ಮುಳುಗಡೆ ನಗರಿ ಬಾಗಲಕೋಟೆಯ ಹೋಳಿ ಹಬ್ಬ ನಗರದ ಸಾಂಸ್ಕ್ರತಿಕ ಅಸ್ಮೀತೆಯ ಪ್ರತಿಕವಾಗಿದ್ದು, ದೇಶದಲ್ಲಿಯೆ ಬಾಗಲಕೋಟೆ ಹೋಳಿ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆ ವಿಷಯವಾಗಿದೆ ಎಂದು ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಫೆ.27): ಮುಳುಗಡೆ ನಗರಿ ಬಾಗಲಕೋಟೆಯ ಹೋಳಿ ಹಬ್ಬ ನಗರದ ಸಾಂಸ್ಕ್ರತಿಕ ಅಸ್ಮೀತೆಯ ಪ್ರತಿಕವಾಗಿದ್ದು, ದೇಶದಲ್ಲಿಯೆ ಬಾಗಲಕೋಟೆ ಹೋಳಿ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆ ವಿಷಯವಾಗಿದೆ ಎಂದು ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು. ಅವರು ಐತಿಹಾಸಿಕ ಹೋಳಿ ಉತ್ಸವ ನಿಮಿತ್ತ ಬಾಗಲಕೋಟೆ ನಗರದ ವಿನಾಯಕನಗರ ಬಡಾವಣೆಯಲ್ಲಿ ತೃತೀಯ ಬಾರಿಗೆ ಹಲಗೆ ಮೇಳ ಸ್ಪರ್ಧೆಗೆ ಹಲಗಿ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
undefined
ಹೋಳಿ ಉತ್ಸವ ಆಚರಣೆಯಲ್ಲಿ ದೇಶದಲ್ಲಿಯೆ ಎರಡನೆಯ ಸ್ಥಾನದಲ್ಲಿದೆ. ಇಂದು ವಿನಾಯಕ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಇದರೊಟ್ಟಿಗೆ ಸಾಂಸ್ಕ್ರತಿಕ ಹೆಮ್ಮೆ ಎನಿಸಿಕೊಂಡಿರುವ ಹೋಳಿ ಹಬ್ಬ ನಿರಂತರ ನಾಲ್ಕೈದು ದಿನಗಳ ಕಾಲ ನಡೆಯಲಿದ್ದು, ಅದಕ್ಕೂ ಮುನ್ನವೇ ಎಲ್ಲೆಡೆ ಹೋಳಿ ಹಲಗೆ ಸ್ಫರ್ಧೆ ಆಯೋಜನೆ ಮೂಲಕ ಗಮನ ಸೆಳೆಯುತ್ತಿರುವುದು ಹೆಮ್ಮೆ ವಿಷಯ ಎಂದರು.
ಹೋಳಿ ಹಬ್ಬದಲ್ಲಿ ಊರು ತೊರೆಯದೇ ಸಂಪ್ರದಾಯಿಕ ಬಣ್ಣದಾಟವಾಡಲು ಕರೆ: ಇನ್ನು ಮಹಾಬಳೇಶ ಗುಡಗುಂಟಿ ಮಾತನಾಡಿ, ಹೋಳಿ ಉತ್ಸವ ಆಚರಣೆಯ ಮತ್ತು ಸಂಪ್ರದಾಯಿಕ ಪದ್ದತಿಯನ್ನು ತಿಳಿಸಿ, ಪ್ರತಿಯೊಬ್ಬರು ಐತಿಹಾಸಿಕವಾಗಿರುವ ಬಾಗಲಕೋಟೆ ಹೋಳಿ ಹಬ್ಬದಲ್ಲಿ ಭಾಗವಹಿಸುವಂತಾಗಬೇಕು, ಯಾರೂ ಹೋಳಿ ಸಂದರ್ಭದಲ್ಲಿ ಊರು ತೊರೆಯದೇ ಪ್ರತಿಯೊಬ್ಬರು ಬಣ್ಣದಾಟದಲ್ಲಿ ಪಾಲ್ಗೊಂಡು ಮೆರಗು ತರುವಂತಾಗಬೇಕೆಂದು ಹೇಳಿದರು.
ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ: ಸಚಿವ ಅಶೋಕ್ ವ್ಯಂಗ್ಯ
ಈ ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯರಾದ ಶೀವಲೀಲಾ ಪಟ್ಡಣ ಶೆಟ್ಟಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಬಿಜೆಪಿ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರ ಮಂಡಲ ಅದ್ಯಕ್ಷ ಸದಾನಂದ ನಾರಾ, ಕಳಕಪ್ಪ ಬಾದೋಡಗಿ, ರಮೇಶ ಕಾಂಬಳೆ,ದೀಲಿಪ್ ಘಾಟಗೆ, ಬಿ.ಟಿ.ಪಾಟೀಲ, ಸಂಗನ್ನ ಕಾರಪುಡಿ, ಸಂಗಮೇಶ ವೈಜಾಪುರ, ಸಂಜು ವಾಡ್ಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.