ಪಂಪನ ಕನಸಿನಂತೆ ಬನವಾಸಿ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

By Kannadaprabha News  |  First Published Mar 1, 2023, 1:26 AM IST

 ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯನ್ನು ಪಂಪನ ಕನಸಿನಂತೆಯೇ ಅಭಿವೃದ್ಧಿಗೊಳಿಸಲು ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಬನವಾಸಿಯಲ್ಲಿ ಮಂಗಳವಾರ ಎರಡು ದಿನಗಳ ನಡೆಯುವ ಕದಂಬೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಶಿರಸಿ (ಮಾ.1) : ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯನ್ನು ಪಂಪನ ಕನಸಿನಂತೆಯೇ ಅಭಿವೃದ್ಧಿಗೊಳಿಸಲು ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಬನವಾಸಿಯಲ್ಲಿ ಮಂಗಳವಾರ ಎರಡು ದಿನಗಳ ನಡೆಯುವ ಕದಂಬೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಂಪನ ಹುಟ್ಟೂರು ಅಣ್ಣಿಗೇರಿ. ಇದನ್ನೂ ಅಭಿವೃದ್ಧಿಗೊಳಿಸುತ್ತೇವೆ. ಬನವಾಸಿಯನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದರು.

ಕದಂಬೋತ್ಸವ(Kadambotsav) ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಿದ್ದೇವೆ. ಕದಂಬರು ಇಲ್ಲದೇ ಕರ್ನಾಟಕದ ಇತಿಹಾಸ ಎಂದಿಗೂ ಪೂರ್ಣ ಆಗುವುದಿಲ್ಲ. ಪರಕೀಯರ ಆಡಳಿತದಿಂದ ಬೇಸತ್ತ ದಿನಗಳು, ದೌರ್ಜನ್ಯವೇ ಜಾಸ್ತಿ ಇದ್ದಾಗ ಅದರ ವಿರುದ್ಧ ಸಿಡಿದೆದ್ದವರು ಕದಂಬರು. ಬನವಾಸಿಯನ್ನೇ ತನ್ನ ರಾಜಧಾನಿಯನ್ನಾಗಿ ಸಿಕೊಂಡವರು. ಸಾಹಿತ್ಯ, ಸಂಸ್ಕೃತಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದವರು ಕದಂಬರು. ಪಂಪ ರನ್ನರು ಹಳಗನ್ನಡವನ್ನು ಕಟ್ಟಿಬೆಳೆಸಿದವರು. ಮಧುಕೇಶ್ವರ ದೇವಾಲಯ ಅಂದಿನ ಶಿಲ್ಪಕಲೆ ಮಹತ್ವ ತಿಳಿಸುತ್ತವೆ. ಸುಖ, ಸಮೃದ್ಧಿ ಮೂಲಕ ಬನವಾಸಿ ಫಲವತ್ತಿನ ಭೂಮಿ ಆಗಿದೆ. ಕೆರೆಗಳಿಗೆ ನೀರು ಕೊರತೆ ಹಿನ್ನೆಲೆಯಲ್ಲಿ ನೀರು ತುಂಬಿಸುವ ಬೃಹತ್‌ ಯೋಜನೆ ನಿರ್ಮಿಸಿದ್ದಾರೆ. ಭೂಮಿ ತಾಯಿ ಮತ್ತೆ ಬಂಗಾರದ ಬೆಳೆ ನೀಡುತ್ತದೆ. ಶಿವರಾಮ ಹೆಬ್ಬಾರ್‌ ಅವರ ಭಗೀರಥ ಬಿರುದು ಸಾರ್ಥಕವಾಗಿದೆ ಎಂದರು.

Tap to resize

Latest Videos

Uttara Kannada: ಕದಂಬೋತ್ಸವ ಈ ವರ್ಷವೂ ಮರೀಚಿಕೆ?

