ಮೊಬೈಲ್‌ನಲ್ಲೇ ವೋಟರ್‌ ಲಿಸ್ಟ್‌ಗೆ ಅರ್ಜಿ ಹಾಕಿ: ಹೊಸ ಮತದಾರರ ನೋಂದಣಿಗೆ ಬಿಬಿಎಂಪಿ ಜಾಗೃತಿ

By Sathish Kumar KH  |  First Published Feb 25, 2023, 8:07 PM IST

ರಾಜ್ಯದಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಸರ್ಕಾರದಿಂದ ಅಭಿಯಾನ ಆರಂಭಿಸಲಾಗಿದೆ. ಮೊಬೈಲ್‌ ಮೂಲಕವೂ ಅರ್ಜಿ ಹಾಕಬಹುದು. 


ಬೆಂಗಳೂರು (ಫೆ.25): ಬಿಬಿಎಂಪಿ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಎಲ್ಲಾ ಯುವಕ/ಯುವತಿಯರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ 18 ವರ್ಷ ಪೂರ್ಣಗೊಂಡವರು ಸಂವಿಧಾನಿಕ ಹಕ್ಕನ್ನು ಚಲಾಯಿಸಬೇಕು ಎಂದು ಬಿಬಿಎಂಪಿ ಸೇರಿ ವಿವಿಧ ಸಂಘ ಸಂಸ್ಥೆಗಳಿಗೆ ಜಾಗೃತಿ ಮೂಡಿಸಲಾಯಿತು. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಎಲ್ಲಾ ಯುವಕ/ಯುವತಿಯರು ಮತದಾರರ ಪಟ್ಟಿಯಲ್ಲಿ ನೋಂದಣಿ/ಸೇರ್ಪಡೆಯಾಗುವ ಸಲುವಾಗಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ, ದಕ್ಷಿಣ ವಲಯ ಜಯನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ ಮೆಂಟ್ ಗಳು, ರಾಗಿ ಗುಡ್ಡ ಬಳಿಯಿರುವ ಕೊಳಗೇರಿ ಪ್ರದೇಶ, ಕಾರ್ಪೊರೇಷನ್ ಕಾಲೋನಿ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ವಲಯ ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮೀ ದೇವಿ ರವರ ನೇತೃತ್ವದಲ್ಲಿ ಮತದಾರ ನೋಂದಣಾಧಿಕಾರಿ, ಸಹಾಯಕ‌ಮತದಾರ ನೊಂದಣಾಧಿಕಾರಿ ಸೇರಿದ ತಂಡವು ಇಂದು  ಭೇಟಿ ನೀಡಿ 18 ವರ್ಷ ತುಂಬಿದ ಯುವ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.

Tap to resize

Latest Videos

ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು ಎಂದು ಹಾಡಿದ ಪ್ರಧಾನಿ ಮೋದಿ: ದೆಹಲಿಯಲ್ಲಿ ಕುವೆಂಪು ಪದ್ಯ ಕಲರವ

ಮೊಬೈಲ್‌ನಲ್ಲಿಯೂ ಅರ್ಜಿ ಹಾಕಲು ಅವಕಾಶ: ಇದಲ್ಲದೆ ಬಸ್ ತಂಗುದಾಣಗಳು, ಪ್ರಮುಖ ಜಂಕ್ಷನ್ ಗಳು, ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷ ತುಂಬಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವಂತಹ ಯುವಕ/ಯುವತಿಯರಿಗೆ ತಮ್ಮ ಮೊಬೈಲ್‌ನಲ್ಲಿ Voter Helpline ತಂತ್ರಾಂಶ ಅಥವಾ www.nvsp.in ವೆಬ್ ಸೈಟ್ ಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಇಲ್ಲವೇ ಪಾಲಿಕೆಯ ಕಂದಾಯ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಆಟೋ ಟಿಪ್ಪರ್‌ಗಳಲ್ಲಿಯೂ ಜಾಗೃತಿ: ಭಾರತ ಚುನಾವಣಾ ಆಯೋಗವು ನನ್ನ ಮತ ನನ್ನ ಹಕ್ಕು ಘೋಷವಾಕ್ಯದಡಿ ಎಲ್ಲಾ ಯುವ ಮತದಾದರು ಮತ ಚಾಲಾಯಿಸಬೇಕೆಂಬ ಉದ್ದೇಶದಿಂದ ಹೆಚ್ಚು-ಹೆಚ್ಚು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು ಯುವ ಮತದಾರರಲ್ಲಿ ಮತ ಚಾಲಾಯಿಸುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳು ಹಾಗೂ ಆಟೋ ಗಳಲ್ಲಿ ಧ್ವನಿವರ್ಧಕಗಳ ಮೂಲಕ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಅರಿವು ಮೂಡಿಸಲಾಗುತ್ತಿದೆ. ಈ ಅವಕಾಶವನ್ನು ಎಲ್ಲಾ ಯುವ ಮತದಾರರು ಸದುಪಯೋಗಪಡಿಸಿಕೊಳ್ಳಲು ಕೋರಿದೆ.

Bengaluru: ಫೆ.26ರ ಭಾನುವಾರ ಕಾವೇರಿ ನೀರು ಪೂರೈಕೆ ಸ್ಥಗಿತ: ನಿಮ್ಮ ಏರಿಯಾ ಇದೆಯೇ ಪರಿಶೀಲಿಸಿ

Voter Helpline: ಪ್ರತಿಯೊಂದು ಆಂಡ್ರಾಯ್ಡ್‌ ಫೋನ್‌ನಲ್ಲಿ ಹೊಸ ಮತದಾರರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಇದೆ. ಮೊಬೈಲ್‌ನ ಪ್ಲೇ ಸ್ಟೋರ್‌ನಲ್ಲಿ ವೋಟರ್‌ ಹೆಲ್ಪ್‌ಲೈನ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅದರಲ್ಲಿ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ನಮೂದಿಸಿ ಒಟಿಪಿ ಆಧರಿಸಿ ಸೈನ್‌ ಇನ್‌ ಆಗಬೇಕು. ನಂತರ, ಅರ್ಜಿ ಸಂಖ್ಯೆ -6 ಓಪನ್‌ ಮಾಡಿ ಅದರಲ್ಲಿ ಕೇಳಲಾದ ಸಾಮಾನ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈ ವೇಳೆ ಮನೆ ವಿಳಾಸ, ಆಧಾರ್‌ ಕಾರ್ಡ್‌ ಹಾಗೂ ನಿಮ್ಮ ಮನೆಯ ಯಾವುದಾದರೂ ಒಬ್ಬ ಹಿರಿಯರ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ದಾಖಲೆಯನ್ನಾಗಿ ಫೋಟೋ ತೆಗೆದು ಅಪ್ಲೋಡ್‌ ಮಾಡಬೇಕು. ಅಲ್ಲಿಗೆ ನಿಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 

click me!