ಪಂಚಮಸಾಲಿ ಮೀಸಲಾತಿ: 'ಸಿಎಂಗೆ ನೀಡಿರುವ ಗಡುವು ಮುಗಿದಿದೆ, ಏನಾದರೂ ಆದರೆ ಸರ್ಕಾರ ಹೊಣೆ'

By Suvarna News  |  First Published Jan 5, 2021, 1:23 PM IST

ಸಿಎಂ ಗೆ ನೀಡಿರುವ ಗಡುವು ಮುಗಿದಿದೆ | ಆಗ ಏನಾದರೂ ಆದರೆ ಅದಕ್ಕೆ ಸರಕಾರವೇ ನೇರ ಹೊಣೆ | ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ


ವಿಜಯಪುರ(ಜ.05): ಸಿಎಂ ಗೆ ನೀಡಿರುವ ಗಡುವು ಮುಗಿದಿದೆ. ನಾವು ಪಾದಯಾತ್ರೆ ಮಾಡುವುದರಿಂದ ಸರಕಾರಕ್ಕೂ ಮುಜುಗರವಾಗಲಿದೆ. ಪಾದಯಾತ್ರೆ ಸಂದರ್ಭದಲ್ಲಿ ಸಮಾಜದ ಯುವಕರು ಹೋರಾಟ ನಡೆಸಲಿದ್ದಾರೆ.  ಆಗ ಏನಾದರೂ ಆದರೆ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ವಿಚಾರವಾಗಿ ಮಾತನಾಡಿದ್ದಾರೆ.

Latest Videos

undefined

ಸಂಪುಟ ವಿಸ್ತರಣೆ ಪಕ್ಕಾ, 2 ದಿನಗಳಲ್ಲಿ ಮಂತ್ರಿಯಾಗ್ತೇನೆ ಅಂತಿದ್ದಾರೆ ಆರ್ ಶಂಕರ್

ಈ ಹಿಂದೆಯೇ ಬೇಡಿಕೆ ಈಡೇರಿಸಲು ಪಾದಯಾತ್ರೆಗೆ ಮುಂದಾಗಿದ್ದೆವು. ಆಗ ಸಿಎಂ ಭರವಸೆ ಹಿನ್ನೆಲೆ ಮುಂದೂಡಿದ್ದೆವು. ಈಗ ಸಿಎಂ ಗೆ ನೀಡಿರುವ ಗಡುವು ಮುಗಿದಿದೆ. ಜ.9 ರಂದು ಸಚಿವ ಸಿ. ಸಿ. ಪಾಟೀಲ ಸರಕಾರದ ಪ್ರತಿನಿಧಿಯಾಗಿ ನಿಯೋಗದೊಂದಿಗೆ ಕೂಡಲ ಸಂಗಮಕ್ಕೆ ಬರುತ್ತಿದ್ದಾರೆ ಎಂದಿದ್ದಾರೆ.

ಆದರೂ ಪಾದಯಾತ್ರೆ ಸಂಬಂಧ ಈಗಾಗಲೇ ಜಿಲ್ಲಾವಾರು ಪ್ರವಾಸ ಕೈಗೊಳ್ಳುತ್ತಿದ್ದೇವೆ. ಜ. 14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇನೆ. ನಿನ್ನೆ ಸಿಎಂ ಶಾಸಕರ ಸಭೆ ನಡೆಸಿ ಸಮಸ್ಯೆ ಆಲಿಸಿದ್ದಾರೆ. ಅದೇ ರೀತಿ ನಮ್ಮ ಬೇಡಿಕೆ ಈಡೇರಿಸಲಿ ಎಂದು ಹೇಳಿದ್ದಾರೆ.

5150 ಶಿಕ್ಷಕರಿಗೆ ಕೊರೊನಾ ಟೆಸ್ಟ್:18 ಜನಕ್ಕೆ ಪಾಸೆಟಿವ್, ಕಡೋಲಿ ಸರ್ಕಾರಿ ಶಾಲೆ ಬಂದ್

ಲಿಂಗಾಯಿತ ಎಲ್ಲ ಉಪಪಂಗಡಗಳನ್ನು ಓಬಿಸಿಗೆ ಸೇರಿಸಲು ಶಿಫಾರಸು ಮಾಡಬೇಕು. ಪಂಚಮಸಾಲಿ ಸಮಾಜವನ್ನು 2A ಗೆ ಸೇರಿಸಬೇಕು. ಜ.14 ರ ಮೊದಲು ಸೂಕ್ತ ನಿರ್ಧಾರ ಕೈಗೊಳ್ಳಿ. ನಾವು ಪಾದಯಾತ್ರೆ ಮಾಡುವುದರಿಂದ ಸರಕಾರಕ್ಕೂ ಮುಜುಗರವಾಗಲಿದೆ. ಪಾದಯಾತ್ರೆ ಸಂದರ್ಭದಲ್ಲಿ ಸಮಾಜದ ಯುವಕರು ಹೋರಾಟ ನಡೆಸಲಿದ್ದಾರೆ. ಆಗ ಏನಾದರೂ ಆದರೆ ಅದಕ್ಕೆ ಸರಕಾರವೇ ನೇರ ಹೊಣೆ ಎಂದಿದ್ದಾರೆ.

ಯಡಿಯೂರಪ್ಪ ಮಾತ ತಪ್ಪದ ನಾಯಕ ಎಂಬುದು ದೇಶಕ್ಕೆ ಗೊತ್ತಿದೆ. ಈಗ ಹೋರಾಟದ ಮೂಲಕ ಬೇಡಿಕೆಯ ಕಿಚ್ಚನ್ನು ಹಚ್ಚುತ್ತೇವೆ. ಸಿಎಂ ಪರಮಾಧಿಕಾರ ಬಳಸಿ‌ ಮೀಸಲಾತಿ ನೀಡಲಿ. ಇಲ್ಲದಿದ್ದರೆ ಎಲ್ಲ ಲಿಂಗಾಯಿತ ಪಂಗಡಗನ್ಮು ಹಿಂದುಳಿದ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡಲಿ. ವಿಜಯಪುರದಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

click me!