ಪ್ಲಾಸ್ಟಿಕ್‌ ವಿರುದ್ಧ ಬಿಬಿಎಂಪಿ ಆಂದೋಲನ, 1.5 ಟನ್‌ ಪ್ಲಾಸ್ಟಿಕ್‌ ವಶಕ್ಕೆ

Published : Jul 30, 2022, 12:12 PM IST
ಪ್ಲಾಸ್ಟಿಕ್‌ ವಿರುದ್ಧ ಬಿಬಿಎಂಪಿ ಆಂದೋಲನ, 1.5 ಟನ್‌ ಪ್ಲಾಸ್ಟಿಕ್‌ ವಶಕ್ಕೆ

ಸಾರಾಂಶ

ಪ್ಲಾಸ್ಟಿಕ್‌ ವಿರುದ್ಧ ಬಿಬಿಎಂಪಿ ಆದೋಲನ ನಡೆಸುತ್ತಿದ್ದು, ಕಾರ್ಖಾನೆ ಸೇರಿದಂತೆ ವಿವಿಧೆಡೆ 1.5 ಟನ್‌ ಪ್ಲಾಸ್ಟಿಕ್‌ ವಶಕ್ಕೆ ಪಡೆದು 1.20 ಲಕ್ಷ ದಂಡ ವಿಧಿಸಲಾಗಿದೆ.

ಬೆಂಗಳೂರು (ಜು.30): ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ನಗರದ ಪ್ಲಾಸ್ಟಿಕ್‌ ತಯಾರಿಕಾ ಕಾರ್ಖಾನೆ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿ ಸುಮಾರು ಒಂದು ಲಕ್ಷ ರು. ಮೌಲ್ಯದ 1,631 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆದು 1.20 ಲಕ್ಷ ರು ದಂಡ ವಿಧಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಈ ರೀತಿಯ ಪ್ಲಾಸ್ಟಿಕ್‌ ಮಾರಾಟ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿ ಕೊಳ್ಳುವುದರೊಂದಿಗೆ 1,20,700 ರು. ದಂಡ ವಸೂಲಿ ಮಾಡಲಾಗಿದೆ. ರಾಜಗೋಪಾಲನಗರ ವಾರ್ಡ್‌ ವ್ಯಾಪ್ತಿಯ ನಿಷೇಧಿತ ಪ್ಲಾಸ್ಟಿಕ್‌ ತಯಾರಿಸುವ ಬಾಲಾಜಿ ಎಂಟರ್‌ ಪ್ರೈಸಸ್‌ ಕಾರ್ಖಾನೆ ಮೇಲೆ ದಾಳಿ ನಡೆಸಿ ಬಿಬಿಎಂಪಿ ಅಧಿಕಾರಿಗಳು ಸುಮಾರು 90 ಸಾವಿರ ರು, ಮೌಲ್ಯದ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ವಶಕ್ಕೆ ಪಡೆದು ಬಾಲಾಜಿ ಎಂಟರ್‌ಪ್ರೈಸಸ್‌ ಕಾರ್ಖಾನೆಗೆ 25 ಸಾವಿರ ರು. ದಂಡ ವಿಧಿಸಲಾಗಿದೆ. ಇನ್ನು ವಶಕ್ಕೆ ಪಡೆದ ನಿಷೇಧಿತ ಪ್ಲಾಸ್ಟಿಕ್‌ ಅನ್ನು ದೊಡ್ಡ ಬಿದರುಕಲ್ಲು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ದಾಸರಹಳ್ಳಿ ವಲಯದ ಜಂಟಿ ಆಯುಕ್ತರು ಸೂಚಿಸಿದ್ದಾರೆ.

