Udupi: ಗಾಂಜಾ ಸೇವನೆ ಮಾರಾಟ ವಿರುದ್ಧ ಆಪರೇಶನ್ ಸೂರ್ಯಾಸ್ತ, ಮೂವರ ಬಂಧನ

By Suvarna News  |  First Published Mar 20, 2023, 8:32 PM IST

ಉಡುಪಿ ಜಿಲ್ಲೆಯಾದ್ಯಂತ ಆಪರೇಶನ್ ಸೂರ್ಯಾಸ್ತ ಹೆಸರಿನಲ್ಲಿ ವಿಶೇಷ ಕಾರ್ಯಚರಣೆ ನಡೆಸಿ, ಗಾಂಜಾ ಸೇವನೆ, ಮಾರಾಟ, ಡ್ರಗ್ಸ್, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.


ಉಡುಪಿ (ಮಾ.20): ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರ ನೇತೃತ್ವದಲ್ಲಿ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಜಿಲ್ಲೆಯಾದ್ಯಂತ ಆಪರೇಶನ್ ಸೂರ್ಯಾಸ್ತ ಹೆಸರಿನಲ್ಲಿ ವಿಶೇಷ ಕಾರ್ಯಚರಣೆ ನಡೆಸಿ, ಗಾಂಜಾ ಸೇವನೆ, ಮಾರಾಟ, ಡ್ರಗ್ಸ್, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿರುವ  ಎಸ್ಪಿ ಅಕ್ಷಯ್, ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ಷ್ಮ ಪ್ರದೇಶಗಳು ಮತ್ತು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದರು.  

ಮೂವರ ಬಂಧನ
ಅನಿರೀಕ್ಷಿತ ತಪಾಸಣೆಯಿಂದಾಗಿ ಗಾಂಜಾ ಮತ್ತು ಎಮ್.ಡಿ.ಎಮ್.ಎ ಗಳನ್ನು ಸಣ್ಣ ಪ್ರಮಾಣದಲ್ಲಿ ಹೊಂದಿದ್ದ ಮೂವರನ್ನು ಬಂಧಿಸಲಾಗಿದೆ. ಜೊತೆಗೆ 45 ಲೀ ಮದ್ಯಪಾನವನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. 

Latest Videos

undefined

ಬೆರಳಚ್ಚು ಸ್ಕ್ಯಾನಿಂಗ್ ಯಂತ್ರದ ಸಹಾಯದಿಂದ ನಿರಂತರ ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 60 ಕ್ಕೂ ಹೆಚ್ಚು ಆರೋಪಿಗಳನ್ನು ಪರಿಶೀಲಿಸಲಾಯಿತು. 

ವಾಹನಗಳನ್ನು ತಪಾಸಣೆ ನಡೆಸಿ ನಕಲಿ ನಂಬರ್ ಪ್ಲೇಟ್, ಮದ್ಯಪಾನ ಸೇವಿಸಿ ವಾಹನ ಚಾಲನೆ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ದಾಖಲೆ ಇಲ್ಲದ 29 ವಾಹನವನ್ನು ವಶಕ್ಕೆ ಪಡೆಯಲಾಯಿತು. ಮದ್ಯಪಾನ ಸೇವಿಸಿ ವಾಹನ ಚಲಾಯಿಸಿ ಬಗ್ಗೆ 32 ಪ್ರಕರಣ ದಾಖಲಿಸಲಾಯಿತು. ಒಟ್ಟು 258 ಪ್ರಕರಣ ದಾಖಲಿಸಿ, 1,30,000 ರೂ ದಂಡ ಸಂಗ್ರಹವಾಗಿದೆ. 

ನಿಷೇಧಿತ ಸ್ಥಳದಲ್ಲಿ ಇ-ಸಿಗರೇಟ್, ತಂಬಾಕು ಗುಟ್ಕಾಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ತಪಾಸಣೆ ನಡೆಸಿ ಕೋಟ್ಟಾ ಕಾಯ್ದೆಯಡಿ 44 ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದ  17 ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದೇವೆ.

ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದ್ರೆ ಹುಷಾರ್!, ಉಡುಪಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಜಿಲ್ಲೆಯಾದ್ಯಂತ ವಿವಿಧ ಠಾಣೆಯಲ್ಲಿ ರೌಡಿ ಶೀಟರ್ ಗಳಾಗಿರುವ 65 ಜನರನ್ನು ಅನೀರಿಕ್ಷಿತವಾಗಿ ತಪಾಸಣೆ ನಡೆಸಿ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ನಿಗಾವಹಿಸಲಾಗಿದೆ.

ಕೂಲಿ ಕೆಲಸ ಜತೆಗೆ ಪಾರ್ಟ್ ಟೈಂ ಜಾಬ್ ಕಳ್ಳತನ, ಶೋಕಿಗಾಗಿ ಕದ್ದ ಬೈಕ್ ಗಿರವಿಯಿಟ್ಟು ಮೋಜು!

ಉಡುಪಿ ಜಿಲ್ಲೆಯ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಆತ್ಮ ವಿಶ್ವಾಸ ನಿರ್ಮಿಸಲು, ಇಂತಹ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರ ಬಗ್ಗೆ ತೀವ್ರ ನಿಗಾ ವಹಿಸಿ ಕಾನೂನಿನ ಪರಿಪಾಲನೆ ಮಾಡುವ ಸಲುವಾಗಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದ್ದಾರೆ.

click me!