Muslim Traders Boycott: ವಿಜಯನಗರಕ್ಕೂ ಕಾಲಿಟ್ಟ ವ್ಯಾಪಾರದ ವಾರ್!

By Suvarna News  |  First Published Mar 28, 2022, 11:51 PM IST

ಕರಾವಳಿ ಮತ್ತು ಮಲೆನಾಡಿನಂತೆ ಇದೀಗ ಬಳ್ಳಾರಿ, ವಿಜಯನಗರಕ್ಕೂ ಮುಸ್ಲಿಂಮರ ವ್ಯಾಪಾರ ವಿವಾದ ವ್ಯಾಪಿಸತೊಡಗಿದೆ. ಯುಗಾದಿ ನಂತರ ಬಳ್ಳಾರಿ ಮತ್ತು ವಿಜಯನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ದೊಡ್ಡ ದೊಡ್ಡ ಜಾತ್ರೆಗಳಿವೆ ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಂರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬೇಡಿ ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಹೊಸಪೇಟೆ (ಮಾ.28): ಕರಾವಳಿ ಮತ್ತು ಮಲೆನಾಡಿನಂತೆ ಇದೀಗ ಬಳ್ಳಾರಿ, ವಿಜಯನಗರಕ್ಕೂ ಮುಸ್ಲಿಂಮರ ವ್ಯಾಪಾರ (Muslim Traders)  ವಿವಾದ ವ್ಯಾಪಿಸತೊಡಗಿದೆ. ಯುಗಾದಿ ನಂತರ ಬಳ್ಳಾರಿ ಮತ್ತು ವಿಜಯನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ದೊಡ್ಡ ದೊಡ್ಡ ಜಾತ್ರೆಗಳಿವೆ ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಂರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬೇಡಿ ಎಂದು ಹಿಂದೂ ಪರ ಸಂಘಟನೆಗಳು (Hindu Organizations) ಒತ್ತಾಯಿಸಿವೆ.

Latest Videos

undefined

ಸಿಎಎ & ಎನ್ಆರ್ಸಿ ಹೋರಾಟದ ಬಳಿಕ ತಣ್ಣಗಿದ್ದ ಅವಳಿ ಜಿಲ್ಲೆಗಳು: ಹೌದು! ಕಳೆದೆರಡು ವರ್ಷಗಳ ಹಿಂದೆ ನಡೆದ ಸಿಎಎ ಮತ್ತು ಎನ್ಆರ್ಸಿ ಹೋರಾಟದ ವೇಳೆ ಅವಳಿ ಜಿಲ್ಲೆಯಲ್ಲಿ ಮುಸ್ಲಿಂರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ರು. ಅದಾದ ಬಳಿಕ ಹಿಜಾಬ್ ವಿವಾದ ವೇಳೆ ಒಂದಷ್ಟು ಮುಸ್ಲಿಂರು ಬೀದಿಗೆ ಬಂದು ಹೋರಾಟ ಮಾಡಿದ್ದಾರೆ. ಆದರೆ ಇದೀಗ ಮಲೆನಾಡು ಮತ್ತು ಕರಾವಳಿ ಮಾದರಿಯಲ್ಲಿ ದಿನೇ ದಿನೇ ಸಣ್ಣಗೆ ಪ್ರತಿ ವಿಷಯದಲ್ಲಿ ವಾದವಿವಾದಗಳು ಹೋರಾಟಗಳು ಹಿಂದು ಮತ್ತು ಮುಸ್ಲಿಂ ಸಂಘಟನೆಯ ಮಧ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇದೀಗ ನೇರವಾಗಿ ಫೀಲ್ಡ್ ಗೆ ಇಳಿದಿರೋ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ವಿಜಯನಗರ ಜಿಲ್ಲೆಯ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ..

ವ್ಯಾಪಾರಕ್ಕೆ ಅವಕಾಶ ಕೊಟ್ರೇ ಹೋರಾಟದ ಎಚ್ಚರಿಕೆ: ಇನ್ನೂ ಜಾತ್ರೆ ಸೇರಿದಂತೆ ಯಾವೊಂದು ದೇವಸ್ಥಾನದ ಬಳಿ ಮುಸ್ಲಿಂರಿಗೆ ಯಾವುದೇ ಕಾರಣಕ್ಕೂ ವ್ಯಾಪಾರಸ್ಥರಿಗೆ ಅವಕಾಶ ನೀಡಬೇಡಿ ಒಂದು ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದೇ ಆದ್ರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.

