'ಯತ್ನಾಳ್‌, ವಿಶ್ವನಾಥ್‌ ಮೆಂಟಲ್‌ ಕೇಸ್‌ಗಳು, ಪಕ್ಷದಿಂದ ಉಚ್ಚಾಟಿಸಿ'

Kannadaprabha News   | Asianet News
Published : Jan 18, 2021, 09:25 AM ISTUpdated : Jan 18, 2021, 09:29 AM IST
'ಯತ್ನಾಳ್‌, ವಿಶ್ವನಾಥ್‌ ಮೆಂಟಲ್‌ ಕೇಸ್‌ಗಳು, ಪಕ್ಷದಿಂದ ಉಚ್ಚಾಟಿಸಿ'

ಸಾರಾಂಶ

ಯತ್ನಾಳ್‌ ಹಾಗೂ ವಿಶ್ವನಾಥ್‌ ಅಧಿಕಾರದ ಆಸೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಪಕ್ಷ ವಿರೋಧಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ| ಇಂತಹವರು ಪಕ್ಷಕ್ಕೆ ಅಗತ್ಯಲ್ಲ ಇವರನ್ನು ಕೂಡಲೇ ಉಚ್ಚಾಟಸಿ| ಇಬ್ಬರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಎಸ್‌.ಆರ್‌.ವಿಶ್ವನಾಥ್‌|

ಯಲಹಂಕ(ಜ.18): ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಎಚ್‌.ವಿಶ್ವನಾಥ್‌ ಮೆಂಟಲ್‌ ಕೇಸ್‌ಗಳು. ಇವರನ್ನು ಪಕ್ಷದಿಂದ ಉಚ್ಚಾಟಿಸಬೇಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡುವುದಾಗಿ ಶಾಸಕ, ಬಿಡಿಎ ಅಧ್ಯಕ್ಷ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹೇಳಿದ್ದಾರೆ. 

ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ಯಲಹಂಕ ಕ್ಷೇತ್ರ ವ್ಯಾಪ್ತಿಯ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಯತ್ನಾಳ್‌ ಹಾಗೂ ವಿಶ್ವನಾಥ್‌ ಅಧಿಕಾರದ ಆಸೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಪಕ್ಷ ವಿರೋಧಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಇವರು ಒಂದು ರೀತಿಯ ಮೆಂಟಲ್‌ ಕೇಸ್‌ಗಳು. ಇಂತಹವರು ಪಕ್ಷಕ್ಕೆ ಅಗತ್ಯಲ್ಲ ಇವರನ್ನು ಕೂಡಲೇ ಉಚ್ಚಾಟಿಸಬೇಕೆಂದರು.

'ಸಿಎಂಗೆ ಮಾನ ಮರ್ಯಾದೆ ಇದ್ರೆ ಯತ್ನಾಳ‌ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಲಿ'

ಗ್ರಾಮಗಳೇ ದೇಶದ ಪ್ರಮುಖ ಕೋಶಗಳು:

ಗ್ರಾಮಗಳ ಅಭಿವೃದ್ಧಿಯನ್ನು ಗ್ರಾಮ ಪಂಚಾಯ್ತಿಗಳೇ ಮಾಡಬೇಕು. ಗ್ರಾಮಗಳೇ ದೇಶದ ಪ್ರಮುಖ ಕೋಶ. ಈ ಗ್ರಾಮಗಳು ಏಕ ವ್ಯಕ್ತಿಯಿಂದ ನಡೆಯುವುದಿಲ್ಲ. ಪ್ರಧಾನಿ, ಮುಖ್ಯಮಂತ್ರಿ, ಸಂಸದ, ಶಾಸಕರಿಂದ ಗ್ರಾಮಗಳು ಬೆಳಗದು. ಗ್ರಾಮಗಳು ಬೆಳಗಬೇಕೆಂದರೆ ಅಲ್ಲಿನ ಗ್ರಾಮ ಪಂಚಾಯ್ತಿಗಳು ಚೆನ್ನಾಗಿ ಕೆಲಸ ಮಾಡಬೇಕು. ಗ್ರಾಮ ಪಂಚಾಯ್ತಿಗಳು ಚೆನ್ನಾಗಿ ಕೆಲಸ ಮಾಡಬೇಕಾದರೆ ಪಂಚಾಯ್ತಿಗೆ ಉತ್ತಮ ಸದಸ್ಯರು ಬರಬೇಕು ಎಂದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!