ಕುಡಿದ ಮತ್ತಿನಲ್ಲಿ ಲಾರಿ ಚಾಲನೆ: ಸರಣಿ ಅಪಘಾತ, ತಪ್ಪಿದ ಭಾರೀ ಅನಾಹುತ

Kannadaprabha News   | Asianet News
Published : Oct 21, 2020, 07:41 AM IST
ಕುಡಿದ ಮತ್ತಿನಲ್ಲಿ ಲಾರಿ ಚಾಲನೆ: ಸರಣಿ ಅಪಘಾತ, ತಪ್ಪಿದ ಭಾರೀ ಅನಾಹುತ

ಸಾರಾಂಶ

ಬೆಂಗಳೂರಿನಿಂದ ತಮಿಳುನಾಡು ಕಡೆಗೆ ಹೊರಟಿದ್ದ ಲಾರಿ| ಅತ್ತಿಬೆಲೆ ಸಮೀಪದ ಟೋಲ್‌ ಬಳಿ, ಚಾಲಕನ ನಿಯಂತ್ರಣ ತಪ್ಪಿ ಸರದಿ ಸಾಲಿನಲ್ಲಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ| ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿ| ಟೋಲ್‌ನಲ್ಲಿ ಹಣ ಕಟ್ಟಲು ನಿಂತಿದ್ದ 6 ವಾಹನಗಳು ಜಖಂ| 

ಆನೇಕಲ್‌(ಅ.21): ಕುಡಿದ ಮತ್ತಿನಲ್ಲಿ ಲಾರಿ ಚಾಲನೆ ಮಾಡಿದ ಕಾರಣ ಸರಣಿ ಅಪಘಾತ ನಡೆದು ಇಬ್ಬರು ತೀವ್ರವಾಗಿ ಗಾಯಗೊಂಡು, 6 ವಾಹನಗಳು ಜಖಂಗೊಂಡ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಿಇಟಿಎಲ್‌ ಟೋಲ್‌ನಲ್ಲಿ ಮಂಗಳವಾರ ನಡೆದಿದೆ.

ಬೆಂಗಳೂರಿನಿಂದ ತಮಿಳುನಾಡು ಕಡೆಗೆ ಹೊರಟಿದ್ದು ಲಾರಿಯೊಂದು ಅತ್ತಿಬೆಲೆ ಸಮೀಪದ ಟೋಲ್‌ ಬಳಿ, ಚಾಲಕನ ನಿಯಂತ್ರಣ ತಪ್ಪಿ ಸರದಿ ಸಾಲಿನಲ್ಲಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಟೋಲ್‌ನಲ್ಲಿ ಹಣ ಕಟ್ಟಲು ನಿಂತಿದ್ದ 6 ವಾಹನಗಳು ಜಖಂ ಆಗಿವೆ. ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಮಾನ್ವಿ: ಮಿನಿ ಲಾರಿ ಪಲ್ಟಿ, ಇಬ್ಬರ ದುರ್ಮರಣ

ಲಾರಿಯನ್ನು ವಶಕ್ಕೆ ಪಡೆದಿದ್ದು, ಮಾಲೀಕ ಹಾಗೂ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

PREV
click me!

Recommended Stories

ಕಮಲಾಕರ್ ಭಟ್, ಸುಚಿತ್ರಾ 'ಕಾಮಾಯಣ' ದೂರಿನ ನಿರ್ಲಕ್ಷ್ಯ: ಇಬ್ಬರು ಪೊಲೀಸರ ಎತ್ತಂಗಡಿ-ಎಸ್ಪಿ ದೀಪನ್ ಮಾಹಿತಿ!
'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್​ ಮೋದಿ ಬಗ್ಗೆ ಏನಂದ್ರು ಕೇಳಿ!