ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಖಂಡಿಸಿದ್ದಾರೆ. ಮುಸ್ಲಿಮರು 'ಅನ್ನ ತಿಂದ ಮನೆಗೆ ಕನ್ನ ಹಾಕುವವರು' ಎಂದು ಆರೋಪಿಸಿದ ಅವರು, ಭಾರತದಲ್ಲಿ ಇದೇ ರೀತಿ ಮುಂದುವರಿದರೆ ಅಖಂಡ ಭಾರತದ ನಿರ್ಮಾಣವಾಗಲಿದೆ ಎಂದಿದ್ದಾರೆ.
ಶಿವಮೊಗ್ಗ (ಡಿ.03): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಮುಸ್ಲಿಂಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು ಎಂಬುದು ಗೊತ್ತಾಗುತ್ತದೆ. ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ದಾಸ್ ಅವರು ಎಲ್ಲರಿಗೂ ಅನ್ನ ಹಾಕುತ್ತಿದ್ದರು. ಇದೀಗ ಅವರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಭಾರತದ ಹಿಂದುಗಳು ಈ ದೇಶದ ಮುಸ್ಲಿಮರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಅವರು ಉಳಿಯುತ್ತಾರಾ? ಈವರೆಗೆ ಒಬ್ಬ ಹಿಂದು ಕೂಡ ಮಸೀದಿ ಧ್ವಂಸ ಮಾಡಲು ಹೋಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆಸಲಾದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಮುಸ್ಲಿಂಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು. ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ದಾಸ್ ಅವರು ಎಲ್ಲರಿಗೂ ಅನ್ನ ಹಾಕ್ತಿದ್ದರು. ಚಿನ್ಮಯ್ ದಾಸ್ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೊರಟ್ಟಿದ್ದರು, ಮುಸ್ಲಿಮರು ಆ ವಕೀಲರ ಮೇಲೆ ಹಲ್ಲೆ ನಡೆಸಿದರು. ಆ ವಕೀಲರು ಇವತ್ತು ಸಾಯುವ ಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಿದರು.
undefined
ಭಾರತದ ಹಿಂದುಗಳು ಈ ದೇಶದ ಮುಸ್ಲಿಂರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಮುಸ್ಲಿಮರು ಉಳಿಯುತ್ತಾರಾ? ಮುಸ್ಲಿಮರು ಹಿಂದು ಯುವತಿಯರ ಅತ್ಯಾಚಾರ ನಡೆಸುತ್ತಿದ್ದಾರೆ. ಒಬ್ಬ ಹಿಂದು ಮಸೀದಿ ಧ್ವಂಸ ಮಾಡಲು ಹೋಗಿಲ್ಲ. ರಾಮ ಮಂದಿರ ನಿರ್ಮಾಣ ಮಾಡಲು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಬಿಟ್ಟರೆ ಬೇರೆ ಮಸೀದಿ ಧ್ವಂಸ ಮಾಡಿಲ್ಲ. ಹಿಂದುಗಳು ಶಾಂತಿ ಪ್ರಿಯರು. ಇದೇ ರೀತಿ ಮುಂದುವರಿದರೆ ಬಾಂಗ್ಲಾದೇಶ, ಪಾಕಿಸ್ತಾನ ಇರಲ್ಲ ಮುಂದೊಂದು ದಿನ ಅಖಂಡ ಭಾರತ ಆಗುತ್ತದೆ. ಇವತ್ತೂ ಕೂಡ ಬಾಂಗ್ಲಾದಲ್ಲಿ ಹಿಂದು ದೇವಸ್ಥಾನ ಧ್ವಂಸ ಮಾಡಿದ್ದಾರೆ. ಹೀಗಾಗಿ, ಸಾಧು ಸಂತರು ಹೋರಾಟಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ವಿಜಯೇಂದ್ರ, ಯಡಿಯೂರಪ್ಪ ಕಾಲಿನ ಧೂಳಿಗೂ ಸಮನಲ್ಲ: ರಮೇಶ ಜಾರಕಿಹೊಳಿ
ಒಕ್ಕಲಿಗ ಮಠದ ಚಂದ್ರಶೇಖರ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂದರು. ನಂತರ ತನ್ನ ಮಾತನ್ನು ವಾಪಸ್ ಪಡೆದಿದ್ದಾರೆ. ಹಿಂದು ದೇವಸ್ಥಾನ ಧ್ವಂಸ, ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ನಾವು ಸುಮ್ಮನಿದ್ದೇವೆ. ಆದರೆ, ಈಗ ಅಖಂಡ ಭಾರತದ ನಿರ್ಮಾಣಕ್ಕೆ ಸಾಧು ಸಂತರ ನೇತೃತ್ವ ಅವಶ್ಯಕತೆ ಇದೆ. ಬಾಂಗ್ಲಾದೇಶ ಸರಕಾರದ ವಿರುದ್ದ ಎಲ್ಲರೂ ಒಗ್ಗಟ್ಟಾಗಬೇಕಿದೆ. ಹಿಂದು ಹಿಂದು ನಾವೆಲ್ಲ ಒಂದು ಎಂಬ ಸಂದೇಶವನ್ನು ಸಾರಿದರು.