Udupi: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದ ತೊಂದರೆ, ರಸ್ತೆ ಬಂದ್ ಮಾಡಿ ಸ್ಥಳೀಯರ ಆಕ್ರೋಶ

Published : Dec 16, 2022, 04:56 PM ISTUpdated : Dec 16, 2022, 05:07 PM IST
Udupi: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದ ತೊಂದರೆ, ರಸ್ತೆ ಬಂದ್ ಮಾಡಿ ಸ್ಥಳೀಯರ ಆಕ್ರೋಶ

ಸಾರಾಂಶ

ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲ ಸಮೀಪದ ಪರ್ಕಳದ ಕೆಳಪರ್ಕದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ರಸ್ತೆಯನ್ಬು  ನೇರವಾಗಿಮಾಡುವ ಉದ್ದೇಶದಿಂದ ಕೆಳಪರ್ಕದಲ್ಲಿ ಮಾತ್ರ ವಿನ್ಯಾಸ ಬದಲಾವಣೆ ಮಾಡಿರುವುದರಿಂದ ಅನೇಕ ಸಮಸ್ಯೆಗಳು ಉಂಟಾಗಿದೆ.

ಉಡುಪಿ (ಡಿ.16): ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲ ಸಮೀಪದ ಪರ್ಕಳದ ಕೆಳಪರ್ಕದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ರಸ್ತೆಯನ್ಬು  ನೇರವಾಗಿಮಾಡುವ ಉದ್ದೇಶದಿಂದ ಕೆಳಪರ್ಕದಲ್ಲಿ ಮಾತ್ರ ವಿನ್ಯಾಸ ಬದಲಾವಣೆ ಮಾಡಿರುವುದರಿಂದ ಅನೇಕ ಸಮಸ್ಯೆಗಳು ಉಂಟಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಜನಜೀವನ ಪೇಚೀಗೆ (ಇಕ್ಕಟ್ಟಿಗೆ) ಸಿಲುಕಿದೆ ! ನ್ಯಾಯಾಲಯದಲ್ಲಿ ಹೆಚ್ಚಿನವರ ತಡೆಆಜ್ಞೆ ಇದ್ದರೂ ಈ ಭಾಗದಲ್ಲಿ ಮಣ್ಣು ಹಾಕುವ ಕಾರ್ಯ ಬರದಿಂದ ಸಾಗಿದೆ ಎಂದು ನಾಗರಿಕರು ದೂರಿದ್ದಾರೆ. ಸ್ಥಳೀಯ ಗಣೇಶ ಶೆಣೈಯವರ ಮನೆಯ ಮುಂದೆ ಸಾಗಿ ಬಿಎಸ್ಎನ್ಎಲ್ . ಕಚೇರಿ ಸಂಪರ್ಕಿಸುವ ನಗರ ಸಭೆಯ ಪ್ರಮುಖ ರಸ್ತೆ ಇದ್ದರೂ ಮಣ್ಣು ಹಾಕುವ ಬರದಲ್ಲಿ ರಸ್ತೆಯನ್ನಾ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಕಾಮಗಾರಿಯನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟಿಸಿದ್ದಾರೆ.

ಸ್ಥಳೀಯರಿಗೆ ತೊಂದರೆಯಾಗಿದ್ದು ಇಲ್ಲಿ ಸೂಕ್ತವಾಗಿ ಅಂಡರ್ ಪಾಸ್ ಅಳವಡಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಾಮಗಾರಿಯಾಗುವ ತನಕ ಸಂಪರ್ಕ ಕಲ್ಪಿಸುವ ರಸ್ತೆ ಇರಬೇಕು.. ಇಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ.. ಸ್ಥಳೀಯವಾಗಿ ಮನೆ ಸಂಪರ್ಕಿಸಬೇಕಾದರೆ ಅವರು ಸುತ್ತುವರಿದು ಬರುವಂತ ಪರಿಸ್ಥಿತಿ ಉದ್ಭವಿಸಿದೆ ಎಂದು ಗಮನ ಸೆಳೆದಿದ್ದಾರೆ.

