ಮೈಸೂರು (ಜು.07): ಯಾರೂ ನಿರೀಕ್ಷೆ ಮಾಡದವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತಾರೆ. ಒಳ್ಳೆಯವರು, ಪ್ರಾಮಾಣಿಕರು, ಹಿಂದುತ್ವದ ಪರ ಇರುವವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಮೈಸೂರು, ಚಾಮರಾಜನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಹೈಕಮಾಂಡ್ ನನಗೆ ಜವಾಬ್ದಾರಿ ಕೊಟ್ಟರೆ ಬೇಡ ಅನ್ನಲ್ಲ. ನಾನು ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರಿಗಿಂತ ನಾನು ಸೀನಿಯರ್. ನನ್ನ ಹಿಂದೆ ದೊಡ್ಡ ಶಕ್ತಿ ಇದೆ. ಉಚ್ಚಾಟನೆ ಸುಲಭವಲ್ಲ. ಕಾಲ ಕೂಡಿಬಂದರೆ ಸಿಎಂ ಆಗಿ ಚಾಮರಾಜನಗರಕ್ಕೆ ಸಿಎಂ ಆಗಿ ಬರುತ್ತೇನೆ ಎಂದು ತಿಳಿಸಿದರು.
undefined
ಯತ್ನಾಳ್ ಭೇಟಿ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಹಿರಿಯ ನಾಯಕನ ಭೇಟಿಯಾದ ಯೋಗೇಶ್ವರ್ ...
ನಾನು ಕುರುಕ್ಷೇತ್ರದ ಅಭಿಮನ್ಯು ಆಗಲೂ ಸಿದ್ಧ. ಆದರೆ ಅರ್ಜುನನಾಗುತ್ತೇನೆ. ವನವಾಸ, ಅಜ್ಞಾತವಾಸ ಎಲ್ಲಾ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ. ರಾಜ್ಯದಲ್ಲಿ ನಾಯಕತ್ವ ಬದಲಾಗುವ ವಿಶ್ವಾಸ ಇದೆ. ನಾನು ಏಕಾಂಗಿ ಅಲ್ಲ, ಸಾಕಷ್ಟುಸಚಿವರು ಸಂಪರ್ಕದಲ್ಲಿದ್ದಾರೆ. ಎಲ್ಲರೂ ಹೋರಾಟ ಮುಂದುವರಿಸಲು ಹೇಳಿದ್ದಾರೆ. ಕೆಲ ದಿನಗಳಲ್ಲಿ ಫಲ ಸಿಗಲಿದೆ ಎಂದರು.
'ಹೊರಗಡೆ ಬಿಎಸ್‌ವೈ ನಮ್ಮ ನಾಯಕ ಅಂತಾರೆ..ಒಳಗಡೆ ಹೋಗಿ ಸಿಎಂ ಬದಲಾಯಿಸಿ ಅಂತಾರೆ' ...
ನಾನೇ ಬರ್ತೀನಿ- ಇದೇ ವೇಳೆ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಭಯದಿಂದ ಸಿಎಂ ಇಲ್ಲಿಗೆ ಬರ್ತಿಲ್ಲ. ನೋಡೋಣ ಕಾಲ ಕೂಡಿ ಬಂದರೆ ಮುಂದೆ ನಾನು ಬರ್ತೀನಿ ಎಂದರು. ಈ ಮೂಲಕ ತಾವೇ ಸಿಎಂ ಆಗುವ ಮನದಿಂಗಿತ ಹೊರಹಾಕಿದರು.