ಸೀಲ್‌ ಡೌನ್‌ನಿಂದ ಬಂಟ್ವಾಳ ನಿವಾ​ಸಿ​ಗರ ಬದುಕು ಅತಂತ್ರ

By Kannadaprabha NewsFirst Published May 17, 2020, 8:57 AM IST
Highlights

ಬಂಟ್ವಾಳದ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್‌ ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಮಂಗಳೂರು(ಮೇ 17): ಬಂಟ್ವಾಳದ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್‌ ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ಆ ನಿವಾಸಿಗಳ ಕಟ್ಟಡ ಮತ್ತು ಮನೆ ತೆರಿಗೆ, ವಿದ್ಯುತ್‌ ಮತ್ತು ನೀರಿನ ಬಿಲ್‌ ಹಾಗೂ ತ್ಯಾಜ್ಯ ಶುಲ್ಕ ಮನ್ನಾ ಮಾಡುವಂತೆ ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌ ಪುರಸಭೆಯನ್ನು ಆಗ್ರಹಿಸಿದ್ದಾರೆ.

ಈ ಪ್ರದೇಶದಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ನಂತರ ಸುದೀರ್ಘ ದಿನಗಳ ಸೀಲ್‌ ಡೌನ್‌ ಮುಂದುವರಿದಿದೆ. ಆದರೆ ಈ ಪ್ರದೇಶದ ಜನರಿಗೆ ಯಾವುದೇ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಇದರಿಂದಾಗಿ ಇಲ್ಲಿನ ಜನರಿಗೆ ದಿನನಿತ್ಯದ ಬದುಕು ನಿರ್ವಹಣೆ ಕಷ್ಟವಾಗಿದ್ದು, ಇಲ್ಲಿನ ನಿವಾಸಿಗಳ ಕಟ್ಟಡ ಮತ್ತು ಮನೆ ತೆರಿಗೆ, ವಿದ್ಯುತ್‌ ಮತ್ತು ನೀರಿನ ಬಿಲ್‌ ಹಾಗೂ ತ್ಯಾಜ್ಯ ಶುಲ್ಕ ಮನ್ನಾ ಮಾಡುವ ಮೂಲಕ ಪುರಸಭೆಯ ಇವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬೇಬಿ ಕುಂದ​ರ್‌ ಒತ್ತಾಯಿಸಿದ್ದಾರೆ.

ಹಿಂದಿನ ತಿಂಗಳ ವಿದ್ಯುತ್‌ ಬಿಲ್ ಸರಾಸರಿ ಆಧಾರದ ಮೇಲೆ ಈ ತಿಂಗಳ ಬಿಲ್

ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಮನವಿ ನೀಡಿದ ನಿಯೋಗದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌, ಜಿ.ಪಂ. ಸದಸ್ಯ ಪದ್ಮಶೇಖರ್‌ ಜೈನ್‌, ಮಾಜಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರಾದ ಜನಾರ್ದನ ಚೆಂಡ್ತಿಮಾರ್‌, ಗಂಗಾಧರ ಪೂಜಾರಿ ಉಪಸ್ಥಿತರಿದ್ದರು.

click me!