Bengaluru: ಫೆ.15ರ ನಂತರ ಬಿಬಿಎಂಪಿ ಬಜೆಟ್‌: ತುಷಾರ್ ಗಿರಿನಾಥ್

By Kannadaprabha NewsFirst Published Jan 20, 2023, 1:21 PM IST
Highlights

ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್‌ಗೆ ಸಿದ್ಧತೆ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಫೆ.15ರ ನಂತರ ಸರ್ಕಾರಕ್ಕೆ ಬಜೆಟ್‌ ಮಂಡನೆಯ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. 

ಬೆಂಗಳೂರು (ಜ.20): ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್‌ಗೆ ಸಿದ್ಧತೆ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಫೆ.15ರ ನಂತರ ಸರ್ಕಾರಕ್ಕೆ ಬಜೆಟ್‌ ಮಂಡನೆಯ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ಮಹದೇವಪುರ ವಲಯದ ವಿವಿಧ ಸ್ಥಳಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶನಿವಾರದೊಳಗೆ 2022-23ನೇ ಸಾಲಿನ ಆಯವ್ಯಯದ ಖರ್ಚು ವೆಚ್ಚಗಳ ಸಂಪೂರ್ಣ ವಿವರ ಸಲ್ಲಿಸುವಂತೆ ಎಲ್ಲ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ನಂತರ ಬಜೆಟ್‌ ತಯಾರಿ ಸಭೆ ನಡೆಸಲಾಗುವುದು. ರಾಜ್ಯ ಸರ್ಕಾರದ ಬಜೆಟ್‌ ಮಂಡನೆ ಬಳಿಕ ಬಿಬಿಎಂಪಿಯ ಬಜೆಟ್‌ ಮಂಡನೆಗೆ ಫೆ.15ರ ವೇಳೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. ವಲಯ ಆಯುಕ್ತ ಡಾ. ತ್ರಿಲೋಕ್‌ ಚಂದ್ರ, ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ ಇದ್ದರು.

ನಾನು ದಿಲ್ಲಿಯಲ್ಲಿರುವ ನಿಮ್ಮ ಮಗ: ಪ್ರಧಾನಿ ನರೇಂದ್ರ ಮೋದಿ

ಹೆಣ್ಣೂರು ಸರ್ವಿಸ್‌ ರಸ್ತೆ ದುರಸ್ತಿ ಮಾಡಿ: ಹೆಣ್ಣೂರು ಜಂಕ್ಷನ್‌ ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸವೀರ್‍ಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ, ಸವೀರ್‍ಸ್‌ ರಸ್ತೆ ಹಾಗೂ ಪಾದಚಾರಿ ಮಾರ್ಗದ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ತುಷಾರ್‌ ಗಿರಿನಾಥ್‌ ಸೂಚನೆ ನೀಡಿದರು. ಹೆಣ್ಣೂರು ಮುಖ್ಯ ರಸ್ತೆ ಗೆದ್ದಲಹಳ್ಳಿ ಬಳಿಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ಆಟೋಮೊಬೈಲ್ಸ್‌ ಸೇರಿದಂತೆ ಇನ್ನಿತರರನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಎಸ್‌.ಆರ್‌ ಲೇಔಟ್‌ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 17 ಕಟ್ಟಡಗಳ ಒತ್ತುವರಿ ಭಾಗಗಳನ್ನು ತೆರವುಗೊಳಿಸಲಾಗಿದೆ. ಇದೀಗ ಸುಮಾರು 270 ಮೀಟರ್‌ ಉದ್ದದ 30 ಅಡಿ ರಾಜಕಾಲುವೆಯ ಕಾಮಗಾರಿ ಪ್ರಗತಿಯಲ್ಲಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ಸೌಕರ‍್ಯ ವರದಿ ನೀಡಿ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಪೀಠೋಪಕರಣ, ವಿಶ್ರಾಂತಿ ಕೊಠಡಿ, ಸಹಾಯ ಕೇಂದ್ರ, ಶೌಚಾಲಯ, ರಾರ‍ಯಂಪ್‌ ಸೇರಿ ಇನ್ನಿತರ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಿ ಕೂಡಲೆ ವರದಿ ನೀಡುವಂತೆ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ. ಬೊಮ್ಮನಹಳ್ಳಿ ವ್ಯಾಪ್ತಿಯ ಮತಗಟ್ಟೆಕೇಂದ್ರಗಳಾದ ಲಾರೆನ್ಸ್‌ ಶಾಲೆ, ಅಗರ ಕರ್ನಾಟಕ ಪಬ್ಲಿಕ್‌ ಶಾಲೆ ಸೇರಿದಂತೆ ಇನ್ನಿತರ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮೊದಲು ಕಾಂಗ್ರೆಸ್‌ ಗೆಲ್ಲಲಿ, ಆಮೇಲೆ ಫ್ರೀ ವಿದ್ಯುತ್‌ ಕೊಡಲಿ: ಬಿ.ಎಲ್‌.ಸಂತೋಷ್‌

ನಂತರ ಎಚ್‌ಎಸ್‌ಆರ್‌ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್‌ ಬಳಿ ಪಾದಚಾರಿ ಮಾರ್ಗವನ್ನು ಪರಿಶೀಲಿಸಿ, ಬೀದಿಬದಿ ವ್ಯಾಪಾರಿಗಳು ಮಾಡಿರುವ ಒತ್ತುವರಿ ತೆರವು ಮಾಡುವಂತೆ ಸೂಚಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಎಚ್‌ಎಸ್‌ಆರ್‌ ಲೇಔಟ್‌ 6ನೇ ಸೆಕ್ಟರ್‌ನಲ್ಲಿ ಹೊಸದಾಗಿ ಹಾಕಿರುವ ಡಾಂಬರು ಪರಿಶೀಲಿಸಿ, ಹೊಸದಾಗಿ ನಿರ್ಮಾಣ ಮಾಡಿರುವ ಡಾಂಬರು ರಸ್ತೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಶೋಲ್ಡರ್‌ ಡ್ರೈನ್‌ ನಿರ್ಮಿಸಬೇಕು. ಸವೀರ್‍ಸ್‌ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ನಾಮಫಲಕ ಮತ್ತು ರಾರ‍ಯಂಪ್‌ಗಳನ್ನು ತೆರವು ಮಾಡುವಂತೆ ಆದೇಶಿಸಿದರು.

click me!