ದೇವಾಲಯದ ಕಟ್ಟಡದ ಮೇಲೇರಿದ ಬಸವ!

Kannadaprabha News   | Asianet News
Published : Mar 17, 2020, 10:45 AM IST
ದೇವಾಲಯದ ಕಟ್ಟಡದ ಮೇಲೇರಿದ ಬಸವ!

ಸಾರಾಂಶ

ಬಸವಣ್ಣ ದೇವಾಲಯದ ಚಾವಣಿ ಮೇಲೆ ಏರಿ ತನ್ನ ಕೋಪ ತಾಪ ಪ್ರದರ್ಶನ ಮಾಡಿರುವ ಘಟನೆ ಚಾಮರಾಜನಗರದ ದೇವಾಲಯ ಒಂದರಲ್ಲಿ ನಡೆದಿದೆ. 

ಚಾಮರಾಜನಗರ [ಮಾ.17]:  ಗ್ರಾಮದ ಬಸವ ದೇಗುಲದ ಮೇಲೇರಿ ಕೋಪ ತಾಪ ಪ್ರದರ್ಶಿಸಿದ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲದಲ್ಲಿ ನಡೆದಿದೆ.

ಸೋಮವಾರ ನಡೆಯಬೇಕಿದ್ದ ದಿವ್ಯಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಕೊರೋನಾ ವೈರಸ್‌ನಿಂದ ಮುಂದೂಡಲಾಗಿತ್ತು. ತೇರಿನ ಮುಂದೆ ಹೆಜ್ಜೆ ಹಾಕುತ್ತಿದ್ದ ಬಸವನನ್ನು ಈ ಬಾರಿ ಬಿಟ್ಟು ಉತ್ಸವಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ದೇಗುಲಕ್ಕೆ ಹಿಂತಿರುಗುವಾಗ ದೇಗುಲದ ಛಾವಣಿ ಮೇಲೆ ಬಸವ ಗಂಭೀರವದನನ್ನಾಗಿ ನಿಂತಿದ್ದು ಕೆಲವರಲ್ಲಿ ಭಕ್ತಿ, ಆತಂಕ ಉಂಟು ಮಾಡಿತು.

ಕಾರವಾರ ದೇವರಿಗೆ ಮದ್ಯದ ಅಭಿಷೇಕ, ಸಿಗರೇಟಿನ ಆರತಿ : ಸಿದ್ಧಿಯಾಗುತ್ತೆ ಇಷ್ಟಾರ್ಥ...

ಛಾವಣಿ ಮೇಲೇರಲು ಜಾಗವಿದ್ದು ಆಗಾಗ್ಗೆ ಬಸವ ಹತ್ತುತ್ತಾನೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ರಥೋತ್ಸವ ರದ್ದಾಗಿದ್ದರಿಂದ ಬಸವನನ್ನು ಕರೆದೊಯ್ದಿರಲಿಲ್ಲ, ದೇವರು ದೇಗುಲಕ್ಕೆ ಬರುವ ವೇಳೆಗೆ ಬಸವ ಛಾವಣಿ ಮೇಲೇರಿ ಸ್ವಾಗತ ಕೋರಿದ್ದಾನೆ ಎಂದು ಗ್ರಾಮಸ್ಧರು ತಿಳಿಸಿದರು. ನಂತರ ಬಸವನನ್ನು ಜೋಪಾನವಾಗಿ ಕೆಳಕ್ಕೆ ಇಳಿಸಲಾಯಿತು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