ಜುಲೈನಲ್ಲಿ 21 ಲಕ್ಷ ರು. ದಂಡ ವಸೂಲಿ: ಜುಲೈ 1 ರಿಂದ ಈವರೆಗೆ ನಗರದ 4,414 ಕಡೆ ದಾಳಿ ನಡೆಸಿದ ಪಾಲಿಕೆ ಅಧಿಕಾರಿ ಸಿಬ್ಬಂದಿ ಒಟ್ಟು 10 ಸಾವಿರ ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆದು 21.48 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈನಲ್ಲಿ ವಶಕ್ಕೆ ಪಡೆದ ಪ್ಲಾಸ್ಟಿಕ್‌ ಮತ್ತು ದಂಡದ ವಿವರ

ವಲಯ ದಂಡ(ರು) ಪ್ಲಾಸ್ಟಿಕ್‌(ಕೆಜಿ)

ಪೂರ್ವ 3,67,100 287

ಪಶ್ಚಿಮ 5,31,100 1,768

ದಕ್ಷಿಣ 259400 581

ಮಹದೇವಪುರ 3,43,400 634

ಆರ್‌ಆರ್‌ನಗರ 3,04,900 354

ಯಲಹಂಕ 1,00,700 238

ದಾಸರಹಳ್ಳಿ 1,10,200 6,738

ಬೊಮ್ಮನಹಳ್ಳಿ 1,31,800 359

ಒಟ್ಟು 21,48,600 10,962

ಪೀರ್‌ ಬೌಂಡ್ರಿ ಮೈದಾನ ಪಾಲಿಕೆಯ ಆಸ್ತಿ: ಶೀಘ್ರ ತಡೆಗೋಡೆ ನಿರ್ಮಾಣ

ಕಾರ್ಖಾನೆಯ ಮೇಲೆ ದಾಳಿ, 4,160 ಕೇಜಿ ಪ್ಲಾಸ್ಟಿಕ್‌ ವಶ: ಬಿಬಿಎಂಪಿ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್‌ ಪತ್ತೆ ಕಾರ್ಯಾಚರಣೆ ಮುಂದುವರೆಸಿದ್ದು, ಗುರುವಾರ ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿಯ ಸುಭದ್ರ ಎಂಟರ್‌ ಪ್ರೈಸಸ್‌ ಪ್ಲಾಸ್ಟಿಕ್‌ ಕಾರ್ಖಾನೆ ಮೇಲೆ ದಾಳಿ ನಡೆಸಿ 4,160 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಬೆಂಗಳೂರು: ಬಿಬಿಎಂಪಿ ವೆಬ್‌ಸೈಟಲ್ಲಿ ಅರೆಬರೆ ಮಾಹಿತಿ, ಜನರ ಪರದಾಟ

ಒಟ್ಟು .2.5 ಲಕ್ಷ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ಸುಭದ್ರ ಎಂಟರ್‌ ಪ್ರೈಸಸ್‌ಗೆ .15 ಸಾವಿರ ದಂಡ ವಿಧಿಸಲಾಗಿದೆ. ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕನ್ನು ಚೂರು ಚೂರು ಮಾಡಿ ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿಲೇವಾರಿಗೆ ವಲಯ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ದಾಸರಹಳ್ಳಿ ವಲಯದ ಅಧೀಕ್ಷಕ ಎಂಜಿನಿಯರ್‌ (ಘನತ್ಯಾಜ್ಯ) ನಂದೀಶ್‌ ಮಾಹಿತಿ ನೀಡಿದ್ದಾರೆ.

 

ಬಿಬಿಎಂಪಿ ಚುನಾವಣೆ: 1 ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಅಸಾಧ್ಯ?

ಶೆಟ್ಟಿಹಳ್ಳಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ತಯಾರಿಕ ಕಾರ್ಖಾನೆ ಮೇಲೆ ದಾಳಿ ನಡೆಸಿ 4 ಟನ್‌ ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆದುಕೊಂಡರು. ದಾಸರಹಳ್ಳಿ ವಲಯ ಅಧೀಕ್ಷಕ ಎಂಜಿನಿಯರ್‌ (ಘನತ್ಯಾಜ್ಯ) ನಂದೀಶ್‌ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!