರ / 7,500/ 73.50

ಬೊಮ್ಮನಹಳ್ಳಿ/ 7,500/ 73.50

ಪಶ್ಚಿಮ/ 2,500 /24.50

ದಕ್ಷಿಣ/ 2,500 / 24.50
 

click me!