ರಾಂಪುರ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು..!

Published : Aug 01, 2019, 12:36 PM ISTUpdated : Aug 01, 2019, 01:05 PM IST
ರಾಂಪುರ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು..!

ಸಾರಾಂಶ

ಅವ್ಯವಸ್ಥೆ ಆಗರವಾದ ಬಾಗಲಕೋಟೆ ರಾಂಪುರ ಸರ್ಕಾರಿ ಆಸ್ಪತ್ರೆ..!| ರೋಗಿಗಳಲ್ಲ, ಇಲ್ಲಿ ಬೆಡ್ ಮೇಲೆ ಬಂದು ಮಲಗುತ್ತಿವೆ ನಾಯಿಗಳು| ರೋಗಿಯ ಬೆಡ್ ಮೇಲೆ ಬಂದು ಮಲಗಿದ ರೋಗ ಪೀಡಿತ ಶ್ವಾನ..!| 

ಬಾಗಲಕೋಟೆ[ಆ.01]: ಬಾಗಲಕೋಟೆಯ ರಾಂಪುರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಈ ಆಸ್ಪತ್ರೆಯಲ್ಲಿ ಶ್ವಾನಗಳ ದರ್ಬಾರ್. ರೋಗಿಗಳು ಮಲಗುವ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು ಮಲಗುತ್ತಿದ್ದು, ರೋಗಿಗಳು ಈ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಹೌದು ಈ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ನಾಯಿಗಳು ಬಂದು ಮಲಗಿದರೂ ಯಾರು ಕೇಳುವವರೇ ಇಲ್ಲ. ಈ ಅವ್ಯವಸ್ಥೆಯಿಂದಾಗಿ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರಲು ಭಯ ಪಡುತ್ತಿದ್ದಾರೆ. ರೋಗಿಯೂ ಚಿಕಿತ್ಸೆ ಪಡೆಯುತ್ತಿದ್ದ ಬೆಡ್ ಮೇಲೆ ರೋಗ ಪೀಡಿತ ನಾಯಿ ಬಂದು ಮಲಗುತ್ತಿವೆ. 

ಈ ವಿಚಾರವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಏನ್ರೀ ಅವ್ಯವಸ್ಥೆ ಎಂದು ಪ್ರಶ್ನಿಸಿದರೆ ನಾವೇನ್ ಮಾಡೋಣ ಎಂದು ಮರು ಪ್ರಶ್ನಿಸುತ್ತಾರೆ. ಸದ್ಯ ಇಂತಹ ಅವ್ಯವಸ್ಥೆಯಿಂದ ಕೂಡಿದ ರಾಂಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. 
 

PREV
click me!

Recommended Stories

ದಿವ್ಯಾಂಗ ಯುವತಿ ಮೇಲೆ ಬಲಾತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!
Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