Bengaluru: ಕಳಪೆ ಕಾಮಗಾರಿ ನಡುವೆ ಪಾರ್ಕಿಂಗ್ ಟೆಂಡರ್ ಕರೆದ ಬಿಬಿಎಂಪಿ

By Govindaraj SFirst Published Jul 22, 2022, 12:43 PM IST
Highlights

ಬೆಂಗಳೂರಿನ ಗಾಂಧಿನಗರ ಫ್ರೀಡಂಪಾರ್ಕ್ ಬಹುಮಹಡಿ ಪಾರ್ಕಿಂಗ್ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಆದರೆ ಕಳಪೆ ಕಾಮಗಾರಿ ‌ನಡುವೆ ಪಾರ್ಕಿಂಗ್ ಟೆಂಡರ್ ಕರೆದಿದ್ದಾರೆ ಬಿಬಿಎಂಪಿ ಅಧಿಕಾರಿಗಳು. 

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು (ಜು.22): ಬೆಂಗಳೂರಿನ ಗಾಂಧಿನಗರ ಫ್ರೀಡಂಪಾರ್ಕ್ ಬಹುಮಹಡಿ ಪಾರ್ಕಿಂಗ್ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಆದರೆ ಕಳಪೆ ಕಾಮಗಾರಿ ‌ನಡುವೆ ಪಾರ್ಕಿಂಗ್ ಟೆಂಡರ್ ಕರೆದಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಐದು ವರ್ಷಕ್ಕೆ ನಿರ್ವಹಣೆ ಮಾಡಲು ಖಾಸಗಿಯವರೆಗೆ ಪಾರ್ಕಿಂಗ್ ಟೆಂಡರ್ ಕರೆಯಲಾಗಿದೆ. ಈಗಾಗಲೇ ಐದಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಬಿಡ್ ಮಾಡಿವೆ. 2 ಕೋಟಿ ಡೆಪಾಸಿಟ್ ಹಾಗೂ 5 ವರ್ಷ ಪಾರ್ಕಿಂಗ್ ನಿರ್ವಹಣೆ ಮಾಡಲು ಷರತ್ತು ವಿಧಿಸಿ ಟೆಂಡರ್ ಕರೆಯಲಾಗಿದೆ. 

Latest Videos

ಆದರೆ ಪಾರ್ಕಿಂಗ್ ನಿರ್ವಹಣೆ ‌ಮಾಡಲು ಅರ್ಜಿ ಸಲ್ಲಿಸಿದ್ದ ನಾಲ್ಕು ಖಾಸಗಿ ಏಜೆನ್ಸಿ ಕಂಪನಿಗಳು ಕಳಪೆ ಕಾಮಗಾರಿ ಹಾಗೂ ನೀರು ಸೋರಿಕೆ ಆಗ್ತಾ ಇರೋದನ್ನ ನೋಡಿ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ ಅನ್ನೋ ಪಾರ್ಕಿಂಗ್ ‌ನಿರ್ವಹಣೆ ಮಾಡಲು ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಇದಕ್ಕೆ ಕಾರಣ‌ ಮಳೆಗಾಲದಲ್ಲಿ ಪಾರ್ಕಿಂಗ್ ಕಟ್ಟಡದ ಗೋಡೆಗಳ ಸಂಧಿಯಲ್ಲಿ ‌ನೀರು ಸೋರಿಕೆ ಅಗ್ತಿದೆ. ನೀರು ಸೋರಿಕೆ ಆಗುತ್ತಿರುವುದನ್ನ ಸರಿಪಡಿಸಲು ‌ಮುಂದಾಗದ ಬಿಬಿಎಂಪಿ ಅಧಿಕಾರಿಗಳು ಇದರ ನಡುವೆ ಪಾರ್ಕಿಂಗ್ ಟೆಂಡರ್ ಕರೆದಿದ್ದಾರೆ.

