ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾದಾಮಿ ಯೋಧ ಸಾವು

Suvarna News   | Asianet News
Published : Sep 09, 2021, 03:51 PM IST
ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾದಾಮಿ ಯೋಧ ಸಾವು

ಸಾರಾಂಶ

*   ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧ *   ಮರಾಠಾ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಚಿದಾನಂದ್ *   ಯೋಧನ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ   

ಬಾಗಲಕೋಟೆ(ಸೆ.09): ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧನೊಬ್ಬ ಮೃತಪಟ್ಟಿದ್ದಾರೆ. ಚಿದಾನಂದ್ ಹಲಕುರ್ಕಿ(25) ಎಂಬುವರೇ ಕಾವು ಕಡಿತದಿಂದ ಸಾವನ್ನಪ್ಪಿದ ಯೋಧ.  

ಮೃತಯೋಧ ಕಳೆದ 6 ವರ್ಷಗಳಿಂದ ಮರಾಠಾ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದ ಮೇಲಿದ್ದಾಗ ಹಾವು ಕಚ್ಚಿದ ಪರಿಣಾಮ ಚಿದಾನಂದ್ ಸಾವನ್ನಪ್ಪಿದ್ದಾರೆ. 

ಬಾದಾಮಿ ಯೋಧ ಅಮೃತಸರದಲ್ಲಿ ಸಾವು

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಯೋಧ ಚಿದಾನಂದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಜಮ್ಮು-ಕಾಶ್ಮೀರದಿಂದ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಶನಿವಾರ ತಲುಪುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. 
 

PREV
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!