Bengaluru: ಡಾ.ರಾಜ್‌ ರಸ್ತೆ ದುರಸ್ತಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಸೂಚನೆ

By Kannadaprabha NewsFirst Published Oct 19, 2022, 12:34 PM IST
Highlights

ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ವಾಟಾಳ್‌ ನಾಗರಾಜ್‌ ರಸ್ತೆ, ಡಾ.ರಾಜ್‌ಕುಮಾರ್‌ ರಸ್ತೆ, ಮಾಗಡಿ ಜಂಕ್ಷನ್‌ನಿಂದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಸ್ಥಳೀಯ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಬೆಂಗಳೂರು (ಅ.19): ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ವಾಟಾಳ್‌ ನಾಗರಾಜ್‌ ರಸ್ತೆ, ಡಾ.ರಾಜ್‌ಕುಮಾರ್‌ ರಸ್ತೆ, ಮಾಗಡಿ ಜಂಕ್ಷನ್‌ನಿಂದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಸ್ಥಳೀಯ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರ ಪೂರ್ವ ವಲಯದಲ್ಲಿ ಕಾಲ್ನಡಿಗೆ ಮೂಲಕ ಭೇಟಿ ನೀಡಿದ್ದ ತುಷಾರ್‌ ಗಿರಿನಾಥ್‌, ಮಂಗಳವಾರ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಸುಮಾರು 6 ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪರಿಶೀಲಿಸಿದರು. 

ಮೊದಲಿಗೆ ವಾಟಾಳ್‌ ನಾಗರಾಜ್‌ ರಸ್ತೆಯಲ್ಲಿನ ಗುಂಡಿಗಳನ್ನು ವೀಕ್ಷಿಸಿದ ಅವರು, ಮಿಲ್ಲಿಂಗ್‌ ಮಾಡಿ ರಸ್ತೆ ಮೇಲ್ಮೈ ಸರಿಪಡಿಸಬೇಕು. ಲೂಲು ಮಾಲ್‌ ಮುಂಭಾಗ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ಬ್ಯಾರಿಕೇಡ್‌ಗಳನ್ನು ತೆಗೆಯಬೇಕು. ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು. ಅನಧಿಕೃತವಾಗಿ ಸುಜಾತ ಟಾಕೀಸ್‌ ಮುಂಭಾಗದ ಗೋಡೆಯ ಮೇಲೆ ಮತ್ತು ಡಾ.ರಾಜ್‌ಕುಮಾರ್‌ ರಸ್ತೆಯ ಹಲವೆಡೆ ಅಂಟಿಸಿದ್ದ ಭಿತ್ತಿಪತ್ರ ಮತ್ತು ಗೋಲ್ಡನ್‌ ಹೈಟ್ಸ್‌ ಎದುರು ಹಾಕಿದ್ದ ಫ್ಲೆಕ್ಸ್‌ ತೆರವಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆದು ಹಾಕಲಾಯಿತು. 

ಪಾನಮತ್ತ ಪತ್ನಿಯ ಕೊಂದ ಪತಿ ಬಿಡುಗಡೆಗೆ ಹೈಕೋರ್ಟ್‌ ಆದೇಶ

ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿರುವ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಮುಂಭಾಗದ ರಸ್ತೆಯಲ್ಲಿ ಇರುವ ಬ್ಲಾಕ್‌ ಸ್ಪಾಟನ್ನು (ಕಸ ಸುರಿಯುವ ಸ್ಥಳ) ತೆರವಿಗೆ ಕ್ರಮಕೈಗೊಳ್ಳಬೇಕು. ರಾಜಾಜಿ ನಗರ 6ನೇ ಬ್ಲಾಕ್‌ನಲ್ಲಿ ಪಾದಚಾರಿ ಮಾರ್ಗಗಳಲ್ಲಿ ಹಾಳಾಗಿರುವ ಕರ್ಬ್‌ ಸ್ಟೋನ್‌ಗಳನ್ನು ಅಳವಡಿಸಿ, ಅನಧಿಕೃತ ಓಎಫ್‌ಸಿ ಕೇಬಲ್‌ ತೆರವುಗೊಳಿಸಬೇಕು. ರಸ್ತೆ ಬದಿಯ ಬ್ಲಾಕ್‌ಸ್ಪಾಟ್‌ ತೆರವು ಮಾಡಬೇಕು. ವಾರ್ಡ್‌ ರಸ್ತೆಗಳಲ್ಲಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿಸಲು ಸೂಚನೆ ನೀಡಿದರು. 

