ಮಡಿಕೇರಿಯಲ್ಲಿ ಮಗುಚಿ ಬಿದ್ದ ಬೆಂಗಳೂರು-ಎರ್ನಾಕುಲಂ ಐರಾವತ ಬಸ್..!

By Suvarna NewsFirst Published Jan 10, 2020, 10:50 AM IST
Highlights

ಬೆಂಗಳೂರಿನಿಂದ ಎರ್ನಾಕುಳಂಗೆ ತೆರಳುತ್ತಿದ್ದ ಐರವಾತ ಬಸ್ ಮಡಿಕೇರಿಯಲ್ಲಿ ರಸ್ತೆ ಬದಿಯ ಗದ್ದೆ ಬಯಲಿಗೆ ಮಗುಚಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ನಿಲ್ದಾಣ ಬಿಟ್ಟಿದ್ದ ಬಸ್ ಮುಂಚಾನೆಯ ಎರಡು ಗಂಟೆ ಸುಮಾರಿಗೆ ಗೋಣಿಕೊಪ್ಪ ನಗರ ದಾಟಿ ಪೊನ್ನಂಪೇಟೆ ತಲುಪಿತ್ತು.

ಮಡಿಕೇರಿ(ಜ.10): ರಾತ್ರಿ ವೇಳೆಯಲ್ಲಿ ಬೆಂಗಳೂರಿನಿಂದ ಎರ್ನಾಕುಲಂಗೆ ತೆರಳುತ್ತಿದ್ದ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಬಸ್ ಪೊನ್ನಂಪೇಟೆ ಸಮಿಪದ ಬೇಗೂರು ಗ್ರಾಮದ ಬಳಿಯ ರಸ್ತೆ ಬದಿಯ ಗದ್ದೆ ಬಯಲಿಗೆ ಮಗುಚಿಕೊಂಡಿದೆ.

ಅದ್ರಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ನಿಲ್ದಾಣ ಬಿಟ್ಟಿದ್ದ ಬಸ್ ಮುಂಚಾನೆಯ ಎರಡು ಗಂಟೆ ಸುಮಾರಿಗೆ ಗೋಣಿಕೊಪ್ಪ ನಗರ ದಾಟಿ ಪೊನ್ನಂಪೇಟೆ ಮಾರ್ಗವಾಗಿ ಗಡಿ ಭಾಗ ಕುಟ್ಟ ದಾಟಿ ಎರ್ನಾಕುಲಂಗೆ ಈ ಬಸ್ ತೆರಳುತ್ತಿತ್ತು.

ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಉರುಳಿ 12 ಮಂದಿಗೆ ಗಾಯ

ವಿಪರೀತ ಮಂಜಿನ ಬೀಳುತ್ತಿದ್ದ ಕಾರಣ ಬಸ್ ಚಾಲಕನಿಗೆ ರಸ್ತೆ ಕಾಣುತ್ತಿರಲಿಲ್ಲ ಎನ್ನಲಾಗಿದೆ. ದೊಡ್ಡ ತಿರುವು ದಾಟುತ್ತಿರು ಸಂದರ್ಭ ಸಮೀಪದ ಗದ್ದೆಗೆ ಮಗುಚಿಕೊಂಡಿದೆ. ಬಸ್ಸಿನಲ್ಲಿ ಚಾಲಕ,ಕಂಡಕ್ಟರ್ ಸೇರಿದಂತೆ 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.ಪೊನ್ನಂಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಆಟೋ: ಮೂವರು ಸ್ಥಳದಲ್ಲೇ ಸಾವು

click me!