Ramanagara: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್, 216 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

By Suvarna News  |  First Published Dec 16, 2022, 5:57 PM IST

ಅದು‌ ಇಡೀ ರಾಜ್ಯವನ್ನೇ ಸಂಚಲನ ಮೂಡಿಸಿದ್ದ ಶಿಕ್ಷಕ. ಸ್ವಾಮೀಜಿಯ ಮಸಲತ್ತು, ಲೇಡಿಯೊಬ್ಬಳ ಹನಿಜಾಲಕ್ಕೆ ಸಿಲುಕಿ ಮಠಾಧೀಶರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಜೈಲು ಪಾಲಾಗಿದ್ದರು. ಇದೀಗ ಪ್ರಕರಣ ಸಂಬಂಧ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್

ರಾಮನಗರ (ಡಿ.16): ಅದು‌ ಇಡೀ ರಾಜ್ಯವನ್ನೇ ಸಂಚಲನ ಮೂಡಿಸಿದ್ದ ಶಿಕ್ಷಕ. ಸ್ವಾಮೀಜಿಯ ಮಸಲತ್ತು, ಲೇಡಿಯೊಬ್ಬಳ ಹನಿಜಾಲಕ್ಕೆ ಸಿಲುಕಿ ಮಠಾಧೀಶರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಜೈಲು ಪಾಲಾಗಿದ್ರು. ಇದೀಗ ಪ್ರಕರಣ ಸಂಬಂಧ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಸಂಬಂಧಪಟ್ಟಂತೆ ಮಾಗಡಿ ಠಾಣೆ ಪೊಲೀಸರು ಮಾಗಡಿಯ ಮೊದಲನೇ ಜೆಎಮ್ ಎಫ್ ಸಿ ಕೋರ್ಟ್ ಗೆ ದೋಷಾರೋಪಣಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಅಂದಹಾಗೆ ಆಕ್ಟೋಬರ್ 24 ರಂದು ಬಂಡೇಮಠದ ಬಸವಲಿಂಗ ಸ್ವಾಮೀಜಿ ‌ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದಾದ ನಂತರ ಸ್ವಾಮೀಜಿ ವಿಡಿಯೋಗಳು ಸಹಾ ವೈರಲ್ ಆಗಿತ್ತು. ಪ್ರಕರಣ ಸಂಬಂಧ ಕುದೂರು ಠಾಣೆ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದರು. 

Tap to resize

Latest Videos

ಆದಾದ ನಂತರ ಪ್ರಕರಣ ಮಾಗಡಿ ಠಾಣೆಗೆ ವರ್ಗಾವಣೆಗೊಂಡಿತ್ತು. ತನಿಖೆ ನಡೆಸಿದ ಪೊಲೀಸರು ಕಣ್ಣೂರು ಮಠದ ಡಾ. ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಅಲಿಯಾಸ್ ಚಂದು, ನಿವೃತ್ತ ಶಿಕ್ಷಕ ಮಹದೇವಯ್ಯರನ್ನ ಬಂಧಿಸಿ‌ ಜೈಲಿಗೆ ಅಟ್ಟಿದ್ದಾರೆ. ಇನ್ನು‌ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಹಾ ಪ್ರಕರಣದಲ್ಲಿ ಎ೪ ಮಾಡಿಕೊಂಡಿದ್ದರು. ಇದೀಗ ಮಾಗಡಿ ಠಾಣೆ ಪೊಲೀಸರು 45 ದಿನಗಳಿಂದ ನಂತರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ‌ ಮಾಡಿದ್ದಾರೆ. 

ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣ: ತನಿಖೆಯ ದಾರಿ ತಪ್ಪಿಸಲು ‘ಹನಿ ಲೇಡಿ’ ಪ್ಲಾನ್

ಅಂದಹಾಗೆ ಪ್ರಕರಣ ಸಂಬಂಧ ತನಿಖೆ ನಡೆಸಿರೊ ಮಾಗಡಿ ಪೊಲೀಸರು 216 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಸ್ವಾಮೀಜಿಗೆ ಸಾವಿಗೆ ಕಾರಣವಾದ ಅಂಶಗಳನ್ನ ಉಲ್ಲೇಶ ಮಾಡಿದ್ದಾರೆ. ಪ್ರಮುಖವಾಗಿ ಬಂಡೇಮಠದ ಸ್ವಾಮೀಜಿ ಹಿಂದಿನ ಸ್ವಾಮೀಜಿ ಜೊತೆ ಸಾಕಷ್ಟು ಅನ್ಯೋನ್ಯತೆ ಇತ್ತು. ಆನಂತರ ಕಣ್ಣೂರು ಸ್ವಾಮೀಜಿಗೆ ಮಠದಲ್ಲಿ ಜಾಗವಿಲ್ಲದಂತೆ ಆಗಿತ್ತು. ಇದರಿಂದ ಬಂಡೇಮಠದ ಸ್ವಾಮೀಜಿ ಮೇಲೆ ಅಸೂಯೇ ದ್ವೇಷ ಬೆಳೆದಿತ್ತು. ಇದೇ ವೇಳೆ ನೀಲಾಂಬಿಕೆ ಸ್ವಾಮೀಜಿ ಜೊತೆ ಅನ್ಯೋನ್ಯತೆ ಇರುವುದು ಗೊತ್ತಾಗಿ‌ ಪೆಬ್ರವರಿ ಯಿಂದ ಪ್ಲಾನ್ ಮಾಡಿ ಏಪ್ರಿಲ್ ನಲ್ಲಿ ವಿಡಿಯೋ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಇನ್ನು 72 ಜನರನ್ನ ಸಾಕ್ಷಿಗಳಾಗಿ ಪರಗಣಿಸಲಾಗಿದೆ.

ಕತ್ತರಿಯಿಂದ ಹಲ್ಲೆ ಮಾಡಿ ಬಾಲಕಿಯನ್ನು ಮೊದಲ ಮಹಡಿಯಿಂದ ಎಸೆದ ಶಿಕ್ಷಕಿ

ಇನ್ನು ಪ್ರಕರಣ ಸಂಬಂಧ ಎ4 ಆರೋಪಿ ಸುರೇಶ್ ಎಂಬಾತ ತಲೆ ಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಸ್ವಾಮೀಜಿ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

click me!