Anti Conversion Bill : 'ಯಾವ ಧರ್ಮದಲ್ಲಿ ಜನ್ಮ ತಾಳಿರುತ್ತಾನೋ ಅದೇ ಧರ್ಮದಲ್ಲಿರಬೇಕು'

By Suvarna News  |  First Published Dec 15, 2021, 2:11 PM IST
  • ಮನುಷ್ಯ ಯಾವ ಧರ್ಮದಲ್ಲಿ ಜನ್ಮ ತಾಳಿರುತ್ತಾನೆಯೋ ಅದೇ ಧರ್ಮದಲ್ಲಿ ಇರಬೇಕು
  • ಭಗವದ್ಗೀತೆಯಲ್ಲಿ ಇದನ್ನೇ  ಹೀಗೆ  ಸ್ವಧರ್ಮೆ, ನಿಧನಂ ಶ್ರೇಯಃ, ಪರ ಧರ್ಮ, ಭಾಯಾ ವಹಹಾ ಎಂದು ಹೇಳಲಾಗುತ್ತದೆ  - ಶ್ರೀ ಶೈಲ ಸ್ವಾಮೀಜಿ

 ಬಾಗಲಕೋಟೆ (ಡಿ.15): ಮನುಷ್ಯ ಯಾವ ಧರ್ಮದಲ್ಲಿ (Religion) ಜನ್ಮ ತಾಳಿರುತ್ತಾನೆಯೋ ಅದೇ ಧರ್ಮದಲ್ಲಿ ಇರಬೇಕು.  ಭಗವದ್ಗೀತೆಯಲ್ಲಿ ಇದನ್ನೇ  ಹೀಗೆ  ಸ್ವಧರ್ಮೆ, ನಿಧನಂ ಶ್ರೇಯಃ, ಪರ ಧರ್ಮ, ಭಾಯಾ ವಹಹಾ ಎಂದು ಹೇಳಲಾಗುತ್ತದೆ ಎಂದು  ಬಾಗಲಕೋಟೆಯಲ್ಲಿ (Bagalkote) ಶ್ರೀಶೈಲ ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾಯ೯  ಸ್ವಾಮೀಜಿ  ಜಗದ್ಗುರುಗಳ ಹೇಳಿದರು. ಇಂದು ಮತಾಂತರ ಕಾಯಿದೆ (Anti Conversion Bill) ಜಾರಿ ವಿಚಾರದ ಸಂಬಂಧ ಮಾತನಾಡಿದ  ಚನ್ನ ಸಿದ್ಧರಾಮ ಪಂಡಿತಾರಾದ್ಯ ಶಿವಾಚಾಯ೯  ಸ್ವಾಮೀಜಿ ಬೇಕಾದಷ್ಟು ಸಮಸ್ಯೆಗಳಿರಲಿ, ತಾನು ಜನ್ಮ ತಾಳಿದ ಧರ್ಮದಲ್ಲಿ ಇದ್ದುಕೊಂಡು ಸಾಧನೆ ಮಾಡಬೇಕೆ ಹೊರತು ಇನ್ನೊಂದು ಧರ್ಮಕ್ಕೆ ಹೋಗಬಾರದು ಎಂದರು.

ಇನ್ನೊಂದು ಧರ್ಮಕ್ಕೆ ಹೋಗುವಂತಹ ಅಥವಾ ಮತ್ತೊಂದು ಧರ್ಮವನ್ನ ಪಡೆದುಕೊಳ್ಳುವ ಪ್ರಯತ್ನ ಸಾಧುವಲ್ಲ ಎಂದು ಭಗವದ್ಗೀತೆಯಲ್ಲಿ (Bagavdgeetha) ಹೇಳಿದೆ.  ಯಾರಾದರೂ ಸ್ವ ಇಚ್ಚೆಯಿಂದ ಇನ್ನೊಂದು ಧರ್ಮದಲ್ಲಿರುವ ಶ್ರೇಷ್ಟತೆಯನ್ನು  ಶ್ರೇಷ್ಠ ಗುಣ ಹಾಗೂ ಶ್ರೇಷ್ಠ ಹಾದಿಯನ್ನ ನೋಡಿ ಅವರು ಆ ಧರ್ಮಕ್ಕೆ ಬರುತ್ತಾರೆಂದರೆ ಏನೂ ತೊಂದರೆ ಇಲ್ಲ. ಆದ್ರೆ ಭಯ ಹುಟ್ಟಿಸಿ, ಆಮಿಷ ಒಡ್ಡಿ ಮತಾಂತರ ಮಾಡುವುದು ಸೂಕ್ತವಲ್ಲ ಎಂದರು. 

