ಭಕ್ತರ ಮನವಿಗೆ ಸ್ಪಂದನೆ: ದೇಗುಲ ಓಪನ್‌

Kannadaprabha News   | Asianet News
Published : Oct 21, 2020, 07:53 AM IST
ಭಕ್ತರ ಮನವಿಗೆ ಸ್ಪಂದನೆ: ದೇಗುಲ ಓಪನ್‌

ಸಾರಾಂಶ

ದೇವಾಲಯ ಪ್ರವೇಶ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ಭಕ್ತರು| ನಿರ್ಬಂಧ ನಿಯಮ ಸಡಿಲ| ದೇವಸ್ಥಾನದ ಒಳಗೆ 20 ಜನರು ಮಾತ್ರ ತೆರಳಬಹುದಾಗಿದೆ. 20 ಜನರು ದರ್ಶನ ಪಡೆದ ನಂತರವಷ್ಟೇ ಉಳಿದವರಿಗೆ ಪ್ರವೇಶ| ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಪಾಲಿಸಲು ಸೂಚನೆ| 

ಬೆಂಗಳೂರು(ಅ.21): ನವರಾತ್ರಿ ಹಿನ್ನೆಲೆ ಭಕ್ತರ ಒತ್ತಾಯದ ಮೇರೆಗೆ ಜಿಲ್ಲಾಡಳಿತ ನಗರದ ಬನಶಂಕರಿ ದೇವಾಲಯದಲ್ಲಿ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ.

ಬನಶಂಕರಿ ದೇವಾಲಯದಲ್ಲಿ ಮಾಸ್ಕ್‌, ಸ್ಯಾನಿಟೈಸ್‌ ಬಳಸಿ ಮುನ್ನೆಚ್ಚರಿಕೆ ಕೈಗೊಂಡರೂ ಸಾಮಾಜಿಕ ಅಂತರ ಪಾಲಿಸುತ್ತಿರಲಿಲ್ಲ. ಹೀಗಾಗಿ ಕೊರೋನಾ ಹೆಚ್ಚುವ ಆತಂಕದಿಂದ ನ.1ರ ವರೆಗೆ ದೇವಸ್ಥಾನಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಇದರಿಂದ ಭಕ್ತರು ದೇವಾಲಯದ ಹೊರಾಂಗಣದಲ್ಲಿ ನಿಂತು ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದರು.

ನವರಾತ್ರಿ ಇರುವುದರಿಂದ ನಿತ್ಯ ವಿಭಿನ್ನ ಅಲಂಕಾರ, ಧಾರ್ಮಿಕ ಕೈಂಕರ್ಯಗಳು ನೆರವೇರುತ್ತವೆ. ಹೀಗಾಗಿ ದೇವಾಲಯ ಪ್ರವೇಶ ನೀಡಬೇಕೆಂದು ಭಕ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರಿಂದ ನಿರ್ಬಂಧ ನಿಯಮವನ್ನು ಸಡಿಲಗೊಳಿಸಲಾಗಿದೆ. ಆದರೆ, ದೇವಸ್ಥಾನದ ಒಳಗೆ 20 ಜನರು ಮಾತ್ರ ತೆರಳಬಹುದಾಗಿದೆ. 20 ಜನರು ದರ್ಶನ ಪಡೆದ ನಂತರವಷ್ಟೇ ಉಳಿದವರಿಗೆ ಪ್ರವೇಶ ನೀಡಲಾಗುತ್ತದೆ. ಅಲ್ಲದೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ, ಸಂಜೆ 4.30ರಿಂದ ರಾತ್ರಿ 8.30ರವರೆಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ಸೂರ್ಯಗ್ರಹಣ: ಬೆಂಗಳೂರು ಬನಶಂಕರಿ ದೇಗುಲದಲ್ಲಿ ಭಕ್ತರಿಂದ ವಿಶೇಷ ಸೇವೆಗೆ ಅವಕಾಶವಿಲ್ಲ

ನವರಾತ್ರಿ ಹಿನ್ನೆಲೆ ಬನಶಂಕರಿ ದರ್ಶನ

ನವರಾತ್ರಿ ಹಿನ್ನೆಲೆ ಭಕ್ತರ ಒತ್ತಾಯದ ಮೇರೆಗೆ ಜಿಲ್ಲಾಡಳಿತ ನಗರದ ಬನಶಂಕರಿ ದೇವಾಲಯದಲ್ಲಿ ದೇವಿಯ ದರ್ಶನಕ್ಕೆ ಮಂಗಳವಾರದಿಂದ ಅನುವು ಮಾಡಿಕೊಟ್ಟಿದೆ. ಕೊರೋನಾ ಹೆಚ್ಚುವ ಆತಂಕದಿಂದ ನ.1ರ ತನಕ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇದಿಸಲಾಗಿತ್ತು.
 

PREV
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!