ಮಾಗಡಿ ರಸ್ತೆಯ ಜಿಟಿ ಮಾಲ್‌ ಬಳಿಯ ರಸ್ತೆಯ ಗುಂಡಿ ಮುಚ್ಚಿ ದುರಸ್ತಿ ಪಡಿಸಬೇಕು. ಪಾದಚಾರಿ ಮಾರ್ಗದಲ್ಲಿ ಸಂಚಾರಿ ಪೊಲೀಸರು ಅಳವಡಿಸಿರುವ ನಾಮಫಲಕ ತೆಗೆದು, ಸುಗಮವಾಗಿ ಓಡಾಡಲು ಅನುವಾಗುವಂತೆ ಅಳವಡಿಸಲು ಸೂಚಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಅಳವಡಿಸಿರುವ ಅಂಗಡಿಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಶಾಸಕ ಸುರೇಶ್‌ಕುಮಾರ್‌ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ದಂಡ ವಿಧಿಸಲು ಸೂಚನೆ: ಮಾಗಡಿ ರಸ್ತೆ ಶೆಲ್‌ ಪೆಟ್ರೋಲ್‌ ಬಂಕ್‌ ಬಳಿ ರಸ್ತೆ ಬದಿಯ ಖಾಲಿ ಜಾಗದಲ್ಲಿ ಕಸ, ಕಟ್ಟಡ ಭಗ್ನಾವಶೇಷ ಸುರಿದಿರುವ ಮಾಲಿಕರಿಗೆ ದಂಡ ವಿಧಿಸಿ ಕಸ ತೆರವು ಮಾಡಬೇಕು. ವೀರೇಶ್‌ ಚಿತ್ರ ಮಂದಿರ ಜಂಕ್ಷನ್‌ ಬಳಿ ರಸ್ತೆಯಲ್ಲಿ ಸೋರಿಕೆಯಾಗುತ್ತಿರುವ ಒಳ ಚರಂಡಿ ಮಾರ್ಗವನ್ನು ಕೂಡಲೆ ಜಲಮಂಡಳಿಯಿಂದ ದುರಸ್ತಿ ಕಾರ್ಯ ಕೈಗೊಳ್ಳಬೇಕು. 

Firecrackers: ಉತ್ಪಾದನೆ ಕುಸಿತ: ಪಟಾಕಿ ಇನ್ನೂ ದುಬಾರಿ?

ಪ್ರೇರಣಾ ಕಾರ್ಸ್‌ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಕಾರ್‌ಗಳನ್ನು ನಿಲ್ಲಿಸಿದ್ದು, ಟ್ರೇಡ್‌ ಲೈಸೆನ್ಸ್‌ ಇದೆಯೇ ಪರಿಶೀಲಿಸಿ ನೋಟಿಸ್‌ ನೀಡಿ ದಂಡ ವಿಧಿಸಬೇಕು ಎಂದು ತುಷಾರ್‌ ಸೂಚನೆ ನೀಡಿದರು. ಜೈಮುನಿರಾವ್‌ ವೃತ್ತದಿಂದ ಹೌಸಿಂಗ್‌ ಬೋರ್ಡ್‌ ಜಂಕ್ಷನ್‌ವರೆಗೆ ಕಾಲ್ನಡಿಗೆಯಲ್ಲಿ ಸಾಗಿದ ಮುಖ್ಯ ಆಯುಕ್ತರು, ಕಟ್ಟಡ ನಿರ್ಮಾಣದ ಸಾಮಗ್ರಿಗಳು ಪಾದಚಾರಿ ಮಾರ್ಗದಲ್ಲಿದ್ದು, ಅದನ್ನು ಕೂಡಲೆ ಟ್ರ್ಯಾಕ್ಟರ್‌ ಬಳಸಿ ತೆಗೆದು ಹಾಕಬೇಕು. ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆರವು ಮಾಡಬೇಕು ಎಂದು ಸೂಚಿಸಿದರು.

click me!