ನಾನು ನೇರ ನಿಷ್ಠುರ ಮನುಷ್ಯ. ಹಾಗಾಗಿ ಕೆಲವರಿಗೆ ಇದು ಸಹಿಸಿಕೊಳ್ಳಲಾಗುತ್ತಿಲ್ಲ. ಓಲೈಕೆ ಮಾಡಿ ಅಧಿಕಾರ ಪಡೆಯುವುದು ನನಗೆ ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಣಿಬೆನ್ನೂರು (ಜ.18): ನಾನು ಸ್ವಾರ್ಥಪರ, ಓಲೈಕೆಯ ರಾಜಕಾರಣಿ ಅಲ್ಲ. ಸುಮ್ಮನಿದ್ದರೆ ಮಂತ್ರಿ ಅಲ್ಲ, ಮುಖ್ಯಮಂತ್ರಿಯೇ ಆಗುತ್ತಿದ್ದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನೇರ ನಿಷ್ಠುರ ಮನುಷ್ಯ. ಹಾಗಾಗಿ ಕೆಲವರಿಗೆ ಇದು ಸಹಿಸಿಕೊಳ್ಳಲಾಗುತ್ತಿಲ್ಲ. ಓಲೈಕೆ ಮಾಡಿ ಅಧಿಕಾರ ಪಡೆಯುವುದು ನನಗೆ ಬೇಕಾಗಿಲ್ಲ. ಬೆಳಗಾವಿಯ ಜನಸೇವಕ ಸಮಾವೇಶ ಹಾಗೂ ಬಾಗಲಕೋಟೆಯ ಖಾಸಗಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿರಲಿಲ್ಲ, ಹಾಗಾಗಿ ನಾನು ಹೋಗಿಲ್ಲ ಎಂದರು. ಇದು ವಾಜಪೇಯಿ ಕಾಲದ ಹೈಕಮಾಂಡ್ ಅಲ್ಲ, ರಾಜ್ಯ ಸೇರಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ.
ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಬಿಎಸ್‌ವೈ, ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ ...
ವಾಜಪೇಯಿ ಅವರು ಪ್ರಧಾನಿಯಾದ್ದಾಗ ಆಲಮಟ್ಟಿಆಣೆಕಟ್ಟು ಎತ್ತರ ಹೆಚ್ಚಳ ವಿಚಾರಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಕ್ಷೇಪ ವಿರೋಧಿಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧಾನಾಗಿದ್ದೆ. ಈಗ ನಾನು ಪಕ್ಷದ ಶಿಸ್ತು ಉಲ್ಲಂಘಿಸುವಂಥ ಯಾವುದೇ ಕೆಲಸ ಮಾಡಿಲ್ಲ ಎಂದರು.
ರಾಜ್ಯದ ಅಭಿವೃದ್ಧಿ ವಿಚಾರಕ್ಕೆ ಬದ್ಧನಾಗಿದ್ದು, ಶೂನ್ಯದಿಂದ ರಾಜಕೀಯದಲ್ಲಿ ಮೇಲಕ್ಕೆ ಬಂದಿರುವೆ. ನಾನು ಪಕ್ಷದ ಶಿಸ್ತು ಉಲ್ಲಂಘಿಘಿಸುವಂಥ ಯಾವುದೇ ಕೆಲಸ ಮಾಡಿಲ್ಲ, ಇದರ ಬಗ್ಗೆ ಯಾವ ಆತಂಕವೂ ಬೇಡ ಎಂದರು.