ಮೈಸೂರು ದಸರೆಗೆ ಸ್ಟಾರ್ ಮೆರುಗು| ದಸರಾ ಕ್ರೀಡಾಕೂಟವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಘಾಟಿಸಲಿದ್ದಾರೆ| ಅ. 1 ರಂದು ಕ್ರೀಡಾಕೂಟ ಮತ್ತು ಯುವ ದಸರಾ ಉದ್ಘಾಟನೆ|
ಮೈಸೂರು(ಸೆ.20): ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುವ ಯುವ ದಸರಾ ಸಂಭ್ರಮ ಮಾತ್ರವಲ್ಲದೆ, ದಸರಾ ಕ್ರೀಡಾಕೂಟದಲ್ಲೂ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪಾಲ್ಗೊಳ್ಳುವುದು ಖಚಿತವಾಗಿದೆ.
ಈ ಮೊದಲು ಕೇವಲ ಯುವ ದಸರಾ ಉದ್ಘಾಟನೆಗೆ ಮಾತ್ರ ಪಿ.ವಿ.ಸಿಂಧು ಅವರನ್ನು ಆಹ್ವಾನಿಸಲಾಗಿತ್ತು. ಇದೀಗ ಮನವಿಗೆ ಸ್ಪಂದಿಸಿರುವುದಾಗಿ ತಿಳಿದು ಬಂದಿದೆ.
'ಯುವ ದಸರಾ’ ಉದ್ಘಾಟಿಸಲು PV ಸಿಂಧುವನ್ನು ಆಹ್ವಾನಿಸಿದ ಸಂಸದ ಪ್ರತಾಪ್ ಸಿಂಹ
ಸಂಪ್ರದಾಯದಂತೆ ದಸರಾ ಉದ್ಘಾಟನೆಗೊಂಡ ದಿನವೇ ದಸರಾ ಕ್ರೀಡಾಕೂಟ ಉದ್ಘಾಟನೆ ಆಗುತ್ತದೆ. ಅಂದರೆ ಸೆ.29 ರಂದು ದಸರಾ ಕ್ರೀಡಾಕೂಟ ಉದ್ಘಾಟನೆ ಆಗಬೇಕಿತ್ತು. ಆದರೆ ಸಿಂಧು ಅವರು ಅ.1 ರಂದು ಆಗಮಿಸುವುದಾಗಿ ದಿನಾಂಕ ನೀಡಿರುವುದರಿಂದ ಅಂದೇ ಕ್ರೀಡಾಕೂಟ ಮತ್ತು ಯುವ ದಸರಾ ಉದ್ಘಾಟನೆ ಆಗಲಿದೆ.