ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಈ ತಿಂಗಳಾಂತ್ಯದಲ್ಲಿ ಘೋಷಣೆ ಮಾಡುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದರೂ ಆಡಳಿತ ರೂಢ ಬಿಜೆಪಿ ಮಾತ್ರ ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿರುವುದು ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಿಗೆ ಆತಂಕ ಉಂಟು ಮಾಡಿದೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ನಾನಾ ತಂತ್ರದಲ್ಲಿ ತೊಡಗಿದ್ದಾರೆ.
ಬಂಗಾರಪೇಟೆ : ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಈ ತಿಂಗಳಾಂತ್ಯದಲ್ಲಿ ಘೋಷಣೆ ಮಾಡುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದರೂ ಆಡಳಿತ ರೂಢ ಬಿಜೆಪಿ ಮಾತ್ರ ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿರುವುದು ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಿಗೆ ಆತಂಕ ಉಂಟು ಮಾಡಿದೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ನಾನಾ ತಂತ್ರದಲ್ಲಿ ತೊಡಗಿದ್ದಾರೆ.
ಏಪ್ರಿಲ್ ಅಂತ್ಯ ಅಥವಾ ಮೇ ಮೊದಲವಾರ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಇತ್ತ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್,ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳಿಗೆ ತೆರಳಿ ಯುಗಾದಿ ಹಬ್ಬದ ಹೆಸರಲ್ಲಿ ಮತದಾರರಿಗೆ ಉಡುಗೊರೆಗಳನ್ನು ನೀಡಿ ಅವರ ಮನ ಗೆಲ್ಲಲು ಮುಂದಾಗಿದ್ದಾರೆ.
undefined
ಅಭ್ಯ ಅಭ್ಯರ್ಥಿ ಯಾರು?:
ಆದರೆ ಆಡಳಿತ ರೂಢ ಯಲ್ಲಿ ಬಿ.ವಿ.ಮಹೇಶ್,ಎಂ.ನಾರಾಯಣಸ್ವಾಮಿ ಮತ್ತು ವಿ.ಶೇಷು ಈ ಮೂವರುಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್ ಎಂಬುದು ಹೈಕಮಾಂಡ್ ಘೋಷಣೆ ಮಾಡದೆ ಗೋಪ್ಯವಾಗಿಟ್ಟಿರುವುದರಿಂದ ಮೂವರಲ್ಲಿಯೂ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಲು ಆಸಕ್ತಿ ಇಲ್ಲದೆ ನಿರ್ಲಪ್ತವಾಗಿರುವಂತೆ ಕಾಣುತ್ತಿದೆ. ಜಿಲ್ಲಾ ಮಟ್ಟಿಗೆ ಬಿಜೆಪಿಯ ಹೈಕಮಾಂಡ್ ಆಗಿರುವ ಸಂಸದ ಎಸ್.ಮುನಿಸ್ವಾಮಿ ಸಹ ಯಾರೊಬ್ಬರಿಗೂ ಸ್ಪಷ್ಟವಾಗಿ ಇಂತಹವರಿಗೇ ಟಿಕೆಟ್ ಎಂದು ಹೇಳದೆ ಗೊಂದಲ ಮೂಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಹೆಚ್.ಮುನಿಯಪ್ಪ ಅವರನ್ನು ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರ ಬೆಂಬಲದಿಂದಲೇ ಸೋಲಿಸಿದ್ದ ಬಿಜೆಪಿ ಸಂಸದ ಮುನಿಸ್ವಾಮಿ ಈ ಋುಣ ತೀರಿಸಲು ವಿಧಾನಸಭೆ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಮುಂದಾಗಿದ್ದಾರೆಂದು ಬಿಜೆಪಿ ಕಾರ್ಯಕರ್ತರೇ ಆರೋಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಚುನಾವಣೆಯಲ್ಲಿ ಸಹಾಯ ಮಾಡಿದ್ದರು. ಹೀಗಾಗಿ ಬಿಜೆಪಿಯಿಂದ ಪ್ರಬಲರಿಗೆ ಟಿಕೆಟ್ ನೀಡದೆ ಇರಲು ಹಾಗೂ ಕೊನೆ ಘಳಿಗೆಯಲ್ಲಿ ಟಿಕೆಟ್ ಘೋಷಣೆ ಮಾಡಿ ಕಾರ‍್ಯಕರ್ತರಲ್ಲಿ ಗೊಂದಲು ಸೃಷ್ಟಿಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಟಿಕೆಟ್ ಆಕಾಂಕ್ಷಿಗಳಿಲ್ಲಿ ಒಗ್ಗಟ್ಟು ಮೂಡಿಸಲು ಮೂವರಿಂದಲೂ ಕೋಲಾರಮ್ಮನ ಮೇಲೆ ಆಣೆ ಮಾಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಆದರೂ ಮೂವರಲ್ಲಿಯೂ ಈಗ ಒಗ್ಗಟ್ಟು ಮಾಯವಾಗಿದೆ. ಮಾ. 13ರಂದು ಸೋಮವಾರ ಮಾಜಿ ಸಿಎಂ.ಯಡಿಯೂರಪ್ಪ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಬಂಗಾರಪೇಟೆಗೆ ಬರುತ್ತಿದ್ದು ಅವರನ್ನು ಸ್ವಾಗತಿಸಲೂ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಮೂವರು ಆಕಾಂಕ್ಷಿಗಳನ್ನು ಒಂದುಗೂಡಿಸಿ ಯಾತ್ರೆ ಯಶಸ್ವಿಗೆ ಪಕ್ಷದ ತಾಲೂಕು ಅಧ್ಯಕ್ಷರು ಹರಸಾಹಸ ಮಾಡುತ್ತಿದ್ದಾರೆ.