ಮೂವರು ಮುಖಂಡರಿಗೆ ಬಿಜೆಪಿ ಗಾಳ

Published : Sep 20, 2019, 08:43 AM IST
ಮೂವರು ಮುಖಂಡರಿಗೆ ಬಿಜೆಪಿ ಗಾಳ

ಸಾರಾಂಶ

ಬಿಜಪಿ ಈಗ ಅಧಿಕಾರ ಪಡೆದುಕೊಳ್ಳಲು ಹೊಸ ಮಾರ್ಗವನ್ನು ಹುಡುಕುತ್ತಿದೆ. ಮೂವರು ಮುಖಂಡರಿಗೆ ಗಾಳ ಹಾಕಿದೆ. 

ಬೆಂಗಳೂರು [ಸೆ.20]:   ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರಲು ಮೇಯರ್‌ ಚುನಾವಣೆಗೆ ವಾರಕ್ಕೂ ಮುನ್ನವೇ ಪಕ್ಷೇತರ ಸದಸ್ಯರಿಗೆ ಗಾಳ ಹಾಕಿದೆ.

ಈ ಬಾರಿಯ ಮೇಯರ್‌ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರೇ ಗೆಲುವಿಗೆ ನಿರ್ಣಾಯಕರಾಗಿರುವುದರಿಂದ ಮೂವರು ಪಕ್ಷೇತರ ಸದಸ್ಯರನ್ನು ನಗರದ ಬಿಜೆಪಿ ಶಾಸಕರೊಬ್ಬರು ಅಜ್ಞಾನತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಕ್ಷೇತರ ಸದಸ್ಯರಾದ ಲಕ್ಷ್ಮೀ ನಾರಾಯಣ್‌ (ಗುಂಡಣ್ಣ), ರಮೇಶ್‌ ಹಾಗೂ ಆನಂದ್‌ ಅವರಿಗೆ ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಗಾಳ ಹಾಕಿ ಗೋವಾಗೆ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಪಕ್ಷೇತರ ಸದಸ್ಯರ ಮೊಬೈಲ್‌ ಫೋನ್‌ಗಳು ಸಂಪರ್ಕಕ್ಕೆ ದೊರೆಯದಿರುವುದು ಇದನ್ನು ಪುಷ್ಠಿಕರಿಸಿದೆ.

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!