.10 ಕೋಟಿ ಬಿಡುಗಡೆ:

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌(Shivaram hebbar) ಮಾತನಾಡಿ, ಎರಡು ವರ್ಷಗಳ ಬಳಿಕ ಕದಂಬೋತ್ಸವ(Kadambotsav 2023) ಆಚರಣೆ ಆಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪ್ರಾಧಿಕಾರ ರಚನೆ ಆಗಿದ್ದರೂ ಕಳೆದ ಎರಡು ವರ್ಷಗಳಿಂದ ಹಣ ಬಂದಿರಲಿಲ್ಲ. ಈ ವರ್ಷ .10 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಶೋಭೆ ತರುವಂತಹದ್ದಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಅನೇಕ ಉತ್ಸವಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಇದೇ ವೇಳೆ 2021-22ನೇ ಸಾಲಿನ ಪಂಪ ಪ್ರಶಸ್ತಿಯನ್ನು ಬಾಬು ಕೃಷ್ಣಮೂರ್ತಿ(Babu krishnamurthy) ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಬು ಕೃಷ್ಣಮೂರ್ತಿ, ಪಂಪ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದು ಆಶ್ಚರ್ಯ ಮೂಡಿಸಿತು. 60 ವರ್ಷಗಳಿಂದ ನಾನು ಪ್ರತಿಫಲಾಪೇಕ್ಷೆ ಇಲ್ಲದೇ ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಚಿಕ್ಕಂದಿನಿಂದಲೂ ನಾನು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡವನು. ಕುಟುಂಬದ ಸಂಸ್ಕೃತಿಯೇ ನನಗೆ ನೆಲೆಗಟ್ಟು ಒದಗಿಸಿದೆ. ದೇಶದ ದುಸ್ತಿತಿಗೆ ಕಾರಣ ಏನು, ಅನಾಮದೇಯ ಅನೇಕ ಯುವಕರು ದೇಶದ ಇತಿಹಾಸ ಸೃಷ್ಠಿಸಿದ್ದಾರೆ, ಬ್ರಿಟಿಷರನ್ನು ಎದುರಿಸಿ ನಿಂತಿದ್ದಾರೆ. ಅವರೆಂದೂ ಇತಿಹಾಸದ ಪುಟದಲ್ಲಿ ಉಲ್ಲೇಖವಾಗಿಲ್ಲ. ನನ್ನ ಬರವಣಿಗೆಯನ್ನು ಅಂಥವರ ಸಲುವಾಗಿ ಮೀಸಲಿಟ್ಟೆ. ಈ ಪ್ರಯತ್ನಕ್ಕೆ ಪಂಪ ಪ್ರಶಸ್ತಿ ಸಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾವು ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ. ದೇಶ ಒಡೆಯುವವರು ಒಂದೆಡೆ, ಕಟ್ಟುವವರು ಒಂದೆಡೆ. ದೇಶ ಕಟ್ಟುವವರಿಗೆ ಪ್ರೇರಣೆ ನೀಡುವುದು ನನ್ನ ಕಾರ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲ ಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ, ಶಾಸಕಿ ರೂಪಾಲಿ ನಾಯ್ಕ, ಗೋವಿಂದ ನಾಯ್ಕ, ಪ್ರಮೋದ ಹೆಗಡೆ, ತುಳಸಿ ಆರೇರ ಇತರರಿದ್ದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕೌಳಿಕಟ್ಟಿಸ್ವಾಗತಿಸಿದರು.

ಕಾರವಾರ: ಬನವಾಸಿ ಕದಂಬೋತ್ಸವ ನಡೆದು 2 ವರ್ಷವಾದ್ರೂ ಶಾಮಿಯಾನ ಮಾಲೀಕನಿಗೆ ಬಿಲ್‌ ಬಂದಿಲ್ಲ..!

ಕೃಷಿಕರೇ ನಮ್ಮ ನಾಡಿನಲ್ಲಿ ಜಾಸ್ತಿ ಇದ್ದಾರೆ. ನಾಡು ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕೆಂದರೆ ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಎಷ್ಟುಮುಂದಿದ್ದೇವೆ ಎಂಬುದೂ ಮುಖ್ಯ. ಕದಂಬೋತ್ಸವ ಈ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಕಲ್ಪಿಸುತ್ತಿದೆ.

- ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

click me!