ಪೌರಸಂಸ್ಥೆಗಳಲ್ಲಿ ಶೇ.33 ಒಬಿಸಿ ಮೀಸಲಿಗೆ ಶಿಫಾರಸು: ಭಕ್ತವತ್ಸಲ ಆಯೋಗದಿಂದ ವರದಿ ಸಲ್ಲಿಕೆ

ಉದ್ಘಾಟನೆಗೂ ಮುನ್ನವೇ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆ: ಗಾಂಧಿನಗರ ಬಹುಮಹಡಿ ಕಟ್ಟಡ ಪಾರ್ಕಿಂಗ್ ನಿರ್ಮಾಣ ಉದ್ಘಾಟನೆಗೂ ಮುನ್ನವೇ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆ ಆಗ್ತಿದೆ. ಪಾರ್ಕಿಂಗ್ ನ ತಳಮಹಡಿಯಲ್ಲಿ ನೀರು ಸೋರಿಕೆ ಆಗಿ ನೀರು ತುಂಬಿಕೊಂಡಿದೆ. ಸೋರಿಕೆ ಆಗಿರುವ ಗೋಡೆಗಳನ್ನ ಸಿಲಿಂಡರ್ ಗ್ಯಾಸ್‌ನಲ್ಲಿ ಕಾರ್ಮಿಕರು ಒಣಗಿಸುತ್ತಿದ್ದಾರೆ. 2015ರಲ್ಲಿ ಫ್ರಿಡಂಪಾರ್ಕ್ ಆವರಣದಲ್ಲಿ ಬಹುಮಹಡಿ ಕಟ್ಟಡ ‌ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಪಾರ್ಕಿಂಗ್ ಕಟ್ಟಡ ‌ನಿರ್ಮಾಣ ಮಾಡಲು ಬಿಬಿಎಂಪಿ ಖಾಸಗಿ ಕಂಪನಿಗೆ 80 ಕೋಟಿಗೆ ಟೆಂಡರ್ ನೀಡಿ ಕಾಮಗಾರಿ ಯನ್ನ ಪ್ರಾರಂಭಿಸಲಾಗಿತ್ತು. ಖಾಸಗಿ ಕಂಪನಿ ಕೆ.ಎಂ.ವಿ ಮೂಲಕ ಪಾರ್ಕಿಂಗ್ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಲಾಗಿತ್ತು.ಈಗಾಗಲೇ ಪಾರ್ಕಿಂಗ್ ‌ಕಟ್ಟಡ‌ ಕಾಮಗಾರಿ ‌ಮುಗಿದು 8 ತಿಂಗಳು ಕಳೆದಿದೆ ಎಂದು ಗುತ್ತಿಗೆದಾರರೇ ಹೇಳಿದ್ದಾರೆ.

