Ballari ಗೋವಿನ ಅಂತ್ಯಸಂಸ್ಕಾರಕ್ಕೆ ಸಾವಿರಾರು ಮಂದಿ, ಕಣ್ಣೀರಾದ ಜನತೆ

By Suvarna News  |  First Published May 18, 2022, 3:42 PM IST
  • ಗೋವಿನ ಅಂತ್ಯಸಂಸ್ಕಾರಕ್ಕೆ ಸೇರಿದ ಸಾವಿರಾರು ಜನರು 
  • ಬಲಕುಂದಿ ಗ್ರಾಮದಲ್ಲಿ ನಡೆದ ಹೃದಯಪೂರ್ವಕ ವಿದಾಯ 
  • ಬಿಕ್ಕಿ ಬಿಕ್ಕಿ ಅತ್ತ ಮಹಿಳೆಯರು ಮತ್ತು ಗ್ರಾಮಸ್ಥರು 

ವರದಿ : ನರಸಿಂಹ ಮೂರ್ತಿ ಕುಲಕರ್ಣಿ , ಏಷ್ಯಾನೆಟ್ ಸುವರ್ಣನ್ಯೂಸ್ 

ಬಳ್ಳಾರಿ (ಮೇ.18): ಅಲ್ಲಿ ಸಾವಿರಾರು ಜನರು ಸೇರಿದ್ರು.  ಆ ಊರಲ್ಲಿ ಒಂದು ಸಾವಾಗಿತ್ತು.‌ ಅದನ್ನು ನೋಡಲು ಮತ್ತು ಅದರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಜನ ತಂಡೋಪ ತಂಡವಾಗಿ ಬರುತ್ತಿದ್ರು. ಗ್ರಾಮಸ್ಥರು ಸೇರಿದಂತೆ ಮಹಿಳೆಯರು ಆ ಸಾವಿಗೆ ಬಿಕ್ಕಿ ಬಿಕ್ಕಿ ಆಳುತ್ತಿದ್ದರು. ಆದ್ರೇ, ಅಲ್ಲಿ ಸಾವನ್ನಪ್ಪಿರೋದು ಊರ ಮುಖಂಡರು ಅಥವಾ ರಾಜಕೀಯ ಮುಖಂಡರು ಆಗಿರಲಿಲ್ಲ ಬದಲಾಗಿ ಗ್ರಾಮದ ದೇವಸ್ಥಾನಕ್ಕೆ ಬಿಟ್ಟಿರೋ ಗೋವಿನದ್ದಾಗಿತ್ತು.  ಹೌದು ಮನುಷ್ಯ ಮೃತಪಟ್ಟರೇ ಬಾರದ ಜನರು ಒಂದು ಗೋವಿನ ಸಾವಿಗೆ ಇಷ್ಟೊಂದು ಜನರು ಸೇರಿರೋದೇ ಇಲ್ಲಿ ವಿಶೇಷವಾಗಿದೆ.

Tap to resize

Latest Videos

undefined

ಮಾಹಾಂಕಾಳಿ ದೇವಸ್ಥಾನ ಗೋವು: ಸಿರುಗುಪ್ಪ ತಾಲ್ಲೂಕಿನ ತಾಲೂಕಿನ ಬಲಕುಂದಿ ನಡೆದ ಈ ಆಕಳ ಸಾವು ಇಡೀ ತಾಲೂಕಿನ ಜನರು ಕಣ್ಣಿರಿನ ಕಡಲಿನಲ್ಲಿ ತೇಲುವಂತೆ ಮಾಡಿದ್ದಂತೂ ಸುಳ್ಳಲ್ಲ.  ಹೌದು, ಈ ಭಾಗದ ಅತ್ಯಂತ ಪ್ರಭಾವಶಾಲಿ ಹಾಗೂ ಐತಿಹಾಸಿಕ ಪ್ರಸಿದ್ಧಿಯ ಶ್ರೀ ಮಾಹಾಂಕಾಳಿ ಅಮ್ಮನವರ ದೇವಸ್ಥಾನ ಪರಿವಾರದ ಸದಸ್ಯನಂತಿದ್ದ ಈ ಆಕಳು ಅನಾರೋಗ್ಯದ ನಿಮಿತ್ತ ಸಾವನ್ನಪ್ಪಿದೆ.

CHITRADURGA ಈರುಳ್ಳಿ ಬೆಲೆ ಕುಸಿತಕ್ಕೆ ಕಂಗಾಲಾದ ರೈತರು

ಕಳೆದ ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಗ್ರಾಮದೇವತೆಯ ಹೆಸರಿನಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಅವರು ನೀಡಿದ ಆಹಾರ ಸ್ವೀಕರಿಸಿ ಗ್ರಾಮದಲ್ಲಿಯೇ ಇರುತ್ತಿತ್ತು.. ಇದೀಗ  ಗೋಮಾತೆಯಂತಿದ್ದ ಆಕಳು ಸಾವನ್ನಪ್ಪಿರೋದು ಗ್ರಾಮಸ್ಥರಲ್ಲಿ ನೋವನ್ನುಂಟು ಮಾಡಿತ್ತು.. 

ಅಂತಿಮ ಸಂಸ್ಕಾರಕ್ಕೆ ಹತ್ತೂರಿನ ಜನರ ಆಗಮನ: ಇನ್ನೂ ಗ್ರಾಮದ ಮಹಾಂಕಾಳಿ ದೇವಸ್ಥಾನದ ಗೋವು ಸಾವನ್ನಪ್ಪಿದ ‌ ವಿಷಯ ತಿಳಿಯುತ್ತಲೇ ಇಡೀ ಗ್ರಾಮದ ಜನರು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ರು. ವಿಷಯ ಒಬ್ಬರಿಂದ ಮತ್ತೊಬ್ಬರಿಗೆ ವಿಷಯ ತಿಳಿಯುತ್ತಲೇ ಸುತ್ತಮುತ್ತಲಿನ ‌ಹತ್ತಾರು ಊರುಗಳಿಂದ ಸಾವಿರಾರು ಜನರು ಸೇರಿದ್ರು. ಎತ್ತಿನ‌ಬಂಡಿ ಅಲಂಕಾರ ಮಾಡೋ ಮೃತದೇಹದ  ಮೆರವಣಿಗೆ ಮಾಡಲಾಯಿತು.

Chikkamagaluru ಕಿರುಕುಳಕ್ಕೆ ತಳ್ಳುವ ಗಾಡಿ ಸುಟ್ಟಪ್ರಕರಣ, ವ್ಯಾಪಾರಿ ಪರ ನಿಂತ ಜೆಡಿಎಸ್

ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಕಣ್ಣೀರಿಟ್ಟರು. ದಾರಿಯೂದ್ದಕ್ಕೂ ಹಾಡುಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ  ಮಂಗಳವಾದ್ಯಗಳೊಡನೆ  ಪುಷ್ಪನಮನ ಮತ್ತು ಪೂಜೆಗಳನ್ನು ಅರ್ಪಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನದ ಅಧ್ಯಕ್ಷ ತಳವಾರ ಹನುಮಂತಪ್ಪ ಪ್ರಮುಖರಾದ ಕೋರಿ ಪಿಡ್ಡಯ್ಯ ಸೇರಿದಂತೆ ಗ್ರಾಮದ ಮುಖಂಡರು ದೇವಿಯ ಭಕ್ತರು ಇದ್ದರು.

click me!