Tap to resize

Latest Videos

ಭಯ ಹುಟ್ಟಿಸಿ, ಆಮಿಷ ಒಡ್ಡಿ ಮತಾಂತರ ಮಾಡುವುದು ಸೂಕ್ತವಲ್ಲ. ಅದನ್ನ ತಡೆಗಟ್ಟಲು ಕಾನೂನು (Law) ತರುವುದು ಒಳ್ಳೆಯದು ಎಂದು ಬಾಗಲಕೋಟೆಯಲ್ಲಿ (Bagalkote) ಶ್ರೀ ಶೈಲ ಚನ್ನ ಸಿದ್ಧರಾಮ ಪಂಡಿತಾರಾದ್ಯ ಶಿವಾಚಾಯ೯ ಸ್ವಾಮೀಜಿ ಜಗದ್ಗುರುಗಳ ತಿಳಿಸಿದರು.

ಮತಾಂತರ ಕಾಯ್ದೆ ಬಗ್ಗೆ ಸಚಿವರ ಹೇಳಿಕೆ :  ಪರಿಶಿಷ್ಟಜಾತಿ (Scheduled Castes)ಯ ವ್ಯಕ್ತಿಯೇನಾದರೂ ಕ್ರಿಶ್ಚಿಯನ್‌ ಆಗಿ ಮತಾಂತರವಾದರೆ (Conversion to Christianity) ಆತ ಅಲ್ಪಸಂಖ್ಯಾತನಾಗುತ್ತಾನೆ. ಆತನ ಮೂಲ ಜಾತಿ ಪ್ರಮಾಣ ಪತ್ರವು (Caste Certificate) ತಿದ್ದುಪಡಿಗೊಳ್ಳಲಿರುವ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಬದಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J. C. Madhu Swamy) ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅನ್ಯಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟಜಾತಿಯ ಸೌಲಭ್ಯ ಪಡೆಯುವುದು ಇನ್ನು ಮುಂದೆ ಅಸಾಧ್ಯ ಎಂದು ತಿಳಿಸಿದ್ದಾರೆ.

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪರಿಶಿಷ್ಟಜಾತಿಯವರು ಮತಾಂತರವಾದರೆ ಮಾತ್ರ ಅವರ ಪ್ರಮಾಣಪತ್ರ ಬದಲಾಗುತ್ತದೆ. ಆದರೆ, ಪರಿಶಿಷ್ಟಪಂಗಡ (Scheduled Tribes) ದವರು ಮತಾಂತರಗೊಂಡರೆ ಮೂಲ ಜಾತಿ ಪ್ರಮಾಣಪತ್ರದಲ್ಲೇ ಅಂದರೆ ಎಸ್ಟಿ ಪ್ರಮಾಣಪತ್ರದಲ್ಲೇ ಮುಂದುವರಿಯುತ್ತಾರೆ. ಎಸ್ಸಿ ಜಾತಿ ಸೂಚಕವಾದರೆ, ಎಸ್ಟಿಬುಡಕಟ್ಟು ಸೂಚಕ. ಹೀಗಾಗಿ ಪರಿಶಿಷ್ಟಪಂಗಡದವರು ಯಾವುದೇ ಧರ್ಮಕ್ಕೆ ಬದಲಾದರೂ ಅವರು ಎಸ್‌ಟಿಯಾಗಿಯೇ ಮುಂದುವರಿಯುತ್ತಾರೆ. ಈ ಅಂಶವನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

ಮತಾಂತರ ನಿಷೇಧ ಮಸೂದೆಯನ್ನು ಚರ್ಚೆಗೆ ಇಡುತ್ತೇವೆ:

ಮತಾಂತರ ನಿಷೇಧ ಮಸೂದೆಯನ್ನು (Anti Conversion Bill) ಮುಂದಿನ ವಾರ ಅಧಿವೇಶನದಲ್ಲಿ ಚರ್ಚೆಗೆ ಇಡುತ್ತೇವೆ. ಮತಾಂತರ ನಿಷೇಧಕ್ಕೆ ಸಂಬಂಧಿಸಿ ಕಾಯ್ದೆ ತರಲು ಸರ್ಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ಆದರೆ ಅದರ ರೂಪುರೇಷೆ ಬಗ್ಗೆ ತಿಳಿದುಕೊಳ್ಳಲು ಒಂದಷ್ಟುಸಮಯ ಕೇಳಿದ್ದೇನೆ. ಯಾರಿಗೂ ನೋವು ಆಗದ, ತೊಂದರೆ ಆಗದ ರೀತಿಯಲ್ಲಿ ಕಾಯ್ದೆ ಇರಬೇಕೆಂದು ಯೋಚಿಸಿದ್ದೇವೆ. ಮತಾಂತರ ನಿಷೇಧ ಕಾಯಿದೆ ಈಗಾಗಲೇ ದೇಶದಲ್ಲಿ ಜಾರಿಯಲ್ಲಿದೆ. ಈಗಿರುವ ಕಾನೂನಿನಲ್ಲಿ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ. ಆದರೆ ಯಾವ ರೀತಿಯ ಶಿಕ್ಷೆ ಕೊಡಬೇಕು ಅನ್ನುವುದು ಮಾತ್ರ ಈಗ ಚರ್ಚೆ ಆಗಬೇಕಿದೆ ಎಂದರು.

ಸ್ವಇಚ್ಛೆಯ ಮತಾಂತರಕ್ಕೂ ನಿಯಮ: ರೂಪುರೇಷೆ ಸಿದ್ಧ

ಸ್ವಇಚ್ಛೆಯ ಮತಾಂತರಕ್ಕೂ ಒಂದಷ್ಟುರೂಪುರೇಷೆ ಸಿದ್ಧಗೊಳಿಸುವುದಾಗಿ ತಿಳಿಸಿದ ಅವರು, ಮತಾಂತರ ಆಗುವವನು ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲ ಎಂದು ಸ್ಪಷ್ಟವಾದ ಮೇಲೆ ಜಿಲ್ಲಾಧಿಕಾರಿಗಳು ಅರ್ಜಿಯನ್ನು ಪುರಸ್ಕರಿಸಬಹುದು. ಸಂಘ-ಸಂಸ್ಥೆಗಳು ನಾವು ಈ ವ್ಯಕ್ತಿಗಳನ್ನು ಕಾನೂನಿನಡಿ ಮತಾಂತರಗೊಳಿಸುತ್ತೇವೆ ಎಂದೂ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಮದುವೆ ನೋಂದಣಿಯ ಮಾದರಿಯಲ್ಲೇ ಮತಾಂತರ ನೋಂದಣಿ ಆದ ನಂತರ ಮತಾಂತರಗೊಂಡ ವ್ಯಕ್ತಿ ಹೆಸರನ್ನು ನೋಟಿಸ್‌ ಬೋರ್ಡ್‌ಗೆ ಹಾಕಲಾಗುತ್ತದೆ. ಯಾವುದೇ ದೂರು ಆಕ್ಷೇಪ ಇಲ್ಲದಿದ್ದರೆ ಮತಾಂತರವನ್ನು ಪುರಸ್ಕಾರ ಮಾಡಲಾಗುತ್ತದೆ ಎಂದರು.

ಎಸ್ಸಿ ಜಾತಿ ಸೂಚಕ ಎಸ್ಟಿ ಎಂಬುದು ಬುಡಕಟ್ಟು ಸೂಚಕ

ಎಸ್ಸಿ ಎಂಬುದು ಜಾತಿ ಸೂಚಕವಾದರೆ, ಎಸ್ಟಿ ಎಂಬುದು ಬುಡಕಟ್ಟು ಸೂಚಕ. ಹೀಗಾಗಿ ಪರಿಶಿಷ್ಟಪಂಗಡದವರು ಯಾವುದೇ ಧರ್ಮಕ್ಕೆ ಬದಲಾದರೂ ಅವರು ಎಸ್‌ಟಿಯಾಗಿಯೇ ಮುಂದುವರಿಯುತ್ತಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ

ಮತಾಂತರ ಕಾಯ್ದೆ ಬಗ್ಗೆಆತಂಕ ಬೇಡ: ಸಿಎಂ

ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿ ಯಾವ ಧರ್ಮೀಯರೂ ಆತಂಕ ಪಡುವ ಅಗತ್ಯವಿಲ್ಲ. ಬೆಳಗಾವಿ ಅಧಿವೇಶನದ ವೇಳೆ ಕಾನೂನು ಇಲಾಖೆ ಈ ಮಸೂದೆಯ ಪ್ರಸ್ತಾವ ಕೊಟ್ಟರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

click me!