ಕಮಿಷನ್‌‌ಗೆ ಬೇಡಿಕೆ ಇಟ್ರಾ ಬಿಬಿಎಂಪಿ ಅಧಿಕಾರಿಗಳು?: ಫ್ರೀಡಂಪಾರ್ಕ್ ಗಾಂಧಿನಗರ ಬಹು ಮಹಡಿ ಕಟ್ಟಡ ನಿರ್ಮಾಣದ ಕೆ.ಎಂ.ವಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ವಹಿಸಲಾಗಿತ್ತು.ಈಗಾಗಲೇ ಬಹುತೇಕ ಪಾರ್ಕಿಂಗ್ ಕಟ್ಟಡ ಕಾಮಗಾರಿ ‌ಮುಗಿದಿದೆ. ಆದ್ರೆ ಕಟ್ಟಡ ಕಾಮಗಾರಿ ಬಾಕಿ ಹಣ ಉಳಿಸಿಕೊಂಡ ಬಿಬಿಎಂಪಿ. ಕೆಲಸ ಮಾಡಿ ಬಾಕಿ ಹಣ ಕೊಡದೇ ನಾವು ಇಲ್ಲಿಂದ ಜಾಗ ಖಾಲಿ ಮಾಡಲ್ಲ ಅಂತಿದ್ದಾರೆ ಗುತ್ತಿಗೆದಾರರು. ಕಾಮಗಾರಿಗೆ ಒಟ್ಟು 80 ಕೋಟಿ ಟೆಂಡರ್ ಆಗಿದ್ದು ಇದರಲ್ಲಿ 50 ಕೋಟಿ ಹಣ ಮಾತ್ರ ರೀಲಿಸ್ ಆಗಿದೆ. ಉಳಿದ 30 ಕೋಟಿ ಹಣವನ್ನ ಬಿಬಿಎಂಪಿ ಅಧಿಕಾರಿಗಳು ರೀಲಿಸ್ ಮಾಡಿಲ್ಲ. ಗುತ್ತಿಗೆದಾರರು ಹೇಳುವ ಪ್ರಕಾರ ಎಲ್ಲಾ ಕೆಲಸ ಮುಗಿದಿದೆ, ಬಣ್ಣ ಹೊಡೆದು ಕೀ ಹಸ್ತಾಂತರ ಮಾಡೋದು ಬಾಕಿ ಸಣ್ಣಪುಟ್ಟ ‌ಕೆಲಸ ಇದೆ, ಹಾಗಾಗಿ ವರ್ಕ್ ನಡೀತಾ ಇದೆ ಎಂದು ಕೆ.ಎಂ.ವಿ ಕಂಪನಿಯ ವಿವೇಕ್ ಹೇಳಿದ್ದಾರೆ. 

ವಿದ್ಯಾರ್ಥಿಗಳಿಗೆ ಆಗಸ್ಟ್‌ ಅಂತ್ಯದೊಳಗೆ ಸ್ವೆಟರ್‌ ವಿತರಣೆ: ಬಿಬಿಎಂಪಿ ನಿರ್ಧಾರ

ಅಲ್ಲದೆ ನಮಗೆ‌ ಮೊದಲು ಬಾಕಿ ಹಣ ಪಾವತಿ ಮಾಡಲಿ. ಬಾಕಿ ಹಣ ಕೊಡದೇ ನಾವು ‌ಕೀ ಕೊಡೋದಿಲ್ಲ ಅಂತಿದ್ದಾರೆ. ಒಂದು ವೇಳೆ ಹಣ ಕೊಡದೇ ಇದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದುಕೆ.ಎಂ.ವಿ.ಕಂಪನಿ ವಿವೇಕ್ ಹೇಳಿದ್ದಾರೆ. ಕೆಲ ಅಧಿಕಾರಿಗಳು ‌ಕಮಿಷನ್‌ಗೂ ಬೇಡಿಕೆ ಇಟ್ಟಿದ್ದಾರೆ ಎಂದು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಷ್ಟೆಲ್ಲಾ ಅವಾಂತರ ಆಗಿರುವ ಫ್ರೀಡಂಪಾರ್ಕ್ ಪಾರ್ಕಿಂಗ್ ಕಟ್ಟಡ ಸದ್ಯಕ್ಕೆ ಪಾರ್ಕಿಂಗ್‌ಗೆ ಸಿಗೋದು ಕಷ್ಟ. ಪಾರ್ಕಿಂಗ್ ಲಾಟ್‌ನ ಗೋಡೆಗಳ ಸಂಧಿಯಲ್ಲಿ ‌ನೀರು ಸೋರಿಕೆ ಆಗ್ತಾ ಇದೆ. ಆದ್ರೆ ಕಾಮಗಾರಿ ಕಳಪೆ ಆಗಿದೆ ಅನ್ನೋದು ಗೋತ್ತಾಗಿದೆ. ಸದ್ಯ ತಜ್ಞರ ವರದಿ ಪಡೆದು ಖಾಸಗಿ ಏಜೆನ್ಸಿಗೆ  ಹಣ ಪಾವತಿ ಮಾಡಲಿ ಎಂದು ಸಾಮಾಜಿಕ ಕಾರ್ಯಕರ್ತ‌ ಮರಿಲಿಂಗೇಗೌಡ ಹೇಳಿದ್ದಾರೆ.

click me!