ಕಾಮಗಾರಿ ಮುಂದುವರಿಸಬೇಕು ಎಂಬ ಕಾರಣಕ್ಕೆ ಸ್ಥಳೀಯ ರಸ್ತೆಯನ್ನು ಏಕಾಏಕಿಯಾಗಿ ಬಂದು ಮಾಡಿ ಸಾರ್ವಜನಿಕರಿಗೆ ತೊಂದರೆಮಾಡಿದ್ದಾರೆ ಎಂದು ಜನರು ದೂರಿಕೊಂಡಿದ್ದಾರೆ. ನಗರಸಭೆಯ ಅಧ್ಯಕ್ಷೆ ಸುಮಿತ್ರ ನಾಯಕ್ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ತಿಳಿಸಿದರು.ಆದರೆ ಸಂಬಂಧಪಟ್ಟ ಪ್ರಮುಖ ಯಾವೊಬ್ಬ ಜನನಾಯಕರು  ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ನಾಗರಿಕರು  ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Road pathole: ರಸ್ತೆ ಗುಂಡಿ ಬಗ್ಗೆ ದೂರು ಬಂದರೆ ಕೇಸ್‌ ಹಾಕಿ: ಹೈಕೋರ್ಟ್

ನಗರಸಭೆ ಮಾಜಿ ಅಧ್ಯಕ್ಷೆ ಪತಿ ಮೇಲೆ ಮಾರಣಾಂತಿಕ ಹಲ್ಲೆ
ಮಣಿಪಾಲದ ಇಂದ್ರಾಳಿ ರಸ್ತೆಯ ನಿವಾಸಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ ಅವರ ಪತಿ ಕೃಷ್ಣ ನಾಯ್ಕ (54) ಮೇಲೆ ಯುವಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಆರೋಪಿಯನ್ನು ನೆರೆಮನೆಯ ಅರ್ಜುನ್‌ (35) ಎಂದು ಗುರುತಿಸಲಾಗಿದ್ದು, ಬೆಳಗ್ಗೆ 10.30ಕ್ಕೆ ಏಕಾಏಕಿ ಮನೆಗೆ ನುಗ್ಗಿದ ಆತ, ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿ, ಒಬ್ಬಂಟಿಯಾಗಿದ್ದ ಕೃಷ್ಣ ನಾಯ್‌್ಕ ಅವರನ್ನು ಚೂರಿಯಂತಹ ಆಯುಧದಿಂದ ಹೊಟ್ಟೆ, ತಲೆ, ಬೆನ್ನಿಗೆ ಇರಿದು ಗಾಯಗೊಳಿಸಿದ. ಈ ಸಂದರ್ಭ ಶಾಂತಾ ನಾಯ್ಕ ಸಾಮಾನು ತರಲು ಅಂಗಡಿಗೆ ತೆರಳಿದ್ದರು. ತೀವ್ರ ರಕ್ತಸ್ರಾವಗೊಂಡ ಕೃಷ್ಣ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Chikkamagaluru: ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದವರ ಬಂಧನ 

ಕೃಷ್ಣ ನಾಯ್ಕ ಅವರ ಬೊಬ್ಬೆ ಕೇಳಿ ಓಡಿ ಬಂದ ಸ್ಥಳೀಯರು ಬಾಗಿಲನ್ನು ಒಡೆದು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೃಷ್ಣ ನಾಯ್ಕ ಅವರು ಕೆಲವು ದಿನಗಳ ಹಿಂದೆ ತಮ್ಮ ನೂತನ ಮನೆಯ ಗೃಹಪ್ರವೇಶ ಮಾಡಿದ್ದರು. ಮನೆಯ ಜಮೀನಿಗೆ ಸಂಬಂಧಿಸಿ ಕೃಷ್ಣ ನಾಯ್ಕ ಮತ್ತು ಅರ್ಜುನ್‌ ನಡುವೆ ವೈಮನಸ್ಸು ಇತ್ತು, ಇದೇ ಕಾರಣಕ್ಕೆ ಹಲ್ಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

PREV
Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