MYsuru : ಚುಂಚನಕಟ್ಟೆಯಲ್ಲಿ ನಡೆಯಬೇಕಿದ್ದ ಬಹು ದೊಡ್ಡ ಜಾನುವಾರು ಸಂತೆ ನಿಷೇಧ

By Kannadaprabha News  |  First Published Oct 20, 2022, 5:29 AM IST

ಚುಂಚನಕಟ್ಟೆಯಲ್ಲಿ ನಡೆಯಬೇಕಿದ್ದ ಬಹು ದೊಡ್ಡ ಜಾನುವಾರು ಸಂತೆ ನಿಷೇಧ

 ಜಾನುವಾರುಗಳಿಗೆ ಹರಡುತ್ತಿರುವ ಚರ್ಮಗಂಟು ಕಾಯಿಲೆ ನಿಯಂತ್ರಣಕ್ಕೆ ಈ ಕ್ರಮ


  ಸಾಲಿಗ್ರಾಮ (ಅ.20):  ಚರ್ಮಗಂಟು ಎಂಬ ಕಾಯಿಲೆ ಮೂಲಕ ಜಾನುವಾರುಗಳಿಗೆ ಕೊರೋನದಂತೆ ಬಾಧಿಸುತ್ತಿದ್ದು, ಕಾಯಿಲೆ ಹರಡುವುದನ್ನ ತಪ್ಪಿಸಲು ಜಿಲ್ಲಾಡಳಿತ ಜಿಲ್ಲಾದ್ಯಂತ ಜಾನುವಾರುಗಳ ಸಂತೆ ಹಾಗೂ ಜಾನುವಾರು ಜಾತ್ರೆಗಳನ್ನ ನಿಷೇಧ ಮಾಡಿರುವ ಕಾರಣ ಚುಂಚನಕಟ್ಟೆಗ್ರಾಮದಲ್ಲಿ ಬುಧವಾರ ನಡೆಯ ಬೇಕಿದ್ದ ಬಹು ದೊಡ್ಡ ಜಾನುವಾರು ಸಂತೆ ನಿಷೇಧ ಮಾಡಲಾಗಿತ್ತು.

ಮುಂಜಾನೆಯಿಂದಲೇ ದೂರದೂರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ (Farmers)  ಪೂರ್ವ ತಯಾರಿಯೊಂದಿಗೆ ಸಂತೆಗೆ ಗೂಡ್‌್ಸ ವಾಹನ, ಬೈಕ್‌ಗಳಲ್ಲಿ ಕುರಿ, ಆಡು, ನಾಟಿಕೋಳಿ ಹಾಗೂ ಹಲವು ತಳಿಯ ರಾಸುಗಳು, ಎಮ್ಮೆಗಳನ್ನು ಮಾರಾಟಕ್ಕೆ (Sale)  ತರಲಾಗಿತ್ತು, ಆದರೆ ನಿಷೇಧದ ಪರಿಣಾಮ ಮಾರುಕಟ್ಟೆಆವರಣದಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಸಂತೆ ಕಟ್ಟದಂತೆ ತಡೆದು ಬಂದಿದ್ದ ರೈತರಿಗೆ, ಸಾರ್ವಜನಿಕರಿಗೆ ಚರ್ಮಗಂಟು ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಿದರಲ್ಲದೆ, ಇನ್ನು 2 ತಿಂಗಳು ಸಂತೆ ಇಲ್ಲ ಎಂದು ಮನವರಿಕೆ ಮಾಡಿದರು. ದೀಪಾವಳಿ ಹಾಗೂ ಪಿತೃ ಪಕ್ಷದ ಕಡೆಯ ಹಬ್ಬದ ಸಂತೆಯಾಗಿದ್ದು, ಹಬ್ಬದ ಹಿನ್ನೆಲೆ ಜಿಲ್ಲೆ ಹಾಗೂ ಹಾಸನ, ಮಂಡ್ಯ, ಕೊಡಗು ಜಿಲ್ಲೆಯ ನಾನಾ ಭಾಗಗಳಿಂದ ಸಂತೆಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಕುರಿ, ಆಡು, ನಾಟಿಕೋಳಿಗಳನ್ನ ಮಾರಾಟ ಮಾಡಲು ಕೊಳ್ಳಲು ಆಗಮಿಸಿದ್ದರು. ಆದರೆ ಸಂತೆ ರದ್ದಾಗಿರುವ ಹಿನ್ನಲೆಯಲ್ಲಿ ಬೇಸರದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆ ದಾರಿ ಹಿಡಿದರು.

Latest Videos

undefined

ಇನ್ನು ಗಾರರು ತಂದಿದ್ದ ತಮ್ಮ ತಮ್ಮ ಜಾನುವಾರು ಹಾಗೂ ಕುರಿ, ಆಡು, ಕೋಳಿಗಳನ್ನು ಸಾಲಿಗ್ರಾಮ, ಹೊಸೂರು, ಸಕ್ಕರೆ ಕಾರ್ಖಾನೆ ರಸ್ತೆಗಳ ಬದಿಯಲ್ಲಿಯೇ ಪೊಲೀಸರ ಕಣ್ತಪ್ಪಿಸಿ ಕದ್ದು ಮುಚ್ಚಿ ವ್ಯಾಪಾರ ನಡೆಸಿದರು.

ಸಂತೆ ಕಟ್ಟದಂತೆ ಕಟ್ಟೆಚ್ಚರ ವಹಿಸಿದ್ದ ಪಂಚಾಯಿತಿ ಅಧಿಕಾರಿಗಳ ಹಾಗೂ ಪೊಲೀಸ… ಸಿಬ್ಬಂದಿಗಳ ಸುತ್ತುವರಿದು ರೈತರ ಹಾಗೂ ದಲ್ಲಾಳಿಗಳ ಹೈಡ್ರಾಮದ ದೊಡ್ಡ ವಾಗ್ವಾದವೇ ನಡೆಯಿತು. ನಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಬಂದ್ದಿದ್ದೇವೆ, ಹಬ್ಬ ಇರುವ ಕಾರಣ ಕುರಿ, ಆಡು, ಕೋಳಿಗಳನ್ನಾದರು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಿ, ಮುಂದಿನ ವಾರ ಬರುವುದಿಲ್ಲ, ಚರ್ಮಗಂಟು ಕಾಯಿಲೆ ಇರುವುದು ಹಸುಗಳಿಗೆ ಮಾತ್ರ. ಕುರಿ, ಆಡು, ಕೋಳಿಗಳಿಗಲ್ಲ ಎಂದು ಏರು ಧ್ವನಿಯಲ್ಲೇ ಪ್ರಶ್ನಿಸಿದರು.

ಸಂತೆ ಬಂದ್‌ ಮಾಡುವುದಾದರೆ ಎಲ್ಲ ಕಡೆ ಮಾಂಸ ಹಾಗೂ ಕೋಳಿಗಳ ಅಂಗಡಿಗಳನ್ನು ಮೊದಲು ಮುಚ್ಚಿಸಿ ಅವರಿಗೊಂದು ನಮಗೊಂದು ನ್ಯಾಯ ಯಾಕೆ..? ಎಂದು ವಾಗ್ವಾದಕ್ಕಿಳಿದ ಪ್ರಸಂಗ ಜರುಗಿತು. ಪೊಲೀಸ್‌ ಸಿಬ್ಬಂದಿಗಳು ಕಡಿಮೆ ಇದ್ದ ಕಾರಣ ಪರಿಸ್ಥಿತಿ ನಿಭಾಯಿಸಲು ಹಾಗೂ ವ್ಯಾಪಾರಸ್ಥರನ್ನ ತಡೆಯಲು ಹೆಚ್ಚಿನ ಸಿಬ್ಬಂದಿಗಳನ್ನು ಕರೆತರಲಾಯಿತು. ಜತೆಗೆ ತಮ್ಮ ಪೊಲೀಸ್‌ ವಾಹಣದ ಧ್ವನಿ ವರ್ಧಕದ ಮೂಲಕ ಎಚ್ಚರಿಸುವ ಕೆಲಸ ಮಾಡಿ ಗುಂಪುಗಳನ್ನ ಚದುರಿಸಿ ಸಂತೆ ಕಟ್ಟದಂತೆ ಎಚ್ಚರ ವಹಿಸಿದರು.

ಚುಂಚ್ಚನಕಟ್ಟೆಯು ಸಾಲಿಗ್ರಾಮ ತಾಲೂಕು ಪೊಲೀಸ್‌ ವ್ಯಾಪ್ತಿಯಲ್ಲಿ ಸೇರ್ಪಡೆ ಹೊಂದಿದ್ದು, ಸಿಪಿಐ ಶ್ರೀಕಾಂತ… ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಹಿಸಿದ್ದರು ಸಿಬ್ಬಂದಿಗಳಾದ ಮಧು, ಮಧುಸೂದನ್‌, ಪಿಡಿಒ ಸುನಿಲ…, ಉಪ ತಹಶೀಲ್ದಾರ್‌ ಶರತ್‌ಕುಮಾರ್‌ ಹಾಗೂ ಸಿಬ್ಬಂದಿ ಇದ್ದರು.

ಚುಂಚನಕಟ್ಟೆಯಲ್ಲಿ ನಡೆಯಬೇಕಿದ್ದ ಬಹು ದೊಡ್ಡ ಜಾನುವಾರು ಸಂತೆ ನಿಷೇಧ

- ಜಾನುವಾರುಗಳಿಗೆ ಹರಡುತ್ತಿರುವ ಚರ್ಮಗಂಟು ಕಾಯಿಲೆ ನಿಯಂತ್ರಣಕ್ಕೆ ಈ ಕ್ರಮ

ಮುಂಜಾನೆಯಿಂದಲೇ ದೂರದೂರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ರೈತರು ಪೂರ್ವ ತಯಾರಿಯೊಂದಿಗೆ ಸಂತೆಗೆ

ನಿಷೇಧದ ಪರಿಣಾಮ ಮಾರುಕಟ್ಟೆಆವರಣದಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಸಂತೆ ಕಟ್ಟದಂತೆ ತಡೆ

click me!