5150 ಶಿಕ್ಷಕರಿಗೆ ಕೊರೊನಾ ಟೆಸ್ಟ್, 18 ಶಿಕ್ಷಕರಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆ | ಕಡೋಲಿ ಸರ್ಕಾರಿ ಶಾಲೆ ಬಂದ್
ಬೆಳಗಾವಿ(ಜ.05): ಬೆಳಗಾವಿ ಜಿಲ್ಲೆಯಲ್ಲಿ 18 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಶಾಲಾ ಕಾಲೇಜು ಆರಂಭ ಆಗುವುದಕ್ಕೂ ಮುನ್ನ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಟೆಸ್ಟ್ ವೇಳೆ 18 ಶಿಕ್ಷಕರಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಮೂವರು, ಕಿತ್ತೂರು ತಾಲೂಕಿನಲ್ಲಿ ಓರ್ವ ಶಿಕ್ಷಕ ಬೆಳಗಾವಿ ಮಹಾನಗರದಲ್ಲಿ ನಾಲ್ವರು ಶಿಕ್ಷಕರು, ಬೆಳಗಾವಿ ತಾಲೂಕಿನ 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೊರೋನಾ ವ್ಯಾಕ್ಸಿನೇಷನ್ ಟ್ರಯಲ್‌ಗೊಳಗಾದವರು ಏನಂತಾರೆ ಕೇಳಿ
ಜಿಲ್ಲೆಯಲ್ಲಿ ಈವರೆಗೂ 5150 ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಈ ಪೈಕಿ ಎರಡು ಸಾವಿರ ಶಿಕ್ಷಕರಿಗೆ ಕೊರೊನಾ ನೆಗೆಟಿವ್ ಬಂದಿತ್ತು. 18 ಶಿಕ್ಷಕರಿಗೆ ಪಾಸಿಟಿವ್, ಮೂರು ಸಾವಿರ ಶಿಕ್ಷಕರ ವರದಿ ನಿರೀಕ್ಷೆಯಲ್ಲಿದೆ.
ಕಡೋಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಿಗೆ ಪಾಸಿಟಿವ್ ಹಿನ್ನೆಲೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರ್ಕಾರಿ ಶಾಲೆ ಬಂದ್ ಮಾಡಲಾಗಿದೆ. ಇಂದಿನಿಂದ ಶಾಲೆಯನ್ನ ಶಿಕ್ಷಣ ಇಲಾಖೆ ಬಂದ್ ಮಾಡಿಸಿದೆ.
ಎಸ್ಸೆಸ್ಸೆಲ್ಸಿ, ಪಿಯು ಹಾಜರಾತಿ ಶೇ.50ಕ್ಕೂ ಹೆಚ್ಚು
ಜನವರಿ ಒಂದರ ಮೊದಲು ಕಡೋಲಿ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಕೊರೊನಾ ದೃಢಪಟ್ಟಿದ್ದು, ಆದರೆ ಸಹ ಶಿಕ್ಷಕರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ಸಹಶಿಕ್ಷಕರ ಕೊರೊನಾ ವರದಿ ಬರೋವರೆಗೂ ಕಡೋಲಿ ಸರ್ಕಾರಿ ಶಾಲೆ ಬಂದ್ ಮಾಡಲಾಗಿದೆ.