ಬಸವನಬಾಗೇವಾಡಿ: ವೇಗವಾಗಿ ಬಂದು ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದ 108 ಆಂಬ್ಯುಲೆನ್ಸ್‌

Published : Feb 28, 2020, 12:56 PM IST
ಬಸವನಬಾಗೇವಾಡಿ: ವೇಗವಾಗಿ ಬಂದು ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದ 108 ಆಂಬ್ಯುಲೆನ್ಸ್‌

ಸಾರಾಂಶ

108 ವಾಹನ ಚಕ್ಕಡಿಗೆ ಡಿಕ್ಕಿ ಆರು ಜನ​ರಿಗೆ ಗಾಯ| ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಜೈನಾಪೂರ ಕ್ರಾಸ್‌ ಬಳಿ ನಡೆದ ಘಟನೆ| ಗಾಯಾಳುಗಳಿಗೆ ವಿಜಯಪುರದ ಜಿಲ್ಲಾ​ಸ್ಪತ್ರೆಯಲ್ಲಿ ಚಿಕಿತ್ಸೆ| 

ಬಸವನಬಾಗೇವಾಡಿ(ಫೆ.28): ಎತ್ತಿನ ಚಕ್ಕಡಿಗೆ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿಯಲ್ಲಿದ್ದ 6 ಜನರು ಗಾಯಗೊಂಡ ಘಟನೆ ಪಟ್ಟಣದ ಸಮೀಪವಿರುವ ಜೈನಾಪೂರ ಕ್ರಾಸ್‌ ಹತ್ತಿರ ಬುಧವಾರ ಸಂಜೆ ಸಂಭ​ವಿ​ಸಿದೆ.

ಚಕ್ಕ​ಡಿ​ಯ​ಲ್ಲಿದ್ದ ಬಸ​ವ​ನ​ಬಾ​ಗೇ​ವಾಡಿ ತಾಲೂ​ಕಿನ ಜೈನಾ​ಪೂರ ಗ್ರಾಮದ ಪದ್ಮವ್ವ ಮ್ಯಾಗೇರಿ (60), ಬಸವ್ವ ಕವಡಿ (55), ಹಣಮಂತ ಕವಡಿ (40), ನೀಲಮ್ಮ ಕವಡಿ (40), ಗುರುಬಾಯಿ ಕುಂಬಾರ (35), 108 ವಾಹ​ನ​ದ​ಲ್ಲಿದ್ದ ನಿಡ​ಗುಂದಿ ತಾಲೂ​ಕಿನ ಗೊಳ​ಸಂಗಿ ಗ್ರಾಮದ ಕಸ್ತೂರಿ​ಬಾಯಿ ಕೋಮದ (25) ಗಾಯ​ಗೊಂಡಿದ್ದು ಎಲ್ಲರೂ ಜಿಲ್ಲಾ​ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊಲದಿಂದ ಜೈನಾಪೂರ ಕ್ರಾಸ್‌ ಕಡೆಗೆ ಬರುತ್ತಿದ್ದ ಎತ್ತಿನ ಚಕ್ಕಡಿಗೆ ಬಸವನಬಾಗೇವಾಡಿ ಕಡೆಗೆ ಬರುತ್ತಿದ್ದ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿ​ಣಾಮ ಈ ಅಪ​ಘಾತ ಸಂಭ​ವಿ​ಸಿದೆ. 108 ವಾಹನ ಚಾಲಕ ಎದುರಿಗೆ ಹೋಗುತ್ತಿದ್ದ ಚಕ್ಕಡಿಗೆ ನಿಷ್ಕಾಳಜಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾ​ನೆಂದು ಪದ್ಮವ್ವ ಮ್ಯಾಗೇರಿ, ಮಗನಾದ ಶಿವಪ್ಪ ಮ್ಯಾಗೇರಿ ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಸಚಿವ ಕೆಜೆ ಜಾರ್ಜ್ ಜೊತೆ ಶಾರದೆಯ ದರ್ಶನ ಪಡೆದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್
ಕ್ವಿನ್ ಸಿಟಿ ಯೋಜನೆ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ ಎಂದ ಎಂಬಿ ಪಾಟೀಲ