ವಿಜಯನಗರ ಉಪಚುನಾವಣೆ: 'ಕೈ' ಪಕ್ಷದಿಂದ ಅಂತರ ಕಾಯ್ದುಕೊಂಡ ಶಾಸಕ

By Web Desk  |  First Published Nov 28, 2019, 9:59 AM IST

ವಿಜಯನಗರ ಉಪಚುನಾವಣೆಯಿಂದ ದೂರ ಉಳಿದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ‌. ನಾಗೇಂದ್ರ| ನಾಗೇಂದ್ರ ಇನ್ನೂ ಅಖಾಡದ ಕಡೆ ಮುಖ ಮಾಡಿಯೇ ಇಲ್ಲ| ತಾನು ಗೆದ್ದ ಪಕ್ಷದ ಅಭ್ಯರ್ಥಿ ಕಣದಲ್ಲಿ ಇದ್ರೂ, ಚುನಾವಣೆಗೂ ನನಗೂ ಸಂಬಂಧವಿಲ್ಲ ಎನ್ನುವಂತೆ ಇರುವ ನಾಗೇಂದ್ರ|


ಬಳ್ಳಾರಿ(ನ.28): ಜಿಲ್ಲೆಯ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಿಂದ ಭರ್ಜರಿ ಮತ ಪ್ರಚಾರ ನಡೆಯುತ್ತಿದೆ. ಆದರೆ, ಜಿಲ್ಲೆಯವರಾದ ಕಾಂಗ್ರೆಸ್ ನಾಯಕರೊಬ್ಬರು ಮಾತ್ರ ಈ ಉಪಚುನಾವಣೆಗೂ ನನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಪ್ರಚಾರ ಕಾರ್ಯದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. 

ಹೌದು, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಶಾಸಕ ಎಂದೇ ಹೇಳಲಾದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ‌. ನಾಗೇಂದ್ರ ಅವರು ವಿನಾ ಕಾರಣ  ಗೈರು ಎಂಬ ಆರೋಪ ಹೊತ್ತಿದ್ದಾರೆ.
ವಿಜಯನಗರ ಉಪಚುನಾವಣೆ ಇದ್ರೂ ಕೂಡ ಬಿ‌. ನಾಗೇಂದ್ರ ಮಾತ್ರ ಚುನಾವಣೆ ಅಖಾಡದಿಂದ ದೂರವೇ ಉಳಿದಿದ್ದಾರೆ. ಚುನಾವಣೆ ಕಣ ರಂಗೇರಿದ್ದರೂ, ಇದುವರೆಗೆ ನಾಗೇಂದ್ರ ಅವರು ಅಖಾಡದ ಕಡೆ ಮುಖ ಮಾಡಿಯೇ ಇಲ್ಲ. ನಾಗೇಂದ್ರ ಅವರು ಕೈ ಪಕ್ಷದಿಂದ ಅಂತರ ಕಾಯ್ದುಕೊಳ್ತಿದ್ದಾರೆ. ತಾನು ಗೆದ್ದ ಪಕ್ಷದ ಅಭ್ಯರ್ಥಿ ಕಣದಲ್ಲಿ ಇದ್ರೂ, ಚುನಾವಣೆಗೂ ನನಗೂ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಕಂಪ್ಲಿ ಗಣೇಶ ಅವರು ಬುಧವಾರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ, ಮತಯಾಚನೆ ಮಾಡಿದ್ದಾರೆ.  ಆದ್ರೇ ನಾಗೇಂದ್ರ ಮಾತ್ರ ಯಾರು ಹೇಳಿದ್ರು ಪ್ರಚಾರಕ್ಕೆ ಬರುತ್ತಿಲ್ಲ. 

ಇಂದು ಹೊಸಪೇಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವೆಂಕಟರಾವ್‌ ಘೋರ್ಪಡೆ ಪರ ಪ್ರಚಾರ ಮಾಡಲಿದ್ದಾರೆ. ಆದ್ರೇ ನಾಗೇಂದ್ರ ಮಾತ್ರ ಇವತ್ತು‌ ಕೂಡ ಚುನಾವಣೆಯತ್ತ ಸುಳಿಯೋದು ಫುಲ್ ಡೌಟ್ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಬಂದ ಮೇಲಾದ್ರೂ  ಚುನಾವಣೆ ಕಣಕ್ಕೆ ಹಾಜರಾಗಿ ಕೈ ಅಭ್ಯರ್ಥಿಗೆ ಸಾಥ್ ನೀಡ್ತಾರಾ? ಎಂಬುದನ್ನು ಕಾದು ನೋಡಬೇಲಕಿದೆ. ಬಿ‌. ನಾಗೇಂದ್ರ ಅವರು ಏಕೆ ಉಪಚನಾವಣೆ ಪ್ರಚಾರಕ್ಕೆ ಭಾಗಿಯಾಗುತ್ತಿಲ್ಲ ಎಂಬುದು ಮಾತ್ರ ಯಾರಿಗೂ ಗೊತ್ತಾಗಿಲ್ಲ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!