ಮಂಗಳೂರಿನಲ್ಲಿ ಕಾಮಿಡಿಯಲ್ಲಿ ಹೇಳಿದ ಡಯಲಾಗ್ ಒಂದು ನಿಜವಾಗಿದೆ. ಹಾಗೆಯೇ ಈ ಡಯಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಬ್ಯಾಂಕ್-ಬ್ಯಾಂಕ್‌ಗೆ ಮದುವೆ’ ಅನ್ನೋ ತುಳು ನಾಟಕದ ಡಯಲಾಗ್ ಈಗ ಕರಾವಳಿಯಲ್ಲಿ ಫುಲ್ ವೈರಲ್. ಬ್ಯಾಂಕ್‌ಗಳ ವಿಲೀನ ಸುದ್ದಿ ಹೊರ ಬೀಳುತ್ತಿದ್ದಂತೆ ತುಳುನಾಡಿನ ಜನ ‘ಬ್ಯಾಂಕ್-ಬ್ಯಾಂಕ್‌ಗೆ ಮದುವೆ’ ಡಯಲಾಗ್ ಹೇಳಿ ನಕ್ಕಿದ್ದಾರೆ.
ಮಂಗಳೂರು(ಸೆ.01): ಕೇಂದ್ರ ಸರ್ಕಾರ ಮೂರನೇ ಹಂತದಲ್ಲಿ ವಿಲೀನಗೊಳಿಸಿದ ಬ್ಯಾಂಕ್‌ಗಳ ಪೈಕಿ ಕರಾವಳಿ ಮೂಲದ ಸಿಂಡಿಕೇಟ್, ಕೆನರಾ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಸೇರಿದೆ. ಈ ಪೈಕಿ ಸಿಂಡಿಕೇಟ್ ಹಾಗೂ ಕೆನರಾ ಬ್ಯಾಂಕ್ ವಿಲೀನ ಕುರಿತು ಕಾಕತಾಳೀಯವಾಗಿ ಬಹಳ ಹಿಂದೆಯೇ ಇಲ್ಲಿ ತುಳು ನಾಟಕಗಳಲ್ಲಿ ಹಾಸ್ಯರೂಪದಲ್ಲಿ ಬಳಕೆಯಾದ ಡೈಲಾಗ್ ತುಣುಕು ಈಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದು ಸುಮಾರು 20 ವರ್ಷಗಳ ಹಿಂದಿನ ಮಾತು. ಆಗ ಕರಾವಳಿಯಲ್ಲಿ ಜನಿಸಿದ ಬ್ಯಾಂಕ್‌ಗಳ ವಿಲೀನದ ಬಗ್ಗೆ ಯಾವುದೇ ಚಿಂತನೆಗಳು ಸರ್ಕಾರಿ ಮಟ್ಟದಲ್ಲಿ ಇರಲಿಲ್ಲ. ಆದರೆ ಸ್ಥಳೀಯವಾಗಿ ಜನಪ್ರಿಯವಾಗಿದ್ದ ಚಾ ಪರ್ಕ ತಂಡದ ತುಳು ನಾಟಕವೊಂದರ ಹಾಸ್ಯ ಸನ್ನಿವೇಶದಲ್ಲಿ ಬ್ಯಾಂಕಿಗೂ ಬ್ಯಾಂಕಿಗೂ ಮದುವೆ (ಅದರಲ್ಲೂ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕಿಗೆ ಮದುವೆ)ಎಂಬ ಸಂಭಾಷಣೆ ಬಳಸಲಾಗಿತ್ತು.
undefined
ಮುಂದುವರಿದ ಬ್ಯಾಂಕ್‌ಗಳ ವಿಲೀನ ಪರ್ವ; ಈ ಬಾರಿ ನಮ್ಮ-ನಿಮ್ಮ ಕಾರ್ಪ್, ಸಿಂಡಿಕೇಟ್, ಕೆನರಾ!
ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋದಲ್ಲೂ ಇದೇ ನಾಟಕ ತಂಡ ಕಿರು ಪ್ರಹಸ ಮಾಡಿದ್ದು ಅಲ್ಲಿಯೂ ಕಾಮಿಡಿಯಾಗಿ ಹೇಳಿದ ಸಂಭಾಷಣೆ ಇಂದಿಗೆ ನಿಜವಾಗಿದೆ. ‘ಪುದರ್ ದೀತಿಜಿ’(ಹೆಸರು ಇಟ್ಟಿಲ್ಲ) ಹೆಸರಿನ ತುಳು ನಾಟಕದಲ್ಲಿ ಕಲಾವಿದರಾದ ಭೋಜರಾಜ ವಾಮಂಜೂರು-ನಿರ್ದೇಶಕ ದೇವದಾಸ್ ಕಾಪಿಕಾಡು ಈ ಸಂಭಾಷಣೆ ನಡೆಸಿದ್ದರು.