ಸೀನಿಯರ್ ಪ್ರೀತಿಸುವಂತೆ ಕಿರುಕುಳ, ಬೆಂಗಳೂರಿನಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್ ನೇಣಿಗೆ ಶರಣು!

Published : Oct 18, 2025, 05:30 PM IST
Bengaluru crime

ಸಾರಾಂಶ

ಬೆಂಗಳೂರಿನಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್, ಸೀನಿಯರ್ ವಿದ್ಯಾರ್ಥಿ ಪ್ರೀತಿಸುವಂತೆ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ತನ್ನ ಪಿಜಿಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ಮೂಲದ ಯುವತಿಯ ಪೋಷಕರು ಕೇರಳ ಮೂಲದ ಯುವಕ ರೀಫಾಸ್ ವಿರುದ್ಧ  ಎಫ್ಐಆರ್ ದಾಖಲಾಗಿದೆ.

ಬೆಂಗಳೂರು: ಆಕೆ ಇನ್ನೂ 19 ಯುವತಿ ಯುವಕನೂ ಅಷ್ಟೇ ಆಕೆಯದ್ದೇ ವಯಸ್ಸು. ಈಕೆಗೆ ಓದಿ ಉತ್ತಮ ಹೆಸರು ಮಾಡಬೇಕೆಂಬ ಆಸೆ. ಆದರೆ ಆತ ಪ್ರೀತಿ ಪ್ರೇಮ ಅಂತ ಹಿಂದೆ ಬಿದ್ದು ಭವಿಷ್ಯದ ಬಗ್ಗೆ ಯೋಚನೆ ಮಾಡದ ಯುವಕ. ತನ್ನ ಜೂನಿಯರ್ ಯುವತಿಯನ್ನು ಪ್ರೀತಿಸು ಪ್ರೀತಿಸು ಎಂದೇ ಕಾಟ ಕೊಡ್ತಿದ್ದ. ಯುವಕನ ಕಾಟಕ್ಕೆ ಬೇಸತ್ತು ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ಡಿದ್ದಾಳೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆಕೆ ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಳು.

ಯಾರೂ ಇಲ್ಲದ ವೇಳೆ ನೇಣಿಗೆ ಶರಣು

ಯಾರೂ ಇಲ್ಲದ ಸಮಯದಲ್ಲಿ ವಿದ್ಯಾರ್ಥಿನಿ ಸನಾ ಪರ್ವೀನ್ ಕಾಲೇಜಿನ ಪಿಜಿ ಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಹ ವಿದ್ಯಾರ್ಥಿಯಿಂದ ಯುವತಿ ಪ್ರೀತಿಸುವಂತೆ ಕಿರುಕುಳ ಆರೋಪ ಕೇಳಿಬಂದಿದೆ. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಸೀನಿಯರ್ ವಿದ್ಯಾರ್ಥಿ ನೀಡಿರುವ ಕಿರುಕುಳದ ಕಾರಣಕ್ಕೆ ಸನಾ ಪರ್ವಿನ್ ಆತ್ಮ*ಹತ್ಯೆ ಮಾಡಿಕೊಂಡಿರೋದಾಗಿ ಆರೋಪ ಕೇಳಿಬಂದಿದೆ. ಶುಕ್ರವಾರ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಶನಿವಾರ ವಿಚಾರ ಬೆಳಕಿಗೆ ಬಂದಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೇರಳ ಮೂಲದ ಯುವಕ, ಮಡಿಕೇರಿಯ ಸನಾ

ಮಡಿಕೇರಿ ಮೂಲದ ಮೃತ ಯುವತಿ ಸನಾ ಪರ್ವಿನ್, ಕಾಡುಸೊಣ್ಣಪ್ಪನಹಳ್ಳಿ ಬಳಿ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ಲು. ಕೇರಳ ಮೂಲದ ಯುವಕ ರೀಫಾಸ್ ಎಂಬ ಯುವಕ ಕಿರುಕುಳ ನೀಡಿರುವ ಆರೋಪವಿದೆ. ಪಿಜಿ ಮತ್ತು ಕಾಲೇಜ್ ಬಳಿ ಬಂದು ಪ್ರೀತಿಸುವಂತೆ ಕಿರುಕುಳ ನೀಡಿದ್ದಲ್ಲದೆ ಅಸಭ್ಯವಾಗಿ ಮಸೇಜ್ ಮಾಡಿದ್ದಾನಂತೆ. ಕಳೆದ ಹತ್ತು ತಿಂಗಳಿನಿಂದ ಯುವತಿ ಸನಾ ಪರ್ವೀನ್ ಗೆ ಕಿರಿಕುಳ ಕೊಟ್ಟಿದ್ದು, ಯುವಕನ ಕಿರುಕುಳದ ವಿಚಾರವನ್ನು ಮೃತ ಸನಾ ಪರ್ವೀನ್ ಪೋಷಕರಿಗೂ ತಿಳಿಸಿದ್ದಳು. ನಿನ್ನೆ ತನ್ನ ಪಿಜಿಯ ಸಹಪಾಠಿಗಳು ಇಲ್ಲದ ವೇಳೆ ಯುವತಿ ನೇಣಿಗೆ ಶರಣಾಗಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಈ ಘಟನೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಪ್ರೀತಿ ಕಿರುಕುಳ ಹಾಗೂ ಮಾನಸಿಕ ಒತ್ತಡಗಳ ಗಂಭೀರತೆ ಮತ್ತೆ ಬಯಲಿಗೆ ತಂದಿದೆ. ಓದುತ್ತಾ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ, ಕಿರುಕುಳದಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ ತನ್ನ ಜೀವ ಕಳೆದುಕೊಳ್ಳುವಂತಾಗಿದೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