Muslim Traders Boycott ಕೊಲ್ಲೂರು ಮೂಕಾಂಬಿಕಾ ಉತ್ಸವದಲ್ಲೂ ಮುಸ್ಲಿಂಮರಿಗೆ ನಿರ್ಬಂಧ

ಸಾಲು ಸಾಲು ಜಾತ್ರೆ: ಯುಗಾದಿ ನಂತರ ಹಂಪಿ ಜಾತ್ರೆ. ವಡಕರಾಯನ ಜಾತ್ರೆ. ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ಸೇರಿದಂತೆ ಹಲವು ಜಾತ್ರೆಗಳಿವೆ. ಹಿಂದೂ ಧಾರ್ಮಿಕ ವಿಚಾರಕ್ಕೆ ದಕ್ಕೆ ತರೋ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬೇಟ್ರೇ ಮತ್ತೊಮ್ಮೆ ಗೊಂದಲ ಪ್ರಾರಂಭವಾಗುತ್ತಿದೆ. ಯಾಕೆಂದರೆ, ಹಿಜಾಬ್ ವಿಚಾರದಲ್ಲಿ ಕೋರ್ಟ್ ಅದೇಶಕ್ಕೆ ಮನ್ನಣೆ ನೀಡದೇ ಒಂದು ದಿನ ವ್ಯಾಪಾರ ಬಂದ್ ಮಾಡಿದರು. ಸಂವಿಧಾನಕ್ಕೆ ಮತ್ತು ಕಾನೂನಿಗೆ ಬೆಲೆ ಕೊಡೋದ ರೀತಿಯಲ್ಲಿರೋ ಸಮುದಾಯದ ಜನರಿಗೆ ಯಾಕೆ ವ್ಯಾಪಾರಕ್ಕೆ ಅವಕಾಶ ಕೊಡಬೇಡಬೇಕೆಂದು ಹಿಂದೂಪರ ಸಂಘಟನೆಯ ಮುಖಂಡರು ಪ್ರಶ್ನಿಸಿದ್ದಾರೆ.

ಉತ್ತರ ಕರ್ನಾಟಕದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ: ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿರುವ ಪ್ರಸಂಗ ಕರಾವಳಿ, ಮಲೆನಾಡು, ಹಳೇ ಮೈಸೂರು ಜಿಲ್ಲೆಗಳ ಬಳಿಕ ಇದೀಗ ಉತ್ತರ ಕರ್ನಾಟಕಕ್ಕೂ ಹಬ್ಬಿದೆ. ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿಷೇಧಿಸಿರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮಾತ್ರವಲ್ಲದೆ ಜಾತ್ರೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಮುಸ್ಲಿಂ ವರ್ತಕರಿಂದ ಖರೀದಿ ಪ್ರಕ್ರಿಯೆ ನಡೆಸದಂತೆ ಅಭಿಯಾನ ನಡೆಸಿದ ಘಟನೆ ಕಲಬುರಗಿಯಲ್ಲಿ ಶುಕ್ರವಾರ ನಡೆದಿದೆ. 

ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ‌ಹಂಪಿಯ ಸ್ಪರ್ಶ: ಪ್ರವಾಸೋದ್ಯಮಕ್ಕೆ ಉತ್ತೇಜನ ‌ನೀಡುವ ಉದ್ದೇಶ

ಇನ್ನು ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನದ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಅನ್ಯಕೋಮಿನವರ ಮಳಿಗೆಯನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಖಾಲಿ ಮಾಡಿಸಿದ ಘಟನೆ ಕೊಡಗು ಜಿಲ್ಲೆಯ ಶನಿವಾರಸಂತೆಯಿಂದ ವರದಿಯಾಗಿದೆ. ಮನವಿ ಬಳಿಕ ಅಭಿಯಾನ: ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿಷೇಧಿಸುವಂತೆ ಆಗ್ರಹಿಸಿ ಶುಕ್ರವಾರ ಶ್ರೀರಾಮಸೇನೆಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದಾದ ನಂತರ ಇವರೆಲ್ಲರೂ ಇಲ್ಲಿನ ಶರಣ ಬಸವೇಶ್ವರರ ಜಾತ್ರೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಅಲ್ಲಿಗೆ ಬಂದಿದ್ದ ಮುಸ್ಲಿಂ ವ್ಯಾಪಾರಸ್ಥರ ಬಳಿ ಯಾರೂ ಖರೀದಿ ಮಾಡದಂತೆ ಅಭಿಯಾನ ನಡೆಸಿದರು.